Sanjay Dutt: ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾದ ನಟ ಸಂಜಯ್ ದತ್..!
ನಟ ಸಂಜಯ್ ದತ್ ಅನಾರೋಗ್ಯದಿಂದಾಗಿ ಮುಂಬೈನಲ್ಲಿರುವ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂಜೆ 6ಗಂಟೆಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎನ್ನಲಾಗುತ್ತಿದೆ. (ಚಿತ್ರಗಳು ಕೃಪೆ: ಸಂಜಯ್ ದತ್ ಇನ್ಸ್ಟಾಗ್ರಾಂ ಖಾತೆ)
ಬಾಲಿವುಡ್ನ ಖ್ಯಾತ ನಟ ಸಂಜಯ್ ದತ್ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆಯಂತೆ.
2/ 13
ಉಸಿರಾಟದ ಸಮಸ್ಯೆಯಿಂದಾಗಿ ಸಂಜಯ್ ದತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.
3/ 13
ಆಸ್ಪತ್ರೆಗೆ ಸೇರಿಸಿದ ನಂತರ ಅವರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ಅದು ನೆಗೆಟಿವ್ ಬಂದಿದೆ ಎನ್ನಲಾಗುತ್ತಿದೆ.
4/ 13
ಸಂಜೆ 6 ಗಂಟೆಗೆ ಸಂಜಯ್ ದತ್ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲೇ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಲಾಗಿದ್ದು, ಅದು ನೆಗೆಟಿವ್ ಬಂದಿದೆಯಂತೆ.
5/ 13
ಆದರೆ ಸ್ವ್ಯಾಬ್ ಟೆಸ್ಟ್ನ ವರದಿ ಇನ್ನೂ ಬರಬೇಕಿದೆಯಂತೆ. ಸಂಜಯ್ ದತ್ ಅವರಿಗೆ ಉಸಿರಾಟದ ಸಮಸ್ಯೆ ಜೊತೆಗೆ ಆಮ್ಲಜನಕದ ಮಟ್ಟ ಕಡಿಮೆಯಾಗುತ್ತಿತ್ತಂತೆ.
6/ 13
ಸಂಜಯ್ ದತ್ ಅವರ ಕುಟುಂಬ ಲಾಕ್ಡೌನ್ ಸಮಯದಲ್ಲಿ ದುಬೈನಲ್ಲಿ ಸಿಲುಕಿಕೊಂಡಿದ್ದರು. ಆಗ ಸಂಜಯ್ ದತ್ ಮುಂಬೈನಲ್ಲಿ ಒಬ್ಬರೇ ಇದ್ದರು.
7/ 13
ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಸಂಜಯ್ ದತ್ ಅವರಿಗೆ ಕೊರೋನಾ ಇಲ್ಲ ಎನ್ನಲಾಗುತ್ತಿದೆ.
8/ 13
ಸಂಜಯ್ ದತ್ ಅವರ ಸಿನಿಮಾ ವಿಷಯಕ್ಕೆ ಬಂದರೆ ಅವರ ಅಭಿನಯದ ಸಡಕ್ 2 ಒಟಿಟಿ ಮೂಲಕ ರಿಲೀಸ್ ಆಗಲಿದೆ.
9/ 13
ಸಂಜಯ್ ದತ್ ನಟಿಸಿರುವ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿನ ಅವರ ಪಾತ್ರದ ಪೋಸ್ಟರ್ ಇತ್ತೀಚೆಗಷ್ಟೆ ರಿಲೀಸ್ ಆಗಿದೆ.