ಕಿರುತೆರೆ ನಟಿ ಸಾನ್ಯಾ ಐಯ್ಯರ್ ಅವರ ಬ್ರೈಡಲ್ ಲುಕ್ ಫೋಟೋ ಒಂದು ವೈರಲ್ ಆದ ಬೆನ್ನಲ್ಲೇ ಇದೀಗ ಇನ್ನೊಂದು ಕುತೂಹಲಕಾರಿ ವಿಚಾರ ಬೆಳಕಿಗೆ ಬಂದಿದೆ. ಬಿಗ್ಬಾಸ್ ಬ್ಯೂಟಿ ಕೈ ಬೆರಳಲ್ಲಿ ವಿಶೇಷ ಉಂಗುರ ಕಾಣಿಸಿಕೊಂಡಿದೆ.
2/ 8
ಕಿರುತೆರೆ ನಟಿ ಸಾನ್ಯಾ ಐಯ್ಯರ್ ಅವರು ಸಖತ್ ಬ್ಯೂಟಿಯಾಗಿ ಕಾಣಿಸಿಕೊಂಡಿದ್ದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರಲ್ಲಿ ನಟಿ ಗೋಲ್ಡನ್ ಕಲರ್ ಸೀರೆ ಹಾಗೂ ಬ್ರೈಡಲ್ ರೆಡ್ ಬ್ಲೌಸ್ ಧರಿಸಿ ಕಂಡು ಬಂದಿದ್ದರು.
3/ 8
ಇದೀಗ ಸಾನ್ಯಾ ಅವರು ವಿಡಿಯೋ ಒಂದನ್ನು ಶೇರ್ ಮಾಡಿದ್ದು ಅದರಲ್ಲಿ ನಟಿಯ ಕೈಬೆರಳಲ್ಲಿ ಶೆಟ್ಟಿ ಸಂಪ್ರದಾಯದ ವಿವಾಹಿತ ಮಹಿಳೆಯರು ಧರಿಸೋ ಒಡ್ಡಿ ಉಂಗಿಲ/ಒಡ್ಡುಂಗಿಲ/ ಒಡ್ಡಿ ಉಂಗುರ ಎಂದು ಕರೆಯಲ್ಪಡುವ ಬ್ರೈಡಲ್ ರಿಂಗ್ ಕಂಡುಬಂದಿದೆ.
4/ 8
ಕರ್ನಾಟಕ ಕರಾವಳಿ ಭಾಗದ ವಿಶೇಷವಾಗಿ ಮಂಗಳೂರು, ದಕ್ಷಿಣ ಕನ್ನಡ ಭಾಗದಲ್ಲಿ ಶೆಟ್ಟಿ ಸಂಪ್ರದಾಯದಲ್ಲಿ ವಿವಾಹಿತ ಮಹಿಳೆಯರು ಈ ಉಂಗುರ ಧರಿಸುತ್ತಾರೆ. ಕರಿಮಣಿ ಸರದಂತೆಯೇ ವಿವಾಹವಾಗಿರೋ ಸೂಚನೆ ಕೊಡುವ ಆಭರಣ ಇದಾಗಿದೆ.
5/ 8
ಈಗ ಸಾನ್ಯಾ ಐಯ್ಯರ್ ಬೆರಳಲ್ಲಿ ಈ ಉಂಗುರ ಕಾಣಿಸಿಕೊಂಡಿದ್ದು ನಟಿ ಕದ್ದುಮುಚ್ಚಿ ಮದುವೆಯಾಗಿದ್ದಾರಾ ಎಂದು ಚರ್ಚಿಸುತ್ತಿದ್ದಾರೆ ನೆಟ್ಟಿಗರು. ಇದಕ್ಕೆ ಕಾರಣವೂ ಇದೆ.
6/ 8
ಸಾನ್ಯಾ ಐಯ್ಯರ್ ಹಾಗೂ ರೂಪೇಶ್ ಶೆಟ್ಟಿ ಡೇಟ್ ಮಾಡುತ್ತಿರುವುದು ಎಲ್ಲರಿಗೂ ಗೊತ್ತು. ರೂಪೇಶ್ ಅವರು ಶೆಟ್ಟಿ ಹುಡುಗ. ಸಾನ್ಯಾ ರೂಪೇಶ್ ಅವರನ್ನು ಇಷ್ಟಪಡುತ್ತಿರುವ ನಿಟ್ಟಿನಲ್ಲಿ ನಟಿಯ ಬೆರಳಲ್ಲಿ ಶೆಟ್ಟಿ ಸಂಪ್ರದಾಯದ ಅಂಶವೊಂದು ಕಂಡುಬಂದಿದೆ. ಇದು ನೆಟ್ಟಿಗರ ಸಂಶಯಕ್ಕೆ ಕಾರಣವಾಗಿದೆ.
7/ 8
ಬಿಗ್ಬಾಸ್ ಮನೆಯಿಂದ ಹೊರಬಂದ ನಂತರ ಸಾನ್ಯಾ ಐಯ್ಯರ್ ಅವರು ಫೋಟೋಶೂಟ್ ಹಾಗೂ ವಿಡಿಯೋ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಅದನ್ನು ಫ್ಯಾನ್ಸ್ ಜೊತೆ ಶೇರ್ ಮಾಡುತ್ತಿರುತ್ತಾರೆ.
8/ 8
ಒಡ್ಡಿ ಉಂಗಿಲ ಸಂಪ್ರದಾಯ ಹಿಂದಿನಿಂದಲೂ ಕರಾವಳಿ ಶೆಟ್ಟಿ ಮಹಿಳೆಯರು ಫಾಲೋ ಮಾಡುತ್ತಿದ್ದಾರೆ. ಆದರೆ ಈಗ ಈ ಉಂಗುರವನ್ನು ಫ್ಯಾಷನ್ ಆಗಿಯೂ ಬಳಸುತ್ತಾರೆ. ಇದು ವಿವಾಹಿತ ಮಹಿಳೆಯರು ಕರಿಮಣಿ ಅಥವಾ ತಾಳಿಸರದಷ್ಟೇ ಪ್ರಾಮುಖ್ಯತೆ ಕೊಟ್ಟು ಧರಿಸುವ ಆಭರಣ.