Sathish Ninasam: ಸತೀಶ್ ನೀನಾಸಂ ಸಿನಿ ಜೀವನದಲ್ಲಿ ನಿನ್ನೆ ಮರೆಯಲಾಗದ ದಿನವಂತೆ..!
Dasara: ಲಾಕ್ಡೌನ್ನಲ್ಲಿ ಯೂಟ್ಯೂಬ್ನಲ್ಲಿ ವಿಭಿನ್ನವಾದ ಕಾರ್ಯಕ್ರಮ ಮಾಡುವ ಮೂಲಕ ಕಾಲ ಕಳೆಯುತ್ತಿದ್ದ ಸತೀಶ್ ನೀನಾಸಂತ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಂತೆಯೇ ಈ ಅನ್ಲಾಕ್ ಸಮಯದಲ್ಲಿ ಅವರ ಜೀವನದಲ್ಲಿಮರೆಯಲಾರದ ಘಟನೆಗಳು ನಡೆಯುತ್ತಿವೆಯಂತೆ. (ಚಿತ್ರಗಳು ಕೃಪೆ: ಸತೀಶ್ ನೀನಾಸಂ ಟ್ವಿಟರ್ ಖಾತೆ)
ಸತೀಶ್ ನೀನಾಸಂ ಸದ್ಯ ಮೈಸೂರಿನಲ್ಲಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
2/ 12
ಹರಿಪ್ರಿಯಾ ನಾಯಕಿಯಾಗಿ ನಟಿಸುತ್ತಿರುವ ಪೆಟ್ರೋಮ್ಯಾಕ್ಸ್ ಸಿನಿಮಾದ ಚಿತ್ರೀಕರಣದ ಬರದಿಂದ ಸಾಗುತ್ತಿದೆ.
3/ 12
ಇದರ ನಡುವೆಯೇ ಅವರ ಬಹು ನಿರೀಕ್ಷಿತ ಸಿನಿಮಾ ದಸರಾ ಚಿತ್ರದ ಚಿತ್ರೀಕರಣಕ್ಕೂ ಕಿಕ್ ಸ್ಟಾರ್ಟ್ ಸಿಕ್ಕಿದೆ.
4/ 12
ಇತ್ತೀಚೆಗಷ್ಟೆ ರಚಿತಾ ರಾಮ್ ಜೊತೆಯಾಗಿರುವ ಮ್ಯಾಟ್ನಿ ಹಾಗೂ ಹರಿಪ್ರಿಯಾ ಅವರೊಂದಿಗೆ ನಟಿಸುತ್ತಿರುವ ಪೆಟ್ರೋಮ್ಯಾಕ್ಸ್ ಸಿನಿಮಾಗಳ ಚಿತ್ರೀಕರಣ ಒಂದೇ ದಿನ ಆರಂಭವಾಗಿತ್ತು.
5/ 12
ಈಗ ಈ ಎರಡು ಸಿನಿಮಾಗಳ ಜೊತೆಗೆ ದಸರಾ ಸಹ ಸೇರಿಕೊಂಡಿದೆ. ಈ ಮೂರು ಸಿನಿಮಾಗಳ ಚಿತ್ರೀಕರಣ ಏಕ ಕಾಲದಲ್ಲಿ ನಡೆಯುತ್ತಿದೆ.
6/ 12
ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಸತೀಶ್ ನೀನಾಸಂ ಖುಷಿಯಿಂದ ಹಂಚಿಕೊಂಡಿದ್ದಾರೆ.
7/ 12
ಇಂದು ನನ್ನ ವೃತ್ತಿ ಜೀವನದಲ್ಲಿ ಮರೆಯಲಾಗದ ದಿನ. ನನ್ನ ಮೂರು ಚಿತ್ರಗಳ, ಚಿತ್ರೀಕರಣ ಒಂದೇ ದಿನದಲ್ಲಿ ನಡೆಯುತ್ತಿದೆ ನಟ ಸತೀಶ್ ನಿನ್ನೆ ಪೋಸ್ಟ್ ಮಾಡಿದ್ದಾರೆ.
8/ 12
'ಮ್ಯಾಟ್ನಿ' ಮತ್ತು 'ದಸರಾ' ಬೆಂಗಳೂರಿನಲ್ಲಿ ಚಿತ್ರೀಕರಿಸುತ್ತಿದ್ದರೇ, ಮೈಸೂರಿನಲ್ಲಿ 'ಪೆಟ್ರೊಮ್ಯಾಕ್ಸ್' ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ಸೌಭಾಗ್ಯ ದೊರಕಲು ಇಷ್ಟು ವರ್ಷದ ನಿಮ್ಮ ಪ್ರೀತಿ ಕಾರಣ. ಲವ್ ಯೂ ಆಲ್... ಎಂದು ಖುಷಿ ಹಂಚಿಕೊಂಡಿದ್ದಾರೆ ಈ ನಟ.
9/ 12
ಮನೋಹರ್ ಕಾಂಪಲ್ಲಿ, ರಚಿತಾ ರಾಮ್ ಹಾಗೂ ಸತೀಶ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಸಿನಿಮಾ ಮ್ಯಾಟ್ನಿ.
10/ 12
ದಸರಾ ಸಿನಿಮಾವನ್ನು ಅರವಿಂದ್ ಶಾಸ್ತ್ರಿ ನಿರ್ದೇಶಿಸುತ್ತಿದ್ದಾರೆ.
11/ 12
ದಸರಾ ಸಿನಿಮಾದಲ್ಲಿ ಶರ್ಮಿಳಾ ಮಾಂಡ್ರೆ ಹಾಗೂ ರುಕ್ಮಿಣಿ ವಿಜಯ್ ಕುಮಾರ್ ಸತೀಶ್ ಅವರಿಗೆ ಜೊತೆಯಾಗಿದ್ದಾರೆ.