Kollywood Movie: ನಟ ವಿಜಯ್ ಲಿಯೋ ಚಿತ್ರಕ್ಕೆ ಸಂಜಯ್ ದತ್ ವಿಲನ್! ಕಾಶ್ಮೀರದಲ್ಲಿ ನಡೀತಿದೆ ಶೂಟಿಂಗ್

ತಮಿಳಿನ ಟಾಪ್ ಹೀರೋ ದಳಪತಿ ವಿಜಯ್ ಅಭಿನಯದ ವಾರಿಸು ಚಿತ್ರ ತೆರೆಕಂಡು ಸಕ್ಸಸ್ ಕಂಡಿದೆ. ಈ ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವಾಗಲೇ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ತಮ್ಮ 67ನೇ ಸಿನಿಮಾ ಕನ್ಫರ್ಮ್ ಮಾಡಲಾಗಿದೆ. ಪೂಜಾ ಕಾರ್ಯಕ್ರಮಗಳೊಂದಿಗೆ ಸಿನಿಮಾ ಶುರುವಾಗಿದೆ. ಇತ್ತೀಚೆಗಷ್ಟೇ ನಿರ್ಮಾಪಕರು ಈ ಚಿತ್ರದ ಟೈಟಲ್ ಪ್ರೋಮೋ ಜೊತೆಗೆ ರಿಲೀಸ್ ದಿನಾಂಕವನ್ನು ಘೋಷಿಸಿದ್ದಾರೆ. ಈ ಸಿನಿಮಾದ ಶೂಟಿಂಗ್ನಲ್ಲಿ ಸಂಜಯ್ ದತ್ ಕಾಣಿಸಿಕೊಂಡಿದ್ದಾರೆ.

First published:

  • 17

    Kollywood Movie: ನಟ ವಿಜಯ್ ಲಿಯೋ ಚಿತ್ರಕ್ಕೆ ಸಂಜಯ್ ದತ್ ವಿಲನ್! ಕಾಶ್ಮೀರದಲ್ಲಿ ನಡೀತಿದೆ ಶೂಟಿಂಗ್

    ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಎಸ್ ಎಸ್ ಲಲಿತ್ ಕುಮಾರ್ ನಿರ್ಮಿಸಿರುವ ಈ ಚಿತ್ರವನ್ನು ಅದ್ಧೂರಿ ಬಜೆಟ್​​ನಲ್ಲಿ ತಯಾರಿಸಲಾಗ್ತಿದೆ. ಸೌತ್ ಸಿನಿಮಾ ಇಂಡಸ್ಟ್ರಿಯೇ ಎದುರು ನೋಡುತ್ತಿರುವ ದಳಪತಿ ವಿಜಯ್-ಲೋಕೇಶ್ ಕನಕರಾಜ್ ತಂಡದ 'ಲಿಯೋ' ಚಿತ್ರದಲ್ಲಿ ನಟಿಸಲು ಬಾಲಿವುಡ್ ಸ್ಟಾರ್ ಸಂಜಯ್ ದತ್ ಕಾಶ್ಮೀರಕ್ಕೆ ಆಗಮಿಸಿದ್ರು.

    MORE
    GALLERIES

  • 27

    Kollywood Movie: ನಟ ವಿಜಯ್ ಲಿಯೋ ಚಿತ್ರಕ್ಕೆ ಸಂಜಯ್ ದತ್ ವಿಲನ್! ಕಾಶ್ಮೀರದಲ್ಲಿ ನಡೀತಿದೆ ಶೂಟಿಂಗ್

    ಚೆನ್ನೈನಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿ ಲಿಯೋ ತಂಡ ಕಾಶ್ಮೀರಕ್ಕೆ ತೆರಳಿದೆ. ಭಾರೀ ಹಿಮದ ನಡುವೆಯೂ ಬಿಗಿ ಭದ್ರತೆಯೊಂದಿಗೆ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಚಿತ್ರದ ಲೊಕೇಶನ್ ಚಿತ್ರಗಳು ಹೊರಗೆ ಹೋಗದಂತೆ ಮೊಬೈಲ್ ಫೋನ್ ಇಲ್ಲದೇ ಚಿತ್ರೀಕರಣ ಮಾಡಲಾಗಿದೆ.

    MORE
    GALLERIES

  • 37

    Kollywood Movie: ನಟ ವಿಜಯ್ ಲಿಯೋ ಚಿತ್ರಕ್ಕೆ ಸಂಜಯ್ ದತ್ ವಿಲನ್! ಕಾಶ್ಮೀರದಲ್ಲಿ ನಡೀತಿದೆ ಶೂಟಿಂಗ್

    ಈ ಸಿನಿಮಾದಲ್ಲಿ ವಿಜಯ್ ಅವರನ್ನು ಸೋಲಿಸುವ ಪವರ್ ಫುಲ್ ವಿಲನ್ ಪಾತ್ರದಲ್ಲಿ ಸಂಜು ಬಾಬಾ ಕಾಣಿಸಿಕೊಳ್ಳಲಿದ್ದಾರೆ. ಕೆಜಿಎಫ್ 2 ನಲ್ಲಿ ಅಧಿರಾ ಪಾತ್ರದಲ್ಲಿ ಮಿಂಚಿದ್ದ ಸಂಜು ಬಾಬಾ ಇದೀಗ ವಿಜಯ್ ಜೊತೆ ಅಭಿನಯಿಸಲಿದ್ದಾರೆ. (ಫೈಲ್/ಫೋಟೋ)

    MORE
    GALLERIES

  • 47

    Kollywood Movie: ನಟ ವಿಜಯ್ ಲಿಯೋ ಚಿತ್ರಕ್ಕೆ ಸಂಜಯ್ ದತ್ ವಿಲನ್! ಕಾಶ್ಮೀರದಲ್ಲಿ ನಡೀತಿದೆ ಶೂಟಿಂಗ್

    ತಮಿಳಿನ ಟಾಪ್ ಹೀರೋ ದಳಪತಿ ವಿಜಯ್ ಅಭಿನಯದ ಇತ್ತೀಚಿನ ಚಿತ್ರದ ವಾರಿಸು. ಇದು ವಾರಿಸು ಎಂಬ ಹೆಸರಿನಲ್ಲಿ ತಮಿಳಿನಲ್ಲಿ ಬಿಡುಗಡೆಯಾಗಿ ಉತ್ತಮ ಯಶಸ್ಸನ್ನು ಕಂಡಿತು. ಈ ಚಿತ್ರದ ಯಶಸ್ಸಿನ ಖುಷಿಯಲ್ಲಿರುವಾಗಲೇ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ 67ನೇ ಸಿನಿಮಾ ಮಾಡುತ್ತಿದ್ದಾರೆ. ಕ್ರೈಂ ಆಕ್ಷನ್ ಜಾನರ್​ನಲ್ಲಿ ಈ ಸಿನಿಮಾ ತಯಾರಾಗುತ್ತಿದೆ. (ಫೈಲ್/ಫೋಟೋ)

    MORE
    GALLERIES

  • 57

    Kollywood Movie: ನಟ ವಿಜಯ್ ಲಿಯೋ ಚಿತ್ರಕ್ಕೆ ಸಂಜಯ್ ದತ್ ವಿಲನ್! ಕಾಶ್ಮೀರದಲ್ಲಿ ನಡೀತಿದೆ ಶೂಟಿಂಗ್

    ಮಾಸ್ಟರ್ ಚಿತ್ರದ ನಂತರ ಮತ್ತೊಮ್ಮೆ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ವಿಜಯ್ ಈ ಸಿನಿಮಾ ಮಾಡುತ್ತಿದ್ದಾರೆ. ಕಳೆದ ವರ್ಷ ಕಮಲ್ ಹಾಸನ್ ಅಭಿನಯದ ವಿಕ್ರಮ್ ಚಿತ್ರದ ಮೂಲಕ ಲೋಕೇಶ್ ಕನಕರಾಜ್ ಉತ್ತಮ ಯಶಸ್ಸನ್ನು ಪಡೆದಿದ್ದರು. ವಿಜಯ್ 'ವಾರಿಸು' ಚಿತ್ರದ ಯಶಸ್ಸಿನಲ್ಲಿ ಖುಷಿಯಲ್ಲಿದ್ದಾರೆ.

    MORE
    GALLERIES

  • 67

    Kollywood Movie: ನಟ ವಿಜಯ್ ಲಿಯೋ ಚಿತ್ರಕ್ಕೆ ಸಂಜಯ್ ದತ್ ವಿಲನ್! ಕಾಶ್ಮೀರದಲ್ಲಿ ನಡೀತಿದೆ ಶೂಟಿಂಗ್

    ವಿಜಯ್ ಮತ್ತು ಲೋಕೇಶ್ ಕನಕರಾಜ್ ಅವರ ಇತ್ತೀಚಿನ ಕಾಂಬಿನೇಶನ್ನಲ್ಲಿ ಬರುತ್ತಿರುವ 2ನೇ ಚಿತ್ರವು ತಮಿಳಿನ ಜೊತೆಗೆ ಪ್ಯಾನ್ ಇಂಡಿಯಾದಲ್ಲಿ ಭಾರೀ ನಿರೀಕ್ಷೆಯನ್ನು ಹೊಂದಿದೆ. ಈ ಚಿತ್ರದಲ್ಲಿ ವಿಜಯ್ ಮುಂಬೈ ಗ್ಯಾಂಗ್​ ಸ್ಟಾರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

    MORE
    GALLERIES

  • 77

    Kollywood Movie: ನಟ ವಿಜಯ್ ಲಿಯೋ ಚಿತ್ರಕ್ಕೆ ಸಂಜಯ್ ದತ್ ವಿಲನ್! ಕಾಶ್ಮೀರದಲ್ಲಿ ನಡೀತಿದೆ ಶೂಟಿಂಗ್

    ಈ ವರ್ಷದ ದೀಪಾವಳಿ ಉಡುಗೊರೆಯಾಗಿ ಅಕ್ಟೋಬರ್ 19 ರಂದು ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಇದಲ್ಲದೆ, ಚಿತ್ರವನ್ನು ಸನ್ ನೆಟ್ವರ್ಕ್ ಭಾರೀ ದರದಲ್ಲಿ ಖರೀದಿಸಿದೆ. ಸಿನಿಮಾ ಸೆಟ್ಟೇರುವ ಮುನ್ನವೇ ಡಿಜಿಟಲ್ ಮತ್ತು ಸ್ಯಾಟಲೈಟ್ ರೈಟ್ಸ್​ನಲ್ಲಿ ಸುಮಾರು ರೂ.100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಸಿನಿಮಾದ ತಮಿಳು, ತೆಲುಗು, ಕನ್ನಡ ಮತ್ತು ಹಿಂದಿಯಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ.

    MORE
    GALLERIES