Sanjay Dutt: ವೈರಲ್ ಆಗುತ್ತಿದೆ ಸಂಜಯ್ ದತ್ರ ಲೆಟೆಸ್ಟ್ ಫೋಟೋ: ಚಿಂತೆಗೀಡಾದ ಅಭಿಮಾನಿಗಳು..! ಬಾಲಿವುಡ್ನ ಬ್ಯಾಡ್ ಬಾಯ್ ಸಂಜಯ್ ದತ್ ಸದ್ಯ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಲೆಟೆಸ್ಟ್ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಆತಂಕದಲ್ಲಿದ್ದಾರೆ. (ಚಿತ್ರಗಳು ಕೃಪೆ: ಸಂಜಯ್ ದತ್ ಟ್ವಿಟರ್ ಹಾಗೂ ಬಾಲಿವುಡ್ ಬಬಲ್ ಇನ್ಸ್ಟಾಗ್ರಾಂ ಖಾತೆ)
1 / 16
ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿರುವ ನಟ ಸಂಜಯ್ ದತ್ ಇತ್ತೀಚೆಗಷ್ಟೆ ಪತ್ನಿ ಮಾನ್ಯತಾ ಹಾಗೂ ಮಕ್ಕಳೊಂದಿಗೆ ದುಬೈಗೆ ಹೋಗಿದ್ದರು.
2 / 16
ದುಬೈನಿಂದ ಸಂಜಯ್ ದತ್ ಹಾಗೂ ಅವರ ಕುಟುಂಬ ಈಗ ಮುಂಬೈಗೆ ಮರಳಿದ್ದು, ಸಂಜಯ್ ದತ್ ಅವರ ಲೆಟೆಸ್ಟ್ ಫೋಟೋ ಒಂದು ವೈರಲ್ ಆಗುತ್ತಿದೆ.
3 / 16
ಸಂಜಯ್ ದತ್ ಅವರ ಫೋಟೋ ನೋಡಿದ ಅಭಿಮಾನಿಗಳು ಚಿಂತೆಗೀಡಾಗಿದ್ದಾರೆ.
4 / 16
ಸಂಜಯ್ ದತ್ ಈ ಫೋಟೋದಲ್ಲಿ ತುಂಬಾ ಸಪೂರವಾಗಿದ್ದಾರೆ. ಇಷ್ಟು ತೂಕ ಕಡುಮೆಯಾಗಿರುವುದನ್ನು ಕಂಡ ಅಭಿಮಾನಿಗಳು ಸಂಜಯ್ ದತ್ ಅವರ ಆರೋಗ್ಯದ ಬಗ್ಗೆ ಚಿಂತೆಗೀಡಾಗಿದ್ದಾರೆ.
5 / 16
ದುಬೈಗೆ ಹೋಗುವ ಮುನ್ನ ಸಂಜಯ್ ದತ್ ಸಂಶೇರ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.
6 / 16
ನಟ ಸಂಜಯ್ ದತ್ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ಆಗಸ್ಟ್ನಲ್ಲಿ ಗೊತ್ತಾಗಿತ್ತು.
7 / 16
ಉಸಿರಾಟದ ತೊಂದರೆಯಿಂದ ಆಗಸ್ಟ್ನಲ್ಲಿ ಸಂಜಯ್ ದತ್ ಆಸ್ಪತ್ರೆಗೆ ದಾಖಲಾಗಿದ್ದರು.
8 / 16
ಸಂಜಯ್ ದತ್ ಸದ್ಯ ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ಅಧೀರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
First published: October 05, 2020, 13:10 IST