ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಬಹುನಿರೀಕ್ಷಿತ ಚಿತ್ರ 'ಸರಿಲೇರು ನೀಕೆವ್ವರು' ಬಾಕ್ಸಾಫೀಸ್ನಲ್ಲಿ ಅಬ್ಬರಿಸುತ್ತಿದೆ. ಜನವರಿ 11 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಂಡಿದ್ದ ಈ ಸಿನಿಮಾ ಮೊದಲ ದಿನವೇ ದಾಖಲೆಯ ಕಲೆಕ್ಷನ್ ಮಾಡಿದೆ. ಪ್ರಿನ್ಸ್ ಮಹೇಶ್-ರಶ್ಮಿಕಾ ಮಂದಣ್ಣ ಜೋಡಿಯ ಮೋಡಿಗೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ತೆರೆಕಂಡಿರುವ ಎಲ್ಲಾ ಕೇಂದ್ರಗಳಲ್ಲೂ 'ಸರಿಲೇರು ನೀಕೆವ್ವರು' ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಪ್ರಿನ್ಸ್ ಮಹೇಶ್ ಅವರ ಆರ್ಮಿ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನು ಚಿತ್ರದ ಮೊದಲ ದಿನದ ಗಳಿಕೆಯು ಬಾಹುಬಲಿ 2 ಚಿತ್ರದ ಕಲೆಕ್ಷನ್ ರೆಕಾರ್ಡ್ ಅನ್ನು ಬ್ರೇಕ್ ಮಾಡಿ ಟಾಲಿವುಡ್ನಲ್ಲಿ ಹೊಸ ಇತಿಹಾಸ ಬರೆದಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣದಿಂದಲೇ ಚಿತ್ರವು ಮೊದಲ ದಿನ ಬರೋಬ್ಬರಿ 32 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಬಾಕ್ಸಾಫೀಸ್ ವರದಿಗಳು ಹೇಳಿವೆ. ಹಾಗೆಯೇ ಕರ್ನಾಟಕ ಸೇರಿದಂತೆ ಇತರೆ ಭಾಗಗಳಿಂದ 5 ಕೋಟಿಗೂ ಹೆಚ್ಚಿನ ಗಳಿಕೆ ಮಾಡಿಕೊಂಡಿದೆ ಎಂದು ಹೇಳಲಾಗಿದೆ. ಈ ಹಿಂದೆ ಬಾಹುಬಲಿ-2 ಚಿತ್ರವು ಟಾಲಿವುಡ್ನಲ್ಲಿ ಮೊದಲ 36 ಕೋಟಿ ಕಲೆಕ್ಷನ್ ಮಾಡಿತ್ತು. ಈ ದಾಖಲೆಯನ್ನು ಅಳಿಸಿ ಹಾಕಿರುವ 'ಸರಿಲೇರು ನೀಕೆವ್ವರು' ಭಾರತದಲ್ಲಿ 37 ಕ್ಕೂ ಅಧಿಕ ಕೋಟಿಗಳಿಸಿದೆ ಎಂದು ವರದಿಯೊಂದು ತಿಳಿಸಿದೆ. ಹಾಗೆಯೇ ವಿದೇಶಿ ಕಲೆಕ್ಷನ್ಗಳನ್ನು ಸೇರಿಸಿದರೆ ಚಿತ್ರದ ಮೊದಲ ದಿನದ ಒಟ್ಟಾರೆ ಗಳಿಕೆಯು 47 ಕೋಟಿ ಎಂದು ಅಂದಾಜು ಮಾಡಲಾಗಿದೆ. ಹಾಗೆಯೇ ಎರಡನೇ ದಿನದಲ್ಲೇ 50 ಕೋಟಿಯನ್ನು ದಾಟಿರುವ ಪ್ರಿನ್ಸ್ ಮಹೇಶ್ ಮತ್ತೊಮ್ಮೆ ಟಾಲಿವುಡ್ ಬಾಕ್ಸಾಫೀಸ್ ಕಿಂಗ್ ಆಗಿ ಮರೆಯುವತ್ತ ಸಾಗಿದ್ದಾರೆ.