ಸಪ್ತಪದಿ ತುಳಿದ ಧ್ರುವ ಸರ್ಜಾ-ಪ್ರೇರಣಾ ಶಂಕರ್; ಸ್ಯಾಂಡಲ್​ವುಡ್​ ತಾರೆಯರಿಂದ ಶುಭ ಹಾರೈಕೆ

Dhruva sarja Prerana Wedding: ಸ್ಯಾಂಡಲ್​​ವುಡ್​ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತನ್ನ ಬಾಲ್ಯದ ಗೆಳತಿ ಪ್ರೇರಣಾ ಶಂಕರ್​ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೆ.ಪಿ ನಗರದ ಸಂಸ್ಕೃತ ಬೃಂದಾವನ ಮಂಟಪದಲ್ಲಿ ಇವರ ಮದುವೆ ಕಾರ್ಯಕ್ರಮ ನಡೆದಿದ್ದು, ಸ್ಯಾಂಡಲ್​​ವುಡ್​ ಸಿನಿ ತಾರೆಯರು ಈ ನವ ಜೋಡಿಗೆ ಹಾರೈಸಿದ್ದಾರೆ. ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ವಿನಯ್ ರಾಜ್​​ಕುಮಾರ್, ರಾಘವೇಂದ್ರ ರಾಜ್​​ಕುಮಾರ್, ಆರುಮುಗಂ ರವಿಶಂಕರ್ ಸೇರಿದಂತೆ ಆನೇಕ ನಟ-ನಟಿಯರು ಧ್ರುವ ಸರ್ಜಾ- ಪ್ರೇರಣಾ ಶಂಕರ್​ ಮದುವೆಯಲ್ಲಿ ಭಾಗಿಯಾಗಿ ನವ ವಧು-ವರರಿಗೆ ಹಾರೈಸಿದ್ದಾರೆ.

First published: