Sania Mirza: ವೆಬ್ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸಾನಿಯಾ ಮಿರ್ಜಾ..!
ಈಗಾಗಲೇ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಸಾನಿಯಾ ಮಿರ್ಜಾ ಈಗ ವೆಬ್ ಸರಣಿಯಲ್ಲಿ ನಟಿಸಲಿದ್ದಾರಂತೆ. ಅವರು ಅಭಿನಯಿಸಲು ತೆಗೆದುಕೊಂಡಿರುವ ನಿರ್ಧಾರದ ಹಿಂದೆ ಒಂದು ಕಾರಣವಿದೆಯಂತೆ. (photo credit: Instagram @mirzasaniar)
News18 Kannada | November 19, 2020, 10:31 AM IST
1/ 5
ಟೆನ್ನಿಸ್ ಆಟದ ಜೊತೆಗೆ ತಮ್ಮ ಸ್ಟೈಲ್ನಿಂದ ಈಗಗಲೇ ಕೋಟಯಂತರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ ಮೂಗುತಿ ಸುಂದರಿ ಸಾನಿಯಾ ಮಿರ್ಜಾ. (photo credit: Instagram @mirzasaniar)
2/ 5
ಈ ಹಿಂದೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಸಾನಿಯಾ ಈಗ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ಅವರು ಅಭಿನಯಿಸಲು ಒಪ್ಪಿಕೊಳ್ಳಲು ಒಂದು ಬಲವಾದ ಕಾರಣವಿದೆ. ಎಂಟಿವಿ ನಿಷೇಧ್ ಅಲೋನ್ ಟುಗೆದರ್ ವೆಬ್ ಸರಣಿಯಲ್ಲಿ ಸಾನಿಯಾ ಮಿರ್ಜಾ ನಟಿಸುತ್ತಿದ್ದಾರೆ. (photo credit: Instagram @mirzasaniar)
3/ 5
ಈ ವೆಬ್ ಸರಣಿ ಟಿಬಿ ಅಥವಾ ಕ್ಷಯ ರೋಗದ ಕುರಿತು ಜಾಗೃತಿ ಮೂಡಿಸುವ ಸಿರೀಸ್ ಆಗಿದೆ. ಈ ಕಾರಣದಿಂದಲೇ ಇದರಲ್ಲಿ ನಟಿಸಲು ಸಾನಿಯಾ ಮಿರ್ಜಾ ಒಪ್ಪಿಕೊಂಡಿದ್ದಂತೆ. (photo credit: Instagram @mirzasaniar)
4/ 5
ಈ ವೆಬ್ ಸರಣಿ ಐದು ಸಂಚಿಕೆಗಳಲ್ಲಿ ಪ್ರಸಾರವಗಲಿದೆಯಂತೆ. ಈಗಾಗಲೇ ಇದರ ಶೂಟಿಂಗ್ ಪೂರ್ಣಗೊಂಡಿದೆ ಎನ್ನಲಾಗುತ್ತಿದೆ. (photo credit: Instagram @mirzasaniar)
5/ 5
ಇದೇ ತಿಂಗಳ ಅಂತ್ಯಕ್ಕೆ ಎಂಟಿವಿಯಲ್ಲಿ ಈ ವೆಬ್ ಸರಣಿ ಪ್ರಸಾರವಾಗಲಿದೆ. ಈ ವೆಬ್ ಸರಣಿಯ ಬಗ್ಗೆ ಮಾತನಾಡಿರುವ ಸಾನಿಯಾ, ಈಗಲೂ ಸಾಕಷ್ಟು ಮಂದಿ ಕ್ಷಯ ರೋಗದಿಂದ ಬಳಲುತ್ತಿದ್ದಾರೆ. ಅದರಲ್ಲೂ 30 ವರ್ಷದವರೇ ಹೆಚ್ಚಾಗಿ ಈ ರೋಗಕ್ಕೆ ತುತ್ತಾಗಿದ್ದಾರೆ. ಇಂತಹ ಕಾಯಿಲೆ ಬಗ್ಗೆ ಮತ್ತಷ್ಟು ಎಚ್ಚರಿಕೆ ವಹಿಸುವ ಹಾಗೂ ಅರಿವು ಮೂಡಿಸುವ ಅಗತ್ಯವಿದೆ ಎಂದಿದ್ದಾರೆ. (photo credit: Instagram @mirzasaniar)