ಅಮ್ಮನ ಹುಟ್ಟುಹಬ್ಬದಂದು ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ನಟ ಸಂಜಯ್ ದತ್..!
ಬಾಲಿವುಡ್ ನಟಿ ನರ್ಗೀಸ್ ದತ್ (Nargis Dutt) ಅವರ ಜನ್ಮ ಜೂನ್ 1ರಂದು1929 ರಲ್ಲಿ ಆಗಿತ್ತು. ಅಮ್ಮನ ಹುಟ್ಟುಹಬ್ಬದಂದು ಮಗ ಸಂಜಯ್ ದತ್ (Sanjay Dutt) ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಾ ಅಮ್ಮನೊಂದಿಗಿನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಸಂಜಯ್ ದತ್ ಇನ್ಸ್ಟಾಗ್ರಾಂ ಖಾತೆ)
ಬಾಲಿವುಡ್ನಲ್ಲಿ ಒಂದು ಕಾಲದಲ್ಲಿ ಮಿಂಚಿ ಮರೆಯಾದ ನಟಿ ನರ್ಗೀಸ್ ದತ್ (Nargis Dutt). ನರ್ಗೀಸ್ ದತ್ ಅವರ ಹೆಸರನ್ನು ತುಂಬಾ ಗೌರವದಿಂದ ಹೇಳಲಾಗುತ್ತದೆ. ಅವರ ಮಗ ಸಂಜಯ್ ದತ್ (Sanjay Dutt) ಅಮ್ಮನನ್ನು ನೆನಪಿಸಿಕೊಳ್ಳುವ ಒಂದೂ ಅವಕಾಶವನ್ನೂ ಮಿಸ್ ಮಾಡಿಕೊಳ್ಳುವುದಿಲ್ಲ.
2/ 7
ಜೂನ್ 1ರಂದು ಕೊಲ್ಕತ್ತಾದಲ್ಲಿ ನರ್ಗೀಸ್ ದತ್ ಅವರ ಜನ್ಮವಾಗಿದ್ದು. ಈ ಚಿತ್ರದಲ್ಲಿ ಸುನಿಲ್ ದತ್ ಹಾಗೂ ನರ್ಗೀಸ್ ಅವರು ಬರ್ತ್ ಡೇ ಕ್ಯಾಪ್ ತೊಟ್ಟಿದ್ದಾರೆ.
3/ 7
ಈ ಚಿತ್ರದಲ್ಲಿ ನರ್ಗೀಸ್ ದತ್ ಮಗಳನ್ನು ಎತ್ತಿಕೊಂಡಿದ್ದು, ಸುನಿಲ್ ದತ್ ಅವರೂ ಜೊತೆಯಲ್ಲಿದ್ದಾರೆ.
4/ 7
ಅಮ್ಮನ ಹುಟ್ಟುಹಬ್ಬದಂದು ಸಂಜಯ್ ದತ್ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
5/ 7
ಅಪ್ಪ-ಅಮ್ಮನ ಜೊತೆಗಿನ ಕೆಲವು ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.
6/ 7
ಕ್ಯಾನ್ಸರ್ನಿಂದ ಬಳಲುತ್ತಿದ್ದ ನರ್ಗೀಸ್ ದತ್ ಅವರು ಮಗನ ಮೊದಲ ಸಿನಿಮಾ ನೋಡುವ ಕನಸು ಕಂಡಿದ್ದರು.
7/ 7
ಆದರೆ ಸಂಜಯ್ ದತ್ ಅಭಿನಯದ ಮೊದಲ ಸಿನಿಮಾ ರಾಕಿ ತೆರೆ ಕಾಣುವ ಮೊದಲೇ ಅಂದರೆ 3 ಮೇ 1981ರಲ್ಲಿ ಕೊನೆಯುಸಿರೆಳೆದರು.