Actor Anant Nag: ಬಿಜೆಪಿ ಪಕ್ಷ ಸೇರಲಿಲ್ಲ ಅನಂತ್ ನಾಗ್; ಕೊನೇ ಕ್ಷಣದಲ್ಲಿ ನಿರ್ಧಾರ ಬದಲಿಸಿದ್ರಾ ಹಿರಿಯ ನಟ?

ಹಿರಿಯ ನಟ, ಮಾಜಿ ಸಚಿವ ಅನಂತ್ ನಾಗ್ ಇಂದು (ಫೆಬ್ರವರಿ 22) ಬಿಜೆಪಿ ಪಕ್ಷ ಸೇರುತ್ತಾರೆ ಎನ್ನಲಾಗಿತ್ತು. ಸೇರ್ಪಡೆ ಕಾರ್ಯಕ್ರಮ ಕೂಡ ಫಿಕ್ಸ್ ಆಗಿತ್ತು. ಆದ್ರೆ ಅನಂತ್ ನಾಗ್ ಬಿಜೆಪಿ ಪಕ್ಷ ಸೇರುವ ಕಾರ್ಯಕ್ರಮಕ್ಕೆ ಗೈರಾಗಿದ್ದು, ತೀವ್ರ ಕುತೂಹಲ ಕೆರಳಿಸಿದೆ.

First published:

 • 18

  Actor Anant Nag: ಬಿಜೆಪಿ ಪಕ್ಷ ಸೇರಲಿಲ್ಲ ಅನಂತ್ ನಾಗ್; ಕೊನೇ ಕ್ಷಣದಲ್ಲಿ ನಿರ್ಧಾರ ಬದಲಿಸಿದ್ರಾ ಹಿರಿಯ ನಟ?

  ಅನಂತ್ ನಾಗ್ ಪಕ್ಷ ಸೇರ್ಪಡೆಗೆಂದು ಬೆಂಗಳೂರಿನ ಕಚೇರಿಯಲ್ಲಿ ಮುಹೂರ್ತ ಫಿಕ್ಸ್ ಆಗಿತ್ತು. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆದ ಪಕ್ಷ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ಸೇರಿದ್ದಾರೆ. ಆದ್ರೆ, ಅನಂತ್ ನಾಗ್ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.

  MORE
  GALLERIES

 • 28

  Actor Anant Nag: ಬಿಜೆಪಿ ಪಕ್ಷ ಸೇರಲಿಲ್ಲ ಅನಂತ್ ನಾಗ್; ಕೊನೇ ಕ್ಷಣದಲ್ಲಿ ನಿರ್ಧಾರ ಬದಲಿಸಿದ್ರಾ ಹಿರಿಯ ನಟ?

  ಕಾರ್ಯಕ್ರಮಕ್ಕೆ ನಟ ಅನಂತ್ ನಾಗ್ ಬರ್ತಾರೆ ಎಂದು  ಘೋಷಿಸಿದ್ರು. ಈಗ ಬರ್ತಾರಾ ಆಗ ಬರ್ತಾರೆ ಎಂದು ಕಾದು ಕುಳಿತ್ತಿದ್ದರು, ಆದ್ರೆ ಕೊನೆ ಕ್ಷಣದಲ್ಲಿ ಅವರು ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಬರಲಿಲ್ಲ. ಅನಂತ್ ಗೈರು ಇದೀಗ ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

  MORE
  GALLERIES

 • 38

  Actor Anant Nag: ಬಿಜೆಪಿ ಪಕ್ಷ ಸೇರಲಿಲ್ಲ ಅನಂತ್ ನಾಗ್; ಕೊನೇ ಕ್ಷಣದಲ್ಲಿ ನಿರ್ಧಾರ ಬದಲಿಸಿದ್ರಾ ಹಿರಿಯ ನಟ?

  ಜನತಾ ದಳ ಪಕ್ಷದಿಂದ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಅನಂತ್ ನಾಗ್ 2004 ಎಲೆಕ್ಷನ್ ಬಳಿಕ ರಾಜ್ಯ ರಾಜಕೀಯದಿಂದ ದೂರ ಉಳಿದಿದ್ದರು. ಇದೀಗ ವಿಧಾನಸಭಾ ಎಲೆಕ್ಷನ್ ಕೂಡ ಹತ್ತಿರ ಬರ್ತಿದ್ದಂತೆ ರಾಜಕೀಯದಲ್ಲಿ ಅನಂತ್ ನಾಗ್ ಆಸಕ್ತಿ ತೋರಿದ್ದಾರೆ.

  MORE
  GALLERIES

 • 48

  Actor Anant Nag: ಬಿಜೆಪಿ ಪಕ್ಷ ಸೇರಲಿಲ್ಲ ಅನಂತ್ ನಾಗ್; ಕೊನೇ ಕ್ಷಣದಲ್ಲಿ ನಿರ್ಧಾರ ಬದಲಿಸಿದ್ರಾ ಹಿರಿಯ ನಟ?

  ಮತ್ತೆ ರಾಜಕೀಯದ ಅಖಾಡಕ್ಕೆ ಧುಮುಕಲಿರುವ ಅನಂತ್ ನಾಗ್ ಬಿಜೆಪಿ ಪಕ್ಷ ಸೇರಲು ಸಜ್ಜಾಗಿದ್ರು. ಆದ್ರೆ ಬಿಜೆಪಿ ಪಕ್ಷ ಸೇರಲು ಅನಂತ್ ಕಾರ್ಯಕ್ರಮಕ್ಕೆ ಯಾಕೆ ಬರಲಿಲ್ಲ ಎನ್ನುವ ಪ್ರಶ್ನೆ ಇದೀಗ ಜನರನ್ನು ಕಾಡ್ತಿದೆ. ಅನಂತ್ ನಾಗ್ ಬಿಜೆಪಿ ಸೇರ್ಪಡೆ ನಿರ್ಧಾರದಿಂದ ಕೊನೆ ಕ್ಷಣದಲ್ಲಿ ಕೈ ಬಿಟ್ಟಿದ್ದಾರೆ ಎನ್ನುವ ಮಾತುಗಳು ಸಹ ಕೇಳಿ ಬರ್ತಿದೆ. ಯಾವ ಕಾರಣಕ್ಕೆ ಅನಂತ್ ನಾಗ್ ಕಾರ್ಯಕ್ರಮಕ್ಕೆ ಬರಲಿಲ್ಲ ಎನ್ನುವ ಮಾಹಿತಿ ಹೊರಬಿದ್ದಿಲ್ಲ.

  MORE
  GALLERIES

 • 58

  Actor Anant Nag: ಬಿಜೆಪಿ ಪಕ್ಷ ಸೇರಲಿಲ್ಲ ಅನಂತ್ ನಾಗ್; ಕೊನೇ ಕ್ಷಣದಲ್ಲಿ ನಿರ್ಧಾರ ಬದಲಿಸಿದ್ರಾ ಹಿರಿಯ ನಟ?

  ಆದ್ರೆ ಅನಂತ್ ನಾಗ ಒಂದು ವಾರದ ಬಳಿಕ ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಅಲ್ಲದೇ ಅನಂತ್ ನಾಗ್ ಗೈರಾಗುವ ಮೂಲಕ ಬಿಜೆಪಿ ಸೇರ್ಪಡೆಯಿಂದ ದೂರ ಉಳಿದರಾ? ಎಂಬ ಪ್ರಶ್ನೆ ಕೂಡ ಮೂಡಿದೆ.

  MORE
  GALLERIES

 • 68

  Actor Anant Nag: ಬಿಜೆಪಿ ಪಕ್ಷ ಸೇರಲಿಲ್ಲ ಅನಂತ್ ನಾಗ್; ಕೊನೇ ಕ್ಷಣದಲ್ಲಿ ನಿರ್ಧಾರ ಬದಲಿಸಿದ್ರಾ ಹಿರಿಯ ನಟ?

  ಮುಂದಿನ ವಾರ ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಅನಂತ್ ನಾಗ ಬಿಜೆಪಿ ಸೇರ್ಪಡೆಯಾಗಲಿದ್ದರಂತೆ. ಫೆ.27ರಂದು ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಆಗಮಿಸಲಿದ್ದಾರೆ.

  MORE
  GALLERIES

 • 78

  Actor Anant Nag: ಬಿಜೆಪಿ ಪಕ್ಷ ಸೇರಲಿಲ್ಲ ಅನಂತ್ ನಾಗ್; ಕೊನೇ ಕ್ಷಣದಲ್ಲಿ ನಿರ್ಧಾರ ಬದಲಿಸಿದ್ರಾ ಹಿರಿಯ ನಟ?

  ಶಿವಮೊಗ್ಗಕ್ಕೆ ನರೇಂದ್ರ ಮೋದಿ ಆಗಮಿಸುತ್ತಿದ್ದು, ಈ ವೇಳೆ ಅನಂತ್ ನಾಗ್ ಬಿಜೆಪಿ ಸೇರ್ಪಡೆಯಾಗುತ್ತಾರಾ ಎನ್ನುವ ಪ್ರಶ್ನೆಗಳು ಹುಟ್ಟಿಗೊಂಡಿದೆ. ಸ್ಟಾರ್ ನಟರಾದ ಅನಂತ್ ನಾಗ್ ಬಿಜೆಪಿ ಸೇರ್ಪಡೆ ಆಗುತ್ತಿದ್ದು, ರಾಷ್ಟ್ರೀಯ ನಾಯಕರ ಸಮ್ಮುಖದಲ್ಲೇ ಪಕ್ಷ ಸೇರಲಿದ್ದಾರೆ ಎನ್ನಲಾಗ್ತಿದೆ.

  MORE
  GALLERIES

 • 88

  Actor Anant Nag: ಬಿಜೆಪಿ ಪಕ್ಷ ಸೇರಲಿಲ್ಲ ಅನಂತ್ ನಾಗ್; ಕೊನೇ ಕ್ಷಣದಲ್ಲಿ ನಿರ್ಧಾರ ಬದಲಿಸಿದ್ರಾ ಹಿರಿಯ ನಟ?

  ಸಿನಿಮಾ ನಟರು ರಾಜಕೀಯದ ಕಡೆ ಮುಖ ಮಾಡೋದು ಮೊದಲೇನು ಅಲ್ಲ. ಆದ್ರೆ ಅನಂತ್ ನಾಗ್ ಬಿಜೆಪಿ ಸೇರಲಿದ್ದಾರೆ ಎನ್ನುವ ಹೊರಬೀಳುತ್ತಿದ್ದಂತೆಯೇ ರಾಜ್ಯದಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಗಳು ಸಹ ಶುರುವಾಗಿದೆ.

  MORE
  GALLERIES