ಸತೀಶ್ ನಿನಾಸಂ ಅಭಿನಯದ ಬಹು ನಿರೀಕ್ಷೆಯ 'ಗೋದ್ರಾ' ಚಿತ್ರ ನಾನಾ ಕಾರಣಗಳಿಂದ ಭಾರೀ ಸದ್ದು ಮಾಡುತ್ತಿದೆ. 'ಅಯೋಗ್ಯ' ಚಿತ್ರ ಯಶಸ್ವಿ ಪ್ರದರ್ಶನ ಕಂಡ ಬಳಿಕ ನೀನಾಸಂ ಸತೀಶ್ 'ಗೋದ್ರಾ' ಚಿತ್ರದಲ್ಲಿ ನಟಿಸಿದ್ದಾರೆ. 'ಗೋದ್ರಾ' ಚಿತ್ರದಲ್ಲಿ ನಟಿಯಾಗಿ ಶ್ರದ್ಧಾ ಶ್ರೀನಾಥ್ ಕಾಣಿಸಿಕೊಂಡಿದ್ದಾರೆ. ಜನವರಿ 13 ಅಂದರೆ ನಾಳೆ 'ಗೋದ್ರಾ' ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಲಿದೆ. ಗೋದ್ರಾ ಚಿತ್ರದ ಟ್ರೇಲರ್ ಇದೇ ಜನವರಿ 17ಕ್ಕೆ ರಿಲೀಸ್ ಆಗಲಿದೆ. ಜಾಕೋರ್ ವರ್ಗೀಸ್ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಕೆ.ಎಸ್.ನಂದೀಶ್ ಗೋದ್ರಾ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. 'ಗೋದ್ರಾ' ಚಿತ್ರದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದ್ದು, ಅತಿ ಶೀಘ್ರದಲ್ಲೇ ತೆರೆಗೆ ಬರಲಿದೆ. ಕೇರಳ, ಛತ್ತೀಸ್ಗಢ, ಕರ್ನೂಲ್, ಸಕಲೇಶಪುರ, ಹಾಸನ ಹಾಗೂ ಬೆಂಗಳೂರಿನಲ್ಲಿ 'ಗೋದ್ರಾ' ಚಿತ್ರದ ಶೂಟಿಂಗ್ ಮಾಡಲಾಗಿದೆ.