Upendra-Priyanka: ರಿಯಲ್ ಸ್ಟಾರ್ ಉಪೇಂದ್ರ ಮನೆಯಲ್ಲಿ ಸಂಕ್ರಾಂತಿ ಸಡಗರ: ಹಬ್ಬದ ಫೋಟೋ ಹಂಚಿಕೊಂಡ ಪ್ರಿಯಾಂಕ!
ಉಪೇಂದ್ರ ಮನೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಉಪ್ಪಿ ಪತ್ನಿ ಪ್ರಿಯಾಂಕಾ ಉಪೇಂದ್ರ, ಮಕ್ಕಳಾದ ಐಶ್ವರ್ಯಾ, ಆಯುಷ್ ಅವರು ಸಡಗರದಿಂದ ಹಬ್ಬದಲ್ಲಿ ಭಾಗಿ ಆಗಿದ್ದಾರೆ.
ದೇಶದೆಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಸ್ಯಾಂಡಲ್ವುಡ್ ಸೆಲೆಬ್ರಿಟಿಗಳ ಮನೆಗಳಲ್ಲೂ ಹಬ್ಬದ ಸಂಭ್ರಮ ಕಳೆಗಟ್ಟಿದೆ. ವರ್ಷದ ಮೊದಲ ಹಬ್ಬವನ್ನು ಕುಟುಂಬದವರ ಜೊತೆಗೂಡಿ ಆಚರಿಸಲಾಗುತ್ತಿದೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಮನೆಯಲ್ಲೂ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗಿದೆ.
2/ 7
ನಟ ಉಪೇಂದ್ರ ಅವರ ಮನೆಯಲ್ಲಿ ಸಂಕ್ರಾಂತಿ ಸಡಗರ ಜೋರಾಗಿದೆ. ಈ ಫೋಟೋಗಳನ್ನು ಪ್ರಿಯಾಂಕ ಉಪೇಂದ್ರ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಉಪ್ಪಿ ಕೂಡ ತಮ್ಮ ಮಕ್ಕಳ ಜೊತೆ ಹಬ್ಬದಲ್ಲಿ ಭಾಗಿಯಾಗಿದ್ದಾರೆ.
3/ 7
ಉಪೇಂದ್ರ ಮನೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಉಪ್ಪಿ ಪತ್ನಿ ಪ್ರಿಯಾಂಕಾ ಉಪೇಂದ್ರ, ಮಕ್ಕಳಾದ ಐಶ್ವರ್ಯಾ, ಆಯುಷ್ ಅವರು ಸಡಗರದಿಂದ ಹಬ್ಬದಲ್ಲಿ ಭಾಗಿ ಆಗಿದ್ದಾರೆ.
4/ 7
ಬಗೆಬಗೆಯ ಅಡುಗೆಗಳನ್ನು ಮಾಡಿ, ದೇವರಿಗೆ ನೈವೇದ್ಯ ಅರ್ಪಿಸಿ, ಪೂಜೆ ಸಲ್ಲಿಸಿ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗಿದೆ. ಈ ವೇಳೆ ಉಪೇಂದ್ರ, ಪತ್ನಿ ಪ್ರಿಯಾಂಕಾ ಉಪೇಂದ್ರ, ಮಕ್ಕಳಾದ ಐಶ್ವರ್ಯಾ, ಆಯುಷ್ ಫೋಟೋಗೆ ಪೋಸ್ ನೀಡಿದ್ದಾರೆ.
5/ 7
ಉಪೇಂದ್ರ ಅವರ ಮನೆಯಲ್ಲಿ ಪ್ರತಿ ಹಬ್ಬವನ್ನು ಜೋರಾಗಿ ಆಚರಿಸಲಾಗುತ್ತದೆ. 2022ರ ಸಂಕ್ರಾಂತಿ ಹಬ್ಬದಲ್ಲೂ ಆ ಪದ್ದತಿ ಮುಂದುವರಿದಿದೆ. ಸಂಪ್ರದಾಯಿಕ ಉಡುಗೆಗಳನ್ನು ಧರಿಸಿ ಉಪ್ಪಿ ಕುಟುಂಬದ ಸದಸ್ಯರು ಫೋಟೋಗೆ ಪೋಸ್ ನೀಡಿದ್ದಾರೆ.
6/ 7
ಸದಾ ಎಲ್ಲರನ್ನೂ ಮನೆಗೆ ಕರೆದು ಹಬ್ಬ ಆಚರಿಸುತ್ತಿದ್ದ ಉಪ್ಪಿ ಕುಟುಂಬ, ಕೊರೋನಾ ಭೀತಿ ಇರುವ ಕಾರಣ ಹೆಚ್ಚು ಅತಿಥಿಗಳನ್ನು ಕರೆಯಲು ಸಾಧ್ಯವಾಗಿಲ್ಲ. ಕೇವಲ ಕುಟುಂಬದವರು ಜೊತೆಗೂಡಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ.
7/ 7
ಉಪೇಂದ್ರ ಅವರ ಪುತ್ರಿ ಐಶ್ವರ್ಯಾ ಹಾಗೂ ಪುತ್ರ ಆಯುಷ್ ಹಬ್ಬದ ಪ್ರಯುಕ್ತ ವಿಶೇಷ ಉಡುಗೆ ಧರಿಸಿ ಅಣ್ಣ-ತಂಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಐಶ್ವರ್ಯಾ ಉಪೇಂದ್ರ ಈಗಾಗಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದಾಳೆ. ‘ದೇವಕಿ’ ಸಿನಿಮಾದಲ್ಲಿ ಮುಖ್ಯ ಪಾತ್ರ ನಿಭಾಯಿಸಿದ್ದಳು.