Sara Tendulkar: ಥೈಲ್ಯಾಂಡ್ ಬೀದಿಗಳಲ್ಲಿ ಸಾರಾ ಸುತ್ತಾಟ, ಸಚಿನ್ ಮಗಳ ಲುಕ್ಗೆ ಅಭಿಮಾನಿಗಳು ಫಿದಾ
ಪದವಿ ಮುಗಿಸಿದ ಸಾರಾ, ಆಗಾಗ ವಿದೇಶ ಪ್ರವಾಸ ಮಾಡುತ್ತಿರುತ್ತಾರೆ. ಸಾರಾ ತೆಂಡೂಲ್ಕರ್ ಸಿನಿಮಾ ರಂಗಕ್ಕೆ ಕಾಲಿಟ್ಟಿಲ್ಲವಾದರೂ ಮಾಡೆಲಿಂಗ್ಗೆ ಪದಾರ್ಪಣೆ ಮಾಡಿದ್ದಾರೆ. ಸಾರಾ, ಜನಪ್ರಿಯ ಬಟ್ಟೆಗಳ ಬ್ರ್ಯಾಂಡ್ನ ಜಾಹೀರಾತಿನಲ್ಲಿ ನಟಿಸಿದ್ದಾರೆ. ಸದ್ಯ ಥಾಯ್ಲೆಂಡ್ನಲ್ಲಿ ಸಾರಾ ಸಮಯ ಕಳೆಯುತ್ತಿದ್ದಾರೆ.
ಕ್ರಿಕೆಟ್ ದೇವರು ಸಚಿನ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಸದ್ಯ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ಹೌದು, ಲಂಡನ್ನಲ್ಲಿ ಮೆಡಿಸಿನ್ ಮುಗಿಸಿರುವ ಸಾರಾ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸಕ್ರೀಯರಾಗಿದ್ದಾರೆ. ಅಲ್ಲದೇ ತಮ್ಮ ಇನ್ಸ್ಟಾಗ್ರಾಮ್ ಫೋಟೋಗಳಿಂದ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ.
2/ 7
ಸದ್ಯ ಈ ಸಾರಾ ರಜಾ ಕಳೆಯುತ್ತಿದ್ದು, ಸ್ನೇಹಿತರೊಂದಿಗೆ ಥೈಯ್ಲೆಂಡ್ಗೆ ಹಾರಿರುವ ಸಾರಾ ತೆಂಡೂಲ್ಕರ್, ಕೊಹ್ ಸಮುಯಿ ಬೀಚ್ ರೆಸಾರ್ಟ್ನಲ್ಲಿ ಮೋಜು ಮಾಡುತ್ತಿದ್ದಾರೆ. ಇದೀಗ ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.
3/ 7
ಲಂಡನ್ ಕಾಲೇಜ್ ಯೂನಿವರ್ಸಿಟಿಯಲ್ಲಿ ಎಂಬಿಬಿಎಸ್ ಪದವಿ ಪಡೆದಿರುವ ಸಾರಾ, ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಸದಾ ತಮ್ಮ ಫೋಟೋಗಳನ್ನು ಶೇರ್ ಮಾಡುತ್ತಾ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರುತ್ತಾರೆ.
4/ 7
ಸಾರಾ ತೆಂಡೂಲ್ಕರ್ ಸೌಂದರ್ಯಕ್ಕೆ ಮನಸೋತ ಬಾಲಿವುಡ್ ನ ಕೆಲ ನಿರ್ದೇಶಕರು, ನಿರ್ಮಾಪಕರು ಸಚಿನ್ ಮಗಳನ್ನು ನಾಯಕಿಯಾಗಿ ಪರಿಚಯಿಸುವ ಪ್ರಯತ್ನ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.
5/ 7
ಇದರ ನಡುವೆ ಸಾರಾ ತೆಂಡೂಲ್ಕರ್ ಸದ್ಯ ಜನಪ್ರಿಯ ಬಟ್ಟೆ ಬ್ರಾಂಡ್ಗಾಗಿ ಮಾಡೆಲಿಂಗ್ ಮಾಡುವ ಮೂಲಕ ರಂಗಿನ ಲೋಕಕ್ಕೆ ಕಾಲಿಟ್ಟಿದ್ದಾರೆ. ನಟಿಯರಾದ ಬನಿತಾ ಸಂಧು ಮತ್ತು ತಾನಿಯಾ ಶ್ರಾಪ್ನೆಲ್ ಅವರೊಂದಿಗೆ ಪ್ರಚಾರದ ವೀಡಿಯೊದಲ್ಲಿ ಕಾಣಿಸಿಕೊಳ್ಳುವ ಮೂಲಕ ಮೆಚ್ಚುಗೆ ಪಡೆದ್ದಿದ್ದಾರೆ.
6/ 7
ಸದ್ಯದಲ್ಲೇ ಸಾರಾ ತೆಂಡೂಲ್ಕರ್ ನಾಯಕಿಯಾಗಿ ಬಾಲಿವುಡ್ ಗೆ ಎಂಟ್ರಿ ಕೊಡಬಹುದು ಎಂಬ ಮಾತು ಬೀ ಟೌನ್ ನಲ್ಲಿ ಕೇಳಿಬರುತ್ತಿದೆ. ಸಾರಾ ತೆಂಡೂಲ್ಕರ್ ನಟನೆಯಲ್ಲಿ ಆಸಕ್ತಿ ಹೊಂದಿದ್ದಾರೆಂದು ವರದಿಯಾಗಿದೆ. ಇದಕ್ಕಾಗಿ ಸಾರಾ ಈಗಾಗಲೇ ನಟನೆ ತರಗತಿಗಳಿಗೆ ಹಾಜರಾಗುತ್ತಿದ್ದಾರಂತೆ.
7/ 7
ಇನ್ನು, ಸಾರಾ ಅವರು ತಮ್ಮದೇ ಆದ ಸೌಂಧರ್ಯದಿಂದ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಅಲ್ಲದೇ ಬಾಲಿವುಡ್ ವಲಯಲಯಕ್ಕೂ ಪ್ರವೇಶಿಸಲು ಸಚಿನ್ ಪುತ್ರಿ ಕಾತುರಳಾಗಿದ್ದು, ಸರಾಗೆ ಬಾಲಿವುಡ್ನಲ್ಲಿ ಮೊದಲು ಯಾರು ಆ್ಯಕ್ಷನ್ ಕಟ್ ಹೇಳಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.