ನಟಿ ಗಿರಿಜಾ ಲೋಕೇಶ್ ಅವರು ಜನವರಿ 10, 1951 ರಂದು ಜನಿಸಿದ್ದಾರೆ. ರಂಗಭೂಮಿ ಕಲಾವಿದರಾಗಿ, ಸಿನಿಮಾ ಲೋಕದಲ್ಲಿ ಮಿಂಚಿದ್ದಾರೆ. ಹಲವಾರು ಸಿನಿಮಾಗಳನ್ನು ಮಾಡಿದ್ದಾರೆ.
2/ 8
ಗಿರಿಜಾ ಲೋಕೇಶ್ ಕನ್ನಡದ ಹೆಸರಾಂತ ಚಲನಚಿತ್ರ, ರಂಗಭೂಮಿ ಮತ್ತು ಕಿರುತೆರೆ ನಟಿ. ಕಾಕನ ಕೋಟೆ, ದಾಹ, ಭುಜಂಗಯ್ಯನ ದಶಾವತಾರ ಮತ್ತು ಯಾರಿಗೂ ಹೇಳ್ಬೇಡಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
3/ 8
ಗಿರಿಜಾ ಲೋಕೇಶ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡು ಸ್ಮರಣೀಯ ಅಭಿನಯ ಮಾಡಿದ್ದಾರೆ. ಗಿರಿಜಾ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಗಮನಾರ್ಹ ಅಭಿನಯ ನೀಡಿದ್ದಾರೆ.
4/ 8
ಚಿತ್ರರಂಗಕ್ಕೆ ಬರುವುದಕ್ಕಿಂತ ಮೊದಲೇ ರಂಗಭೂಮಿ ಕಲಾವಿದೆಯಾಗಿರುವ ಗಿರಿಜಾ ಪ್ರಭಾತ್ ಶಿಶುವಿಹಾರ, ರಂಗಸಂಪದ, ನಟರಂಗ ಮುಂತಾದ ಜನಪ್ರಿಯ ತಂಡಗಳಲ್ಲಿ ಸಾವಿರಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ.
5/ 8
ಕನ್ನಡವಲ್ಲದೇ ಉರ್ದು, ತಮಿಳು, ತೆಲುಗು, ಮಲಯಾಳಂ ನಾಟಕಗಳಲ್ಲೂ ನಟಿಸಿದ್ದಾರೆ. ಗಿರಿಜಾ ಅಭಿನಯದ ಕಿರುತೆರೆ ಧಾರಾವಾಹಿಗಳ ಸಂಖ್ಯೆ 300 ದಾಟುತ್ತದೆ.
6/ 8
ವೈಶಾಲಿ ಕಾಸರವಳ್ಳಿ ನಿರ್ದೇಶನದ ಮುತ್ತಿನ ತೋರಣ ಗಿರಿಜಾ ಅವರ ಪ್ರತಿಭೆಯನ್ನು ಒರೆಗೆ ಹಚ್ಚಿದ ಧಾರಾವಾಹಿ. ಭುಜಂಗಯ್ಯನ ದಶಾವತಾರ ಮತ್ತು ಸಿದ್ಲಿಂಗು ಚಿತ್ರಗಳಿಗೆ ಕರ್ನಾಟಕ ರಾಜ್ಯ ಸರ್ಕಾರದ ಶ್ರೇಷ್ಠ ಪೆÇೀಷಕ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ.
7/ 8
ಗಿರಿಜಾ ಅವರ ಪತಿ ಕನ್ನಡದ ಮೇರುನಟ ದಿವಂಗತ ಲೋಕೇಶ್. ಪ್ರಖ್ಯಾತ ಕಿರುತೆರೆ ಮತ್ತು ಚಲನಚಿತ್ರ ನಟ ಸೃಜನ್ ಲೋಕೇಶ್ ಮತ್ತು ನಟಿ ಪೂಜಾ ಲೋಕೇಶ್ ಈ ದಂಪತಿಯ ಮಕ್ಕಳು.
8/ 8
ಸದ್ಯ ಸತ್ಯ ಧಾರಾವಾಹಿಯಲ್ಲಿ ನಟಿಯ ಅಜ್ಜಿಯ ಪಾತ್ರ ಮಾಡುತ್ತಿದ್ದಾರೆ. ಆ ಪಾತ್ರದಲ್ಲೂ ಗಿರಿಜಮ್ಮ ಎಲ್ಲರ ಗಮನ ಸೆಳೆದಿದ್ದಾರೆ. ಈಗಲೂ ಸಹ ನಟನೆ ಅಂದ್ರೆ ಅವರಿಗೆ ತುಂಬಾ ಇಷ್ಟ.