Rakshit Shetty: ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಶೂಟಿಂಗ್ ಎಲ್ಲಿಗೆ ತಲುಪಿತು?
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಹೇಗೆ ನಡೆಯುತ್ತಿದೆ? ಶೂಟಿಂಗ್ ಎಲ್ಲಿಗೆ ತಲುಪಿತು? ಇಲ್ಲಿದೆ ನೋಡಿ ಅಪ್ಡೇಟ್.
1/ 10
ಹೇಮಂತ್ ರಾವ್ ನಿರ್ದೇಶನದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಶೂಟಿಂಗ್ ಎಲ್ಲಿಗೆ ತಲುಪಿತು?
2/ 10
ಇದೀಗ ನಿರ್ದೇಶಕ ಹೇಮಂತ್ ಅವರು ಶೂಟಿಂಗ್ ಸೆಟ್ನಿಂದ ಕೆಲವೊಂದು ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.
3/ 10
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಣಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾವನ್ನು ಹೇಮಂತ್ ರಾವ್ ನಿರ್ದೇಶನ ಮಾಡುತ್ತಿದ್ದು, ಶೂಟಿಂಗ್ ಜೋರಾಗಿ ನಡೆಯುತ್ತಿದೆ.
4/ 10
ಕೊರೋನಾ ಸಂದರ್ಭದಲ್ಲಿ ಸಿನಿಮಾದ ಶೂಟಿಂಗ್ಗೆ ಸ್ವಲ್ಪಮಟ್ಟಿಗೆ ಬ್ರೇಕ್ ಬಿದ್ದಿತ್ತು. ಆದರೆ ಈಗ ಮತ್ತೆ ಮೊದಲಿನ ವೇಗ ಪಡೆದು ಶೂಟಿಂಗ್ ಸಾಗುತ್ತಿದೆ.
5/ 10
ಸಿನಿಮಾದ ಸೆಕೆಂಡ್ ಹಾಫ್ನ ಫಸ್ಟ್ ಶೆಡ್ಯೂಲ್ ಶೂಟಿಂಗ್ ಮುಕ್ತಾಯವಾಗಿದೆ. ಸೆಟ್ನಲ್ಲಿ ಸಾಕಷ್ಟು ಫನ್ ಮಾಡಿದೆವು ಎಂದು ನಿರ್ದೇಶಕ ಬರೆದಿದ್ದಾರೆ.
6/ 10
ಇದರಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಇತರ ಪಾತ್ರಧಾರಿಗಳ ಕ್ಲೋಸಪ್ ಲುಕ್ ಹಾಗೂ ತಂಡದ ಫೋಟೋಗಳೂ ಇವೆ.
7/ 10
ಹೇಮಂತ್ ಅವರು 10 ಫೋಟೋಗಳನ್ನು ಶೇರ್ ಮಾಡಿದ್ದು ಸಿನಿ ಪ್ರೇಮಿಗಳು ಈ ಹೊಸ ಅಪ್ಡೇಟ್ನಿಂದ ಖುಷಿಗೊಂಡಿದ್ದಾರೆ.
8/ 10
ಈ ಫೋಟೋಗಳು ಸುಮಾರು 6 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳಿಸಿದ್ದುಅಭಿಮಾನಿಗಳು ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿ ಎಂದು ಕಾಮೆಂಟ್ನಲ್ಲಿ ಕೇಳಿದ್ದಾರೆ.
9/ 10
ರಿಲೀಸ್ ಯಾವಾಗ? ಟ್ರೈಲರ್ ಯಾವಾಗ ಬಿಡ್ತೀರಾ ಎಂದು ಅಭಿಮಾನಿಗಳು ಕುತೂಹಲದಿಂದ ಪ್ರಶ್ನೆ ಮಾಡುತ್ತಿದ್ದು ಬಿಡುಗಡೆಗೂ ಮುನ್ನ ಸಿನಿಮಾ ಹವಾ ಜೋರಾಗಿದೆ ಎನ್ನಬಹುದು.
10/ 10
ರಕ್ಷಿತ್ ಶೆಟ್ಟಿಯನ್ನು ಇಲ್ಲಿ ಡಿಫರೆಂಟ್ ಲುಕ್ನಲ್ಲಿ ಕಾಣಬಹುದಾಗಿದೆ.
First published: