Amit Shah ಹುಟ್ಟುಹಬ್ಬಕ್ಕೆ ಟ್ವೀಟ್ ಮಾಡಿ ಟ್ರೋಲ್ ಆದ Sara Ali Khan..!
ಸಾರಾ ಅಲಿ ಖಾನ್ ಇನ್ಸ್ಟಾಗ್ರಾಂನಲ್ಲಿ ಸಕ್ರಿಯವಾಗಿ ಇರುವಷ್ಟು ಟ್ವಿಟರ್ನಲ್ಲಿ ಇಲ್ಲ. ಆದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿ ಟ್ವೀಟ್ ಮಾಡಿದ್ದಾರೆ ಸಾರಾ ಅಲಿ ಖಾನ್ ಟ್ವೀಟ್ ನೋಡಿದ ನೆಟ್ಟಿಗರು ಅವರನ್ನು ಮನಸ್ಸಿಗೆ ಬಂದಂತೆ ಟ್ರೋಲ್ ಮಾಡಿದ್ದಾರೆ. (ಚಿತ್ರಗಳು ಕೃಪೆ: ಸಾರಾ ಅಲಿ ಖಾನ್ ಇನ್ಸ್ಟಾಗ್ರಾಂ-ಟ್ವಟರ್)
ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿರುವ ನಟಿ ಸಾರಾ ಅಲಿ ಖಾನ್ ಅವರು ಆಗಾಗ ಸುದ್ದಿಯಲ್ಲಿರುತ್ತಾರೆ. ಅದು ತಮ್ಮ ಸಿನಿಮಾ, ಫಿಟ್ನೆಸ್ ಹಾಗೂ ಡ್ರೆಸ್ ವಿಷಯಕ್ಕೆ ಅವರು ಸದ್ದು ಮಾಡುವುದುಂಟು. ಆದರೆ,ಈ ಸಲ ಅವರು ಬೇರೆಯದ್ದೇ ವಿಷಯದಿಂದ ಚರ್ಚೆಯ ವಿಷಯವಾಗಿದ್ದಾರೆ.
2/ 7
ಇನ್ಸ್ಟಾಗ್ರಾಂನಲ್ಲಿ ಆ್ಯಕ್ಟೀವ್ ಆಗಿರುವ ಸಾರಾ ಅಲಿ ಖಾನ್ ಟ್ವೀಟ್ ಮಾಡುವುದು ತುಂಬಾ ವಿರಳ. ಹೀಗಿರುವಾಗ ಈ ನಟಿ ಅಮಿತ್ ಶಾ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಒಂದು ಟ್ವೀಟ್ ಮಾಡಿದ್ದಾರೆ.
3/ 7
ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರಿಗೆ ಹುಟ್ಟುಹಬ್ಬದ ಶುಭಾಶಯ ಎಂದು ಬರೆದು ಮಾಡಿದ ಟ್ವೀಟ್ ನೋಡಿದ ನೆಟ್ಟಿಗರು ಅವರನ್ನು ಟ್ರೋಲ್ ಮಾಡಲಾರಭಿಸಿದ್ದಾರೆ.
4/ 7
ಸಾರಾ ಅಲಿ ಖಾನ್ ಟ್ವೀಟ್ ನೋಡಿದ ಕೂಡಲೇ ಸಾಕಷ್ಟು ಮೀಮ್ಸ್ ಹಾಗೂ ವ್ಯಂಗ್ಯವಾದ ಪೋಸ್ಟ್ಗಳು ಹರಿದಾಡಲಾರಂಭಿಸಿಚೆ. ಎನ್ಸಿಬಿ ಭಯವಿದೆಯಾ ಅದಕ್ಕೆ ಈ ಟ್ವೀಟ್ ಮಾಡಿದ್ದಾ ಎಂದೆಲ್ಲ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
5/ 7
ಸಾರಾ ಕಾ ನಾಮ್ ಕಾಟ್ ದೋ .... ಅಂದರೆ ಸಾರಾ ಅವರ ಹೆಸರು ತೆಗದು ಹಾಕಿ ಎಂದು ಅಮಿತ್ ಶಾ ಅವರು ಎನ್ ಸಿಬಿ ಅಧಿಕಾರಿಗಳಿಗೆ ಹೇಳುತ್ತಿರುವಂತೆ ಮೀಮ್ಸ್ ಮಾಡಲಾಗುತ್ತಿದೆ.
6/ 7
ಈ ಹಿಂದೆಯೇ ಸಾರಾ ಅಲಿ ಖಾನ್ ಮಾದಕ ವಸ್ತು ಪ್ರಕರಣದಲ್ಲಿ ವಿಚಾರಣೆ ಎದುರಿಸಿದ್ದಾರೆ. ಗೋವಾದಲ್ಲಿದ್ದ ಸಾರಾ ಆಗ ವಿಚಾರಣೆಗೆಂದು ಮುಂಬೈಗೆ ಬಂದಿದ್ದರು.
7/ 7
ಈಗ ಮತ್ತೆ ಬಾಲಿವುಡ್ನಲ್ಲಿ ಮಾದಕ ವಸ್ತು ಪ್ರಕರಣದ ವಿಷಯ ಮತ್ತೆ ಸುದ್ದಿಯಲ್ಲಿದ್ದು,ಈ ಪ್ರಕರಣದಲ್ಲಿ ಸ್ಟಾರ್ ಕಿಡ್ಸ್ಗಳ ವಿಚಾರಣೆ ನಡೆಯುತ್ತಿದೆ. ಇದೇ ಕಾರಣದಿಂದ ಭಯಪಟ್ಟು ಸಾರಾ ಈಗ ಈ ಟ್ವೀಟ್ ಮಾಡುವ ಮೂಲಕ ತಾವು ತಪ್ಪಿಸಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ.