Sai Pallavi: ಸಾಯಿ ಪಲ್ಲವಿ ಪರ ನಿಂತ ಪ್ರಕಾಶ್ ರಾಜ್, ಮಾನವೀಯತೆ ಮೊದಲು ಎಂದ ಬಹುಭಾಷಾ ನಟ

ಇತ್ತೀಚಿನ ವಿವಾದದಲ್ಲಿ ಸಾಯಿ ಪಲ್ಲವಿಗೆ ಬೆಂಬಲ ವ್ಯಕ್ತಪಡಿಸಿ ಪ್ರಕಾಶ್ ರಾಜ್ ಮಾಡಿದ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ನೆಟಿಜನ್‌ಗಳು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

First published:

  • 17

    Sai Pallavi: ಸಾಯಿ ಪಲ್ಲವಿ ಪರ ನಿಂತ ಪ್ರಕಾಶ್ ರಾಜ್, ಮಾನವೀಯತೆ ಮೊದಲು ಎಂದ ಬಹುಭಾಷಾ ನಟ

    ಸಾಯಿ ಪಲ್ಲವಿ ಕೆಲ ದಿನಗಳ ಹಿಂದೆ ಹೇಳಿದ ವಿವಾದಾತ್ಮಕ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಆದರೆ ಅವರ ಸ್ಪಷ್ಟನೆ ನಂತರ ಹಿರಿಯ ನಟ ಪ್ರಕಾಶ್ ರಾಜ್ ಇದೀಗ ಸಾಯಿ ಪಲ್ಲವಿ ಪರ ನಿಂತಿದ್ದಾರೆ. ಅವರು ಮಾಡಿರುವ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರ್ಲ ಆಗುತ್ತಿದೆ.

    MORE
    GALLERIES

  • 27

    Sai Pallavi: ಸಾಯಿ ಪಲ್ಲವಿ ಪರ ನಿಂತ ಪ್ರಕಾಶ್ ರಾಜ್, ಮಾನವೀಯತೆ ಮೊದಲು ಎಂದ ಬಹುಭಾಷಾ ನಟ

    ಕೆಲ ದಿನಗಳಿಂದ ಸಾಯಿ ಪಲ್ಲವಿಗೆ ಸಂಬಂಧಿಸಿದ ವಿಚಾರವೊಂದು ಜನರಲ್ಲಿ ಹಾಟ್ ಟಾಪಿಕ್ ಆಗಿತ್ತು. ವಿರಾಟಪರ್ವದ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಸಾಯಿ ಪಲ್ಲವಿ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಧಾರ್ಮಿಕ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು.

    MORE
    GALLERIES

  • 37

    Sai Pallavi: ಸಾಯಿ ಪಲ್ಲವಿ ಪರ ನಿಂತ ಪ್ರಕಾಶ್ ರಾಜ್, ಮಾನವೀಯತೆ ಮೊದಲು ಎಂದ ಬಹುಭಾಷಾ ನಟ

    ವಿರಾಟಪರ್ವಂ ಪ್ರಚಾರ ಕಾರ್ಯಕ್ರಮದಲ್ಲಿ ಸಾಯಿಪಲ್ಲವಿ ಮಾತನಾಡಿ, ಕಾಶ್ಮೀರ ಫೈಲ್ಸ್ ಸಿನಿಮಾದಲ್ಲಿ ತೋರಿಸಿರುವ ಹಿಂಸಾಚಾರವು ಗೋರಕ್ಷಕ ಪಡೆಗಳು ನಡೆಸಿದ ದಾಳಿಗಳಲ್ಲಿ ಒಂದಾಗಿದೆ, ಯಾವುದೇ ಧರ್ಮ ಅಥವಾ ನಂಬಿಕೆಯ ಜನರು ಮಾನವೀಯತೆಯನ್ನು ಮರೆಯುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು. ಇದಕ್ಕೆ ಭಜರಂಗದಳ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಮಸ್ಯೆ ಪೊಲೀಸ್ ಠಾಣೆಯವರೆಗೂ ಹೋಗಿತ್ತು.

    MORE
    GALLERIES

  • 47

    Sai Pallavi: ಸಾಯಿ ಪಲ್ಲವಿ ಪರ ನಿಂತ ಪ್ರಕಾಶ್ ರಾಜ್, ಮಾನವೀಯತೆ ಮೊದಲು ಎಂದ ಬಹುಭಾಷಾ ನಟ

    ಈ ಹಿನ್ನೆಲೆಯಲ್ಲಿ ಸಾಯಿ ಪಲ್ಲವಿ ಪ್ರತಿಕ್ರಿಯಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ಬಗ್ಗೆ ವಿವರಣೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ಸಂದೇಶದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

    MORE
    GALLERIES

  • 57

    Sai Pallavi: ಸಾಯಿ ಪಲ್ಲವಿ ಪರ ನಿಂತ ಪ್ರಕಾಶ್ ರಾಜ್, ಮಾನವೀಯತೆ ಮೊದಲು ಎಂದ ಬಹುಭಾಷಾ ನಟ

    ಈ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ, ಎಲ್ಲರ ಪ್ರಾಣವೂ ಮುಖ್ಯ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ. ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆ ಮಹಾಪಾಪ ಎಂದಿದ್ದಾರೆ. ತನ್ನ ಮಾತುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಕೆಲವರು ವಿವಾದ ಹುಟ್ಟು ಹಾಕಿದ್ದಾರೆ ಎಂದಿದ್ದಾರೆ.

    MORE
    GALLERIES

  • 67

    Sai Pallavi: ಸಾಯಿ ಪಲ್ಲವಿ ಪರ ನಿಂತ ಪ್ರಕಾಶ್ ರಾಜ್, ಮಾನವೀಯತೆ ಮೊದಲು ಎಂದ ಬಹುಭಾಷಾ ನಟ

    ಈ ಹಿನ್ನೆಲೆಯಲ್ಲಿ ಸಾಯಿ ಪಲ್ಲವಿ ನೀಡಿದ ವಿವರಣೆಗೆ ಪ್ರಕಾಶ್ ರಾಜ್ ಪ್ರತಿಕ್ರಿಯಿಸಿದ್ದಾರೆ. ಮಾನವೀಯತೆಯೇ ಮೊದಲು ಹಾಗಾದರೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಕೆಲವೇ ಸೆಕೆಂಡುಗಳಲ್ಲಿ ವೈರಲ್ ಆಗಿದೆ.

    MORE
    GALLERIES

  • 77

    Sai Pallavi: ಸಾಯಿ ಪಲ್ಲವಿ ಪರ ನಿಂತ ಪ್ರಕಾಶ್ ರಾಜ್, ಮಾನವೀಯತೆ ಮೊದಲು ಎಂದ ಬಹುಭಾಷಾ ನಟ

    ವಿರಾಟಪರ್ವಂ, ಮುಖ್ಯವಾಗಿ ತೆಲಂಗಾಣ ಪ್ರದೇಶದಲ್ಲಿ 1980 ಮತ್ತು 1990ರ ದಶಕದ ಅಂದಿನ ಸಾಮಾಜಿಕ ಪರಿಸ್ಥಿತಿಗಳನ್ನು ಆಧರಿಸಿದ ರಾಜಕೀಯ ಥ್ರಿಲ್ಲರ್ ಚಲನಚಿತ್ರವಾಗಿದೆ. ಅದರ ಭಾಗವಾಗಿ ಆಗಿನ ಏಜೆಂಟರ ವ್ಯವಸ್ಥೆಯನ್ನು ನಿರ್ದೇಶಕ ವೇಣು ಉಡುಗುಲ ಈ ಚಿತ್ರದಲ್ಲಿ ತೋರಿಸಿದ್ದಾರೆ.

    MORE
    GALLERIES