ತಂದೆ-ತಾಯಿಯರ ಮದುವೆಯ ದಿನ ಎಂದು ತಿಳಿದು ಸ್ವಲ್ಪ ತಡವಾಗಿ ವಿಶ್ ಮಾಡಿ ಅದಕ್ಕೆ ಭಾವನಾತ್ಮಕವಾಗಿ ಪೋಸ್ಟ್ ಮಾಡಿರುವ ರಶ್ಮಿಕಾ, . ನನ್ನನ್ನು ಈ ಜಗತ್ತಿಗೆ ಕರೆತಂದಿದ್ದಕ್ಕಾಗಿ, ನಾನು ನಿಮ್ಮನ್ನು ಪ್ರೀತಿಸುವಂತೆ ಬದುಕಿದ್ದಕ್ಕಾಗಿ ತುಂಬಾ ಧನ್ಯವಾದಗಳು. ನಾನು ಈ ಮಟ್ಟಕ್ಕೆ ಬರಲು ನೀವೇ ಕಾರಣ. ನಾನು ನಿಮಗೆ ಸದಾ ಋಣಿಯಾಗಿರುತ್ತೇನೆ ಎಂದು ರಶ್ಮಿಕಾ ಬರೆದುಕೊಂಡು ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಶ್ಮಿಕಾ ಸದ್ಯ ದಳಪತಿ ವಿಜಯ್ ಜೊತೆ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಚಿತ್ರವನ್ನು ವಂಶಿ ಪೈಡಿಪಲ್ಲಿ ನಿರ್ದೇಶಿಸುತ್ತಿದ್ದಾರೆ.ನಿರ್ಮಾಪಕರಾದ ದಿಲ್ ರಾಜು, ಶಿರೀಶ್, ಪರಮ್ ವಿ ಪೊಟ್ಲೂರಿ ಮತ್ತು ಪರ್ಲ್ ವಿ ಪೊಟ್ಲೂರಿ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಮತ್ತು ಪಿವಿಪಿ ಬ್ಯಾನರ್ಗಳಲ್ಲಿ ಸಹ-ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ವಾರಿಸು ಎಂದು ಹೆಸರಿಡಲಾಗಿದೆ.