ಬಿಗ್ಬಾಸ್ ಸೀಸನ್ 9ರ ಚೆಲುವೆ ಸಾನ್ಯಾ ಐಯ್ಯರ್ ಅವರು ಸುಂದರವಾದ ಗುಲಾಬಿ ಪಿಂಕ್ ಕಲರ್ ಸೀರೆ ಉಟ್ಟುಕೊಂಡು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
2/ 8
ಸೀರೆ ಅಂಚಿಗೆ ಗೋಟಾಪಟ್ಟಿ ಇಡಿಸಲಾಗಿದ್ದು ಹೈನೆಕ್ ಬ್ಲೌಸ್ ಧರಿಸಿದ್ದರು. ನಟಿ ಸುಂದರವಾದ ಹಿನ್ನೆಲೆಯಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
3/ 8
ನಟಿಯ ಈ ಆರ್ಗಾನ್ಝಾ ಸೀರೆಗೆ ಡಿಸೈನರ್ ಬ್ಲೌಸ್ ಧರಿಸಿದ್ದು ಇದರ ಕೈಯಲ್ಲಿ ಸುಂದರವಾದ ಡಿಸೈನ್ಗಳನ್ನು ಮಾಡಲಾಗಿತ್ತು. ನಟಿ ಸಿಂಪಲ್ ಲುಕ್ನಲ್ಲಿ ಕಾಣಿಸಿದ್ದಾರೆ.
4/ 8
ಸಾನ್ಯಾ ಕಣ್ಣಿನ ಮೇಕಪ್ ಹೈಲೈಟ್ ಆಗಿದೆ. ಥಿಕ್ ಐಬ್ರೋ ಹಾಗೂ ಐ ಲ್ಯಾಶ್ ನಟಿಯ ಬ್ಯೂಟಿಯನ್ನು ಹೆಚ್ಚಿಸಿದೆ. ರೆಡ್ ಸ್ಟೋನ್ ಇರುವಂತಹ ಸುಂದರವಾದ ಇಯರಿಂಗ್ಸ್ ನಟಿ ಧರಿಸಿದ್ದು ಸೀರೆಗೆ ಮ್ಯಾಚ್ ಆಗಿದೆ.
5/ 8
ನಟಿ ಈ ಸೀರೆ ಲುಕ್ನಲ್ಲಿಯೂ ಬೆಲ್ಟ್ ವಾಚ್ ಕಟ್ಟಿದ್ದು ವಿಶೇಷ. ಸ್ಟೈಲಿಷ್ ಬಳೆಯನ್ನೋ, ಬ್ರೇಸ್ಲೆಟ್ ಅನ್ನೋ ಧರಿಸುವ ಬದಲು ಸಾನ್ಯಾ ಬೆಲ್ಟ್ ವಾಚ್ ಕಟ್ಟಿದ್ದರು.
6/ 8
ಹೈ ನೆಕ್ ಬ್ಲೌಸ್ನಲ್ಲಿ ರೆಡಿ ಡಿಸೈನ್ಗಳಿದ್ದ ಕಾರಣ ಅದುವೇ ಹಾರದಂತೆ ಕಾಣಿಸುತ್ತಿತ್ತು. ನಟಿ ಸೀರೆಗೆ ಯಾವುದೇ ಬೇರೆ ಆಭರಣಗಳನ್ನು ಧರಿಸಿರಲಿಲ್ಲ.
7/ 8
ಬ್ಯಾಗ್ರೌಂಡ್ನಲ್ಲಿ ಚಂದದ ಹುಲ್ಲುಗಾವಲಿನಂತ ಪ್ರದೇಶವಿದ್ದು ಫೋಟೋಗಳು ಹೈಲೈಟ್ ಆಗಿದೆ. ನಟಿ ತುಂಬಾ ಸಿಂಪಲ್ ಹೇರ್ಸ್ಟೈಲ್ ಮಾಡಿಕೊಂಡಿದ್ದರು.
8/ 8
ನಟಿಯ ಈ ಫೋಟೋಗಳಿಗೆ 19 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು ಅವರ ಅಭಿಮಾನಿಗಳು ಕಮೆಂಟ್ ಮಾಡಿ ಅವರ ಸೌಂದರ್ಯವನ್ನು ಹೊಗಳುತ್ತಿದ್ದಾರೆ.