ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಖಳ ನಟರಾಗಿ ಗುರುತಿಸಿಕೊಂಡಿದ್ದ ಲಕ್ಷ್ಮಣ್ ಅವರು ಸಾವನ್ನಪ್ಪಿದ್ದಾರೆ. ಇಂದು ಮುಂಜಾನೆ 4 ಗಂಟೆಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
2/ 8
ಲಕ್ಷ್ಮಣ್ ಅವರು ಬಹಳ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಮೂಡಲಪಾಳ್ಯದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
3/ 8
ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ರಜನಿಕಾಂತ್ ಸೇರಿದಂತೆ ದಿಗ್ಗಜ ನಟರೊಂದಿಗೆ ನಟರೊಂದಿಗೆ ಲಕ್ಷ್ಮಣ್ ಅವರು ನಟಿಸಿದ್ದರು. ಖಳ ನಾಯಕನಾಗಿ ಮಿಂಚಿದ್ದರು.
4/ 8
ಲಕ್ಷ್ಮಣ ಅವರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಲನ್ ರೋಲ್ ಮಾಡಿ ಹೆಸರು ಪಡೆದಿದ್ದರು. ಆ ವಿಲನ್ ಪಾತ್ರಕ್ಕೆ ಎಷ್ಟರ ಮಟ್ಟಿಗೆ ಜೀವ ತುಂಬಿದ್ದರು ಎಂದರೆ ಇವರನ್ನು ಜನ ಆಚೆ ನೋಡಿದ್ರೂ ಭಯ ಪಡ್ತಾ ಇದ್ರು.
5/ 8
ಲಕ್ಷ್ಮಣ್ ಅವರು ಬೆಂಗಳೂರಿನಲ್ಲಿ ಜನಿಸಿದ್ದರು. ಇವರ ತಂದೆ ಆರ್ಮಿ ಅಧಿಕಾರಿ ಆಗಿದ್ದರು. ಲಕ್ಷ್ಮಣ್ ಅವರು 8 ಜನ ಮಕ್ಕಳಂತೆ. ಬಡ ಕುಟುಂಬದಲ್ಲಿ ಬೆಳೆದ ಲಕ್ಷ್ಮಣ್ ಕರುನಾಡಿನಲ್ಲೇ ಮಿಂಚಿದ್ದರು.
6/ 8
ಲಕ್ಷ್ಮಣ್ ಅವರು ಎಸ್ಎಸ್ಎಲ್ಸಿ ವರೆಗೂ ಓದಿದ್ದಾರೆ. ಬಡತನ ಇದ್ದ ಕಾರಣ ಓದು ವಿಟ್ಟು, ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದ್ರಂತೆ. ವಾರಕ್ಕೆ 15 ರೂಪಾಯಿ ಸಿಕ್ತಿತ್ತಂತೆ.
7/ 8
ಲಕ್ಷ್ಮಣ್ ಅವರು ಹೆಚ್ಚಾಗಿ ಅಂಬರೀಶ್ ಸಿನಿಮಾಗಳಿಗೆ ವಿಲನ್ ಆಗಿ ನಟಿಸಿದ್ದಾರೆ. ಅಂಬರೀಶ್ ಅವರ ಸಿನಿಮಾ ಅಂದ್ರೆ ಇವರೇ ವಿಲನ್ ಆಗಬೇಕಿತ್ತಂತೆ.
8/ 8
ಲಕ್ಷ್ಮಣ್ ಅವರು ಸಾವಿಗೆ ಸಿನಿಮಾ ರಂಗದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದು. ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.