Sapthami Gowda: ಅಮ್ಮನ ಮದ್ವೆ ಬೀಗರೂಟದ ಸೀರೆ ಉಟ್ಟ ಸಪ್ತಮಿ! ಹೇಗಿದೆ ಲುಕ್?
ನಟಿ ಸಪ್ತಮಿ ಗೌಡ ಅವರು ಅಮ್ಮನ ಮದುವೆಯ ಬೀಗರೂಟದಲ್ಲಿ ಅಮ್ಮ ಉಟ್ಟಿದ್ದ ಸೀರೆಯನ್ನು ಇತ್ತೀಚೆಗೆ ಉಟ್ಟು ಸಂಭ್ರಮಿಸಿದ್ದಾರೆ. ಇಲ್ನೋಡಿ ಫೋಟೋಸ್.
1/ 7
ನಟಿ ಸಪ್ತಮಿ ಗೌಡ ಅವರು ತಾಯಿಯೊಂದಿಗೆ ಇರುವ ಕೆಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
2/ 7
ಫಂಕ್ಷನ್ ಒಂದರಲ್ಲಿ ಅಮ್ಮನ ಜೊತೆ ರೆಡಿಯಾಗಿ ಪೋಸ್ ಕೊಟ್ಟಿದ್ದು ಫೋಟೋಗಳನ್ನು ನಟಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.
3/ 7
ವಿಶೇಷ ಏನಪ್ಪಾ ಅಂದ್ರೆ ಈ ಫೋಟೋಗಳಲ್ಲಿ ನಟಿ ಸಪ್ತಮಿ ಗೌಡ ಅವರ ತಾಯಿ ಉಟ್ಟಿರೋದು ಅವರ ಮದುವೆಯ ರಿಸೆಪ್ಶನ್ ಸೀರೆಯಂತೆ. ಇದನ್ನು ಅವರೇ ರಿವೀಲ್ ಮಾಡಿದ್ದಾರೆ.
4/ 7
ಇನ್ನು ಸಪ್ತಮಿ ಗೌಡ ಅವರು ನೀಲಿ ಬಣ್ಣದ ಸೀರೆ ಉಟ್ಟಿದ್ದು ಇದು ಅವರ ತಾಯಿಯ ಮದುವೆಯ ಬೀಗರ ಊಟ ಕಾರ್ಯಕ್ರನದಲ್ಲಿ ಅವರು ಉಟ್ಟುಕೊಂಡಿದ್ದ ಸೀರೆಯಂತೆ.
5/ 7
ಸಪ್ತಮಿ ಅವರು ಅಮ್ಮ ಕ್ಲಿಕ್ಕಿಸಿದ ಫೋಟೋವನ್ನು ಶೇರ್ ಮಾಡಿಕೊಂಡು ಅಮ್ಮನ ಫೋಟೋಗ್ರಫಿ ಎಂದು ಕ್ಯಾಪ್ಶನ್ ಕೂಡಾ ಕೊಟ್ಟಿದ್ದಾರೆ.
6/ 7
ಈ ಅಮ್ಮ ಮಗಳ ಸಾರಿ ಲುಕ್ ನೋಡಿ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಇಬ್ಬರೂ ಸೀರೆಯಲ್ಲಿ ಕ್ಯೂಟ್ ಆಗಿ ಕಾಣಿಸಿದ್ದಾರೆ.
7/ 7
ಸಪ್ತಮಿ ಅವರು ಕಾಂತಾರ ನಂತರ ಈಗ ಅಭಿಷೇಕ್ ಅಂಬರೀಷ್ ಅವರ ಜೊತೆ ಕಾಳಿ ಸಿನಿಮಾದಲ್ಲಿ ನಟಿಸಲಿದ್ದಾರೆ. ಇದು ಸಪ್ತಮಿ ಅವರ ಮೂರನೇ ಸಿನಿಮಾ.
First published: