ಲಕ್ಷ್ಮಿ ಬಾರಮ್ಮ ಧಾರಾವಾಹಿ ಮೂಲಕ ಖ್ಯಾತಿ ಪಡೆದಿರುವ ನಟ ಚಂದು ಗೌಡ ತಮ್ಮ ಮುದ್ದಾದ ಮಗಳ ಪೋಟೋ ರಿವೀಲ್ ಮಾಡಿದ್ದಾರೆ. ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. ಚಂದು ಗೌಡ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟ. ಇವರು ಕಿರುತೆರೆಯ `ಲಕ್ಷ್ಮೀ ಬಾರಮ್ಮ' ಧಾರಾವಾಹಿಯಿಂದ ಪ್ರಸಿದ್ಧಿ ಪಡೆದರು. ನಟ ಚಂದು ಗೌಡ ಅವರು ತಮ್ಮ ಮುದ್ದು ಮಗಳನ್ನು ಜನರಿಗೆ ಪರಿಚಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. 2020ರಲ್ಲಿ ನಟ ಚಂದು ಗೌಡ ಅವರು ತಮ್ಮ ಗೆಳತಿ ಶಾಲಿನಿ ಜೊತೆ ಮದುವೆ ಆಗಿದ್ದರು. ಆಗಸ್ಟ್ 2022ರಲ್ಲಿ ಮುದ್ದಾದ ಹೆಣ್ಣು ಮಗು ಜನಿಸಿತ್ತು. ಈಗ ಆ ಫೋಟೋ ರಿವೀಲ್ ಮಾಡಿದ್ದಾರೆ. ಕವಿತಾ ನಾಗಾರಾಜ್ ಫೋಟೋಗ್ರಾಫಿಯಲ್ಲಿ ಈ ಫೋಟೋಶೂಟ್ ಮಾಡಿಸಿದ್ದಾರೆ. ಫೋಟೋಗಳು ತುಂಬಾ ಮುದ್ದಾಗಿವೆ. ಮಗು ಸಹ ಮುದ್ದಾಗಿದೆ. ಮುದ್ದಾದ ಮಗು ಫೋಟೋ ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಸೂಪರ್, ಸೋ ಕ್ಯೂಟ್ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ. ಮಗು ಇಷ್ಟು ಮುದ್ದಾಗಿದೆ. ಮಗಳ ಹೆಸರೇನು ಎಂದು ಅಭಿಮಾನಿಗಳು ಕೇಳಿದ್ದಾರೆ. ಆದ್ರೆ ಚಂದು ಗೌಡ ಅವರು ಇನ್ನೂ ಹೆಸರು ಹೇಳಿಲ್ಲ. ನಟ ಚಂದು ಗೌಡ ಅವರು ತ್ರಿನಯನಿ ಧಾರಾವಾಹಿ ಮೂಲಕವೂ ಖ್ಯಾತಿ ಪಡೆದಿದ್ದಾರೆ. ಅಲ್ಲದೇ `ಅಟೆಂಪ್ಟು ಟು ಮರ್ಡರ್, ,`ಕೃಷ್ಣ ಗಾಮೆರ್ಂಟ್ಸ್' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.