Adheera: ಅಧೀರನ ಪಾತ್ರ ಡಿಸೈನ್ ಮಾಡಿದವರಾರು ಗೊತ್ತಾ?; ಪ್ರಶಾಂತ್ ನೀಲ್ ಬಿಚ್ಚಿಟ್ರು ಅಚ್ಚರಿಯ ವಿಚಾರ
ಸಂಜಯ್ ದತ್ ಲುಕ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ, ಭಯಕ್ಕೆ ಮತ್ತೊಂದು ಹೆಸರೇ ಅಧೀರ ಎಂದು ಬರೆದುಕೊಂಡಿದ್ದರು. ಈಗ ಈ ಪಾತ್ರ ಡಿಸೈನ್ ಮಾಡಿದವರು ಯಾರು ಎನ್ನುವ ಕುತೂಹಲಕಾರಿ ಅಂಶಕ್ಕೆ ಪ್ರಶಾಂತ್ ನೀಲ್ ಉತ್ತರ ನೀಡಿದ್ದಾರೆ.
News18 Kannada | August 3, 2020, 1:12 PM IST
1/ 14
ಕೆಜಿಎಫ್ 2 ಸಿನಿಮಾ ಹೇಗಿರಲಿದೆ ಎನ್ನುವುದಕ್ಕೆ ಈವರೆಗೆ ಅನೇಕ ಪೋಸ್ಟರ್ಗಳು ಉತ್ತರ ನೀಡಿದ್ದವು. ಈಗ ಚಿತ್ರತಂಡ ಹೊಸ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿತ್ತು.
2/ 14
ಸಂಜಯ್ ದತ್ ಜನ್ಮದಿನ ಹಿನ್ನೆಲೆಯಲ್ಲಿ ಚಿತ್ರತಂಡ ಕೆಜಿಎಫ್ 2 ಹೊಸ ಪೋಸ್ಟರ್ ರಿಲೀಸ್ ಮಾಡಿತ್ತು. ಇದರಲ್ಲಿ ಅಧೀರನ ಪಾತ್ರ ಹೇಗಿರಲಿದೆ ಎನ್ನುವ ಚಿಕ್ಕ ಹಿಂಟ್ ಸಿಕ್ಕಿತ್ತು. ಅಷ್ಟೇ ಅಲ್ಲ ಸಿನಿಮಾದ ಮೇಲಿನ ನಿರೀಕ್ಷೆ ಕೂಡ ದುಪ್ಪಟ್ಟಾಗಿತ್ತು.
3/ 14
ಅಧೀರ ಖಡ್ಗವನ್ನು ತಲೆಗೆ ಒತ್ತಿ ಕೂತಿದ್ದಾನೆ. ಅಷ್ಟೇ ಅಲ್ಲ, ಅಧೀರನ ಮುಖದ ಮೇಲೆ ದೇವನಾಗರಿ ಲಿಪಿಯಲ್ಲಿ ಏನನ್ನೋ ಬರೆಯಲಾಗಿದೆ. ಅಧೀರ ಹಾಕಿರುವ ಉಡುಗೆ ಕೂಡ ವಿಶೇವಾಗಿಯೇ ಇದೆ.
4/ 14
ಈ ಮಧ್ಯೆ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ. ಅದೇನೆಂದರೆ, ಅಧೀರನ ಪಾತ್ರವನ್ನು ಡಿಸೈನ್ ಮಾಡುವಲ್ಲಿ ಸಂಜಯ್ ದತ್ ಪಾತ್ರ ತುಂಬಾನೇ ಪ್ರಮುಖವಾಗಿದೆಯಂತೆ.
5/ 14
ಈ ಬಗ್ಗೆ ಮಾಹಿತಿ ನೀಡಿರುವ ಪ್ರಶಾಂತ್ ನೀಲ್,ಅಧೀರನ ಪಾತ್ರವನ್ನು ತುಂಬಾನೇ ಆಸ್ತೆ ವಹಿಸಿ ಮಾಡಿದ್ದೇವೆ. ಈ ಪಾತ್ರವನ್ನು ಡಿಸೈನ್ ಮಾಡಲು ಸಂಜಯ್ ದತ್ ಸಾಕಷ್ಟು ಸಲಹೆಗಳನ್ನು ನೀಡಿದ್ದರು. ನಾವು ಅದನ್ನು ಬಳಕೆ ಮಾಡಿಕೊಂಡಿದ್ದೇವೆ. ಅಧೀರನ ಪಾತ್ರ ಇಷ್ಟೊಂದು ಉತ್ತಮವಾಗಿ ಮೂಡಿ ಬರಲು ಸಂಜಯ್ ದತ್ ಅವರೇ ಕಾರಣ ಎಂದಿದ್ದಾರೆ.
6/ 14
ಕೆಜಿಎಫ್ 2ನಲ್ಲಿ ಅಧೀರ ತುಂಬಾನೇ ಪ್ರಮುಖ ಪಾತ್ರ ವಹಿಸಲಿದ್ದಾನೆ ಎನ್ನುವುದಕ್ಕೆ ಕೆಜಿಎಫ್ ಮೊದಲ ಚಾಪ್ಟರ್ನಲ್ಲೇ ಚಿಕ್ಕ ಹಿಂಟ್ ಸಿಕ್ಕಿತ್ತು. ಆದರೆ, ಆಗಿನ್ನೂ ಸಂಜಯ್ ದತ್ ಚಿತ್ರತಂಡ ಸೇರಿಕೊಂಡಿರಲಿಲ್ಲ. ಕೆಜಿಎಫ್ ಹಿಟ್ ಆದ ನಂತರದಲ್ಲಿ ಸಂಜಯ್ ದತ್ ಅಧೀರನ ಪಾತ್ರದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದರು.
7/ 14
ಮೈಸೂರಿಗೆ ಆಗಮಿಸಿ ಶೂಟಿಂಗ್ನಲ್ಲೂ ಪಾಲ್ಗೊಂಡಿದ್ದರು. ಈಗ ಅವರ ಹೊಸ ಲುಕ್ ರಿವೀಲ್ ಮಾಡುವ ಮೂಲಕ ಅವರ ಪಾತ್ರ ತುಂಬಾನೇ ತೂಕದ್ದು ಎಂಬುದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ಪ್ರಶಾಂತ್ ನೀಲ್.
8/ 14
ಕೆಜಿಎಫ್ ಸಿನಿಮಾ ದಸರಾ ಪ್ರಯುಕ್ತ ಅಕ್ಟೋಬರ್ ತಿಂಗಳಲ್ಲಿ ತೆರೆಗೆ ಬರುತ್ತಿದೆ. ಸಿನಿಮಾದಲ್ಲಿ ಯಶ್ಗೆ ಜೊತೆಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
9/ 14
ಬಾಲಿವುಡ್ ನಟಿ ರವೀನಾ ಟಂಡನ್ ಕೂಡ ಕೆಜಿಎಫ್-2ಗಾಗಿ ಮತ್ತೆ ಸ್ಯಾಂಡಲ್ವುಡ್ ಕದ ತಟ್ಟುತ್ತಿದ್ದಾರೆ. ಕನ್ನಡ ಸೇರಿ ಐದು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ಸದ್ಯ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಜೊತೆಗೆ ಕೆಲ ದೃಶ್ಯಗಳ ಶೂಟಿಂಗ್ ಕೆಲಸ ಕೂಡ ಬಾಕಿ ಇದೆ.
10/ 14
ಕೆಜಿಎಫ್ 2 ಸಿನಿಮಾ ಹೇಗಿರಲಿದೆ ಎನ್ನುವುದಕ್ಕೆ ಈವರೆಗೆ ಅನೇಕ ಪೋಸ್ಟರ್ಗಳು ಉತ್ತರ ನೀಡಿದ್ದವು. ಈಗ ಚಿತ್ರತಂಡ ಹೊಸ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.