ನೀನಾಸಂ ಸತೀಶ್ ಅವರ ಹುಟ್ಟುಹಬ್ಬ ನಾಳೆ. ಆದರೆ ಈ ಸಲವೂ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಕಳೆದ ಸಲ ಲಾಖ್ಡೌನ್ನಿಂದಾಗಿ ಅವರು ಬರ್ತ್ ಡೇ ಸೆಲಬ್ರೇಷನ್ ಇಲ್ಲ ಎಂದಿದ್ದರು. ಈ ಸಲ ಸ್ನೇಹಿತ ಸಂಚಾರಿ ವಿಜಯ್ ಅವರನ್ನು ಕಳೆದುಕೊಂಡ ನೋವಿನಲ್ಲಿದ್ದು, ಅದಕ್ಕೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದಿದ್ದಾರೆ. (ಚಿತ್ರಗಳು ಕೃಪೆ: ಸತೀಶ್ ನೀನಾಸಂ ಇನ್ಸ್ಟಾಗ್ರಾಂ ಖಾತೆ)
ಸಂಚಾರಿ ವಿಜಯ್ ಅವರ ಅಗಲಿಕೆಯಿಂದ ಇನ್ನೂ ಅವರ ಕುಟುಂಬದವರು ಹಾಗೂ ಸ್ನೇಹಿತರ ಬಳಗ ಹೊರ ಬಂದಿಲ್ಲ. ವಿಜಯ್ ಅವರು ಆಸ್ಪತ್ರೆಗೆ ದಾಖಲಾದಾಗಿನಿಂದ ಅಂತ್ಯಸಂಸ್ಕಾರದ ವರೆಗೆ ಸತೀಶ್ ನೀನಾಸಂ ಜೊತೆಯಲ್ಲೇ ಇದ್ದರು.
2/ 10
ಸ್ನೇಹಿತನ ಅಗಲಿಕೆಯಿಂದಾಗಿ ಇನ್ನೂ ನೋವಿನಿಂದ ಹೊರ ಬಾರದ ಅವರು ಈ ಸಲ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
3/ 10
ವಿಜಿ ಇಲ್ಲದ ಈ ಸಂದರ್ಭದಲ್ಲಿ ತುಂಬ ನೋವಿನಲ್ಲಿ ನನ್ನ ಗೆಳೆಯರ ಬಳಗವಿದೆ. ಹಾಗಾಗಿ ಈ ಸಲ ಅಂದರೆ ನಾಳೆ ನನ್ನ ಹುಟ್ಟುಹಬ್ಬದ ಆಚರಣೆ ಹಾಗೂ ಯಾವುದೇ ಸಂಭ್ರಮಗಳಿರುವುದಿಲ್ಲ ಎಂದು ಇನ್ಸ್ಟಾಗ್ರಾಂ ಸ್ಟೋರೀಸ್ನಲ್ಲಿ ಹಂಚಿಕೊಂಡಿದ್ದಾರೆ.
4/ 10
ಸತೀಶ್ ನೀನಾಸಂ ಹುಟ್ಟುಹಬ್ಬದಂದು ಅವರ ಬಹುನಿರೀಕ್ಷಿತ ಸಿನಿಮಾ ಪೆಟ್ರೋಮ್ಯಾಕ್ಸ್ ಟೀಸರ್ ರಿಲೀಸ್ ಮಾಡಲು ನಿರ್ಧರಿಸಲಾಗಿತ್ತು.
5/ 10
ಆದರಎ ಈಗ ಪೆಟ್ರೋಮ್ಯಾಕ್ಸ್ ಟೀಸರ್ ರಿಲೀಸ್ ದಿನಾಂಕವನ್ನೂ ಮುಂದೂಡಲಾಗಿದೆ.
6/ 10
ಪೆಟ್ರೋಮ್ಯಾಕ್ಸ್ ಸಿನಿಮಾದಲ್ಲಿ ಸತೀಶ್ ನೀನಾಸಂ ಅವರಿಗೆ ಹರಿಪ್ರಿಯಾ ಅವರು ನಾಯಕಿಯಾಗಿ ನಟಿಸಿದ್ದಾರೆ.
7/ 10
ನಟ ಸತೀಶ್ ನೀನಾಸಂ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ.
8/ 10
ನಟ ಸತೀಶ್ ನೀನಾಸಂ ಸದ್ಯಕ್ಕೆ ಪೆಟ್ರೋಮ್ಯಾಕ್ಸ್ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ.