ಸಿನಿಮಾ ಇಂಡಸ್ಟ್ರಿಯಲ್ಲಿ ಒಳ್ಳೆ ಹೆಸರು ಮಾಡಿರುವ ಅಮಾನಿ, ಹೆಚ್ಚಾಗಿ ಗೃಹಿಣಿ ಪಾತ್ರದಲ್ಲೇ ಕಾಣಿಸಿಕೊಂಡಿದ್ದಾರೆ. ಅನೇಕ ಸಿನಿಮಾಗಳಲ್ಲಿ ತಮ್ಮ ಅಭಿನಯದ ಮೂಲಕವೇ ಪ್ರಭಾವ ಬೀರಿದ್ದಾರೆ. ಹೆಂಡತಿ ಎಂದರೆ ಹೀಗಿರಬೇಕು ಎನ್ನುವಂತೆ ನಟಿಸಿದ್ದಾರೆ. ಆಮಾನಿ ಅವರು ಮಿಸ್ಟರ್ ಪೆಲ್ಲಂ, ಶುಭಲಗ್ನಂ, ಜಂಬಲಕಿಡಿ ಪಂಬ, ಶುಭ ಸಂಕಲ್ಪಂ ಮುಂತಾದ ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.