Sanjana Anand: ನಟಿ ಸಂಜನಾ ಆನಂದ್, ತಮ್ಮ ಸಹಜ ನಟನೆ ಮತ್ತು ಸೌಂದರ್ಯದಿಂದ ಸ್ಯಾಂಡಲ್ವುಡ್ ಜನರ ಗಮನ ಸೆಳೆದವರು. ಒಂದು ಸಿನೆಮಾದ ನಂತರ ಸಾಲು ಸಾಲು ಸಿನೆಮಾಗಳಲ್ಲಿ ಆಫರ್ ಪಡೆದ ಸಂಜನಾ ಟಾಲಿವುಡ್ನಲ್ಲಿ ಮಿಂಚಲು ಸಿದ್ದರಾಗಿದ್ದಾರಂತೆ.
ಸಂಜನಾ ಆನಂದ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿಯರಲ್ಲಿ ಒಬ್ಬರು . `ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರದ ಮೂಲಕ ಸ್ಯಾಂಡಲ್ವುಡ್ಕೆ ನಾಯಕನಟಿಯಾಗಿ ಎಂಟ್ರಿಯಾಗಿ, ಜನರ ನೆಚ್ಚಿನ ನಟಿಯಾಗಿದ್ದಾರೆ.
2/ 8
ಇಂಜಿನಿಯರಿಂಗ್ ಪದವಿ ಪಡೆದಿರುವ ಇವರು ಡೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರು, ಆಕಸ್ಮಿಕವಾಗಿ ಚಿತ್ರರಂಗಕ್ಕೆ ಬಂದು, ಮಿಂಚುತ್ತಿದ್ದಾರೆ.
3/ 8
ಭರತನಾಟ್ಯ ಕಲಾವಿದೆಯಾಗಿರುವ ಸಂಜನಾ ಅವರಿಗೆ `ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರದಲ್ಲಿ ಸಿಕ್ಕ ಅವಕಾಶ, ಟರ್ನಿಂಗ್ ಪಾಯಿಂಟ್ ಎನ್ನುವಂತಿತ್ತು. ಇದಾದ ನಂತರ ಹಲವಾರು ಅವಕಾಶಗಳನ್ನು ಅವರು ಪಡೆದಿದ್ದಾರೆ.
4/ 8
ಪೂರ್ಣವಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳಬೇಕೆಂದು ಕೆಲಸಕ್ಕೆ ರಾಜೀನಾಮೆ ನೀಡಿದ, ಅವರು ಕುಷ್ಕ, ಸಲಗ,ಕ್ಷತ್ರಿಯ, ಮಳೆಬಿಲ್ಲು ಮುಂತಾದ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಇದೀಗ ಕನ್ನಡದ ಬೇಡಿಕೆಯಲ್ಲಿರುವ ನಟಿ ಎನ್ನಬಹುದು.
5/ 8
‘ನೇನು ಮೀಕು ಬಾಗ ಕಾವಲ್ಸಿನ ವಾಡಿನಿ’ ಎನ್ನುವ ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದು, ಇದು ಅವರ ಮೊದಲ ತೆಲುಗು ಚಿತ್ರವಾಗಿದೆ. ಈ ಚಿತ್ರದಲ್ಲಿ ಅವರ ಮಾತ್ರಕ್ಕೆ ಹೆಚ್ಚು ಮಹತ್ವವಿದೆ ಎನ್ನಲಾಗುತ್ತಿದೆ.
6/ 8
ಈಗಾಗಲೇ ಈ ಸಿನೆಮಾದ 80 ರಷ್ಟು ಭಾಗದ ಶೂಟಿಂಗ್ ಮುಗಿಸಿದ್ದು, ಇನ್ನು ಹತ್ತು ದಿನಗಳ ಕಾಲ ಚಿತ್ರೀಕರಣ ಮಾಡಿದರೆ ಸಿನಿಮಾ ಮುಗಿದು ಹೋಗುತ್ತದೆ. ಎಂದು ಸಂಜನಾ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
7/ 8
ಈ ಸಿನಿಮಾದಲ್ಲಿ ಸಂಜನಾಗೆ ಮತ್ತು ನಾಯಕ ಇಬ್ಬರಿಗೂ ಸಮಾನವಾದ ಪಾತ್ರವಿದೆ. ನಾಯಕಿಯ ಪ್ರಯಾಣದಲ್ಲಿ ಯಾರು ಯಾರು ಬರುತ್ತಾರೆ ಎಂಬುದೇ ಸಿನಿಮಾದ ಒನ್ಲೈನ್ ಆಗಿರುವುದರಿಂದ ಒಂದರ್ಥದಲ್ಲಿ ಕಥೆಯ ಪ್ರಮುಖ ಭಾಗದಲ್ಲಿ ಸಂಜನಾಗೆ ಬಹಳ ಪ್ರಾಮುಖ್ಯತೆ ಇದೆ. ಮೊದಲ ತೆಲುಗು ಸಿನಿಮಾದಲ್ಲಿಯೇ ಇಂತಹ ಕಥೆ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಸಂಜನಾ ಹೇಳಿಕೊಂಡಿದ್ದಾರೆ.
8/ 8
ಸದ್ಯ ಸಂಜನಾ ಹನಿಮೂನ್ ಎಂಬ ವೆಬ್ ಸೀರಿಸ್ನಲ್ಲಿ ಮಿಂಚುತ್ತಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಮಗಳು ನಿವೇದಿತಾ ಒಡೆತನದ ‘ಶ್ರೀಮುತ್ತು ಸಿನಿ ಕಂಬೈನ್ಸ್’ ಹಾಗೂ ಆರ್ಜೆ ಪ್ರದೀಪ್ ಅವರ ‘ಸಕ್ಕತ್ ಸ್ಟುಡಿಯೋ’ ಜೊತೆಯಾಗಿ ‘ಹನಿಮೂನ್’ ವೆಬ್ ಸೀರೀಸ್ ನಿರ್ಮಾಣ ಮಾಡಿದೆ.