Actress Ramya: ಬ್ಯಾಂಕಾಕ್ನಲ್ಲಿ ಮೋಹಕ ತಾರೆ ರಮ್ಯಾ, ಫೋಟೋ ನೋಡಿ ದೃಷ್ಟಿ ತೆಗೆಸಿಕೊಳ್ಳಿ ಅಂದ್ರು ಫ್ಯಾನ್ಸ್
Ramya In Bangkok: ರಮ್ಯಾ ಸಿನಿಮಾಗಳಿಂದ ದೂರವಿದ್ದರೂ ಸಹ ಅಭಿಮಾನಿಗಳ ಪಾಲಿಗೆ ಮಾತ್ರ ಮೋಹಕ ತಾರೆಯಾಗಿಯೇ ಉಳಿದಿದ್ದಾರೆ. ಕಳೆದ ಕೆಲ ದಿನಗಳಿಂದ ಆಕ್ಟೀವ್ ಆಗಿರುವ ರಮ್ಯಾ ಸದ್ಯ ಬ್ಯಾಂಕಾಕ್ಗೆ ಹೋಗಿದ್ದು, ಅಲ್ಲಿನ ಫೋಟೋಗಳು ಫುಲ್ ವೈರಲ್ ಆಗುತ್ತಿದೆ.
ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಎಂದರೆ ಅಭಿಮಾನಿಗಳಿಗೆ ಬಹಳ ಇಷ್ಟ. ಅವರು ಕೆಲ ಕಾಲ ಸಿನಿಮಾರಂಗದಿಂದ ದೂರವಿದ್ದಾಗ ಸಹ ಅಭಿಮಾನಿಗಳು ಅವರನ್ನು ನೆನಪಿಸಿಕೊಂಡಿದ್ದಾರೆ. ಇದೀಗ ರಮ್ಯಾ ಮರಳಿ ಬಂದಿದ್ದು ಫುಲ್ ಆಕ್ಟೀವ್ ಆಗಿದ್ದಾರೆ.
2/ 8
ರಮ್ಯಾ ಮತ್ತೆ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಅಧಿಕೃತವಾಗಿದೆ, ಆದರೆ ಯಾವ ಸಿನಿಮಾ ಸೇರಿದಂತೆ ಈ ಬಗ್ಗೆ ಯಾವುದೇ ಮಾಹಿತಿಯನ್ನು ರಮ್ಯಾ ನೀಡಿಲ್ಲ. ಫ್ಯಾನ್ಸ್ ಸಹ ಬಹಳ ಕಾತುರದಿಂದ ಈ ಸುದ್ದಿ ಕೇಳಲು ಕಾಯುತ್ತಿದ್ದಾರೆ.
3/ 8
ಈ ನಡುವೆ ರಮ್ಯಾ ಬ್ಯಾಂಕಾಕ್ಗೆ ಹಾರಿದ್ದು, ಅಲ್ಲಿನ ಕೆಲ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನೆಚ್ಚಿನ ನಟಿಯ ಫೋಟೋಗಳನ್ನು ನೋಡಿದ ಅಭಿಮಾನಿಗಳು ದೃಷ್ಟಿ ತೆಗೆಸಿಕೊಳ್ಳಿ ಎಂದು ಕಾಮೆಂಟ್ ಮಾಡಿದ್ದಾರೆ.
4/ 8
ಸ್ನೇಹಿತೆಯರ ಜೊತೆ ರಮ್ಯಾ ಬ್ಯಾಂಕಾಕ್ ಹೋಗಿದ್ದು, ಫುಲ್ ಮಸ್ತಿ ಮೋಡ್ನಲ್ಲಿದ್ದಾರೆ. ಸದ್ಯ ಅವರು ಶೇರ್ ಮಾಡಿಕೊಂಡಿರುವ ಫೋಟೋ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಕಾಮೆಂಟ್ಗಳ ಮಳೆ ಸುರಿಸಿದ್ದಾರೆ.
5/ 8
ಮೂಲಗಳ ಪ್ರಕಾರ ರಮ್ಯಾ ಕಮ್ ಬ್ಯಾಕ್ ಮಾಡಲು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ಹಲವಾರು ಕಥೆಗಳನ್ನು ಕೇಳುತ್ತಿದ್ದು, ಉತ್ತಮ ಸಿನಿಮಾ ಮೂಲಕ ತೆರೆಯ ಮೇಲೆ ಬರಲು ಪ್ಲ್ಯಾನ್ ಮಾಡಿದ್ದಾರಂತೆ.
6/ 8
ಅಭಿ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ರಮ್ಯಾ ಬಹುಕಾಲ ಸಿನಿರಂಗವನ್ನು ಆಳಿದ್ದಾರೆ. ನಾಗರಹಾವು ಸಿನಿಮಾದ ನಂತರ ನಟಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಸಿನಿಮಾದಿಂದ ದೂರ ಇದ್ದರು.
7/ 8
ಇದೀಗ ರಮ್ಯಾ ಫುಲ್ ಆಕ್ಟೀವ್ ಆಗಿದ್ದು ಸಭೆ, ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಹ ಆಗಾಗ ಫೋಟೋಗಳನ್ನು ಶೇರ್ ಮಾಡಿಕೊಂಡು ಫ್ಯಾನ್ಸ್ ಜೊತೆ ಸಂಪರ್ಕದಲ್ಲಿದ್ದಾರೆ.
8/ 8
ರಮ್ಯಾ ಅಭಿಮಾನಿಗಳಂತೂ ಸಿನಿಮಾದ ಅಪ್ಡೇಟ್ಗಾಗಿ ಕಾದು ಕುಳಿತಿದ್ದಾರೆ. ಅಲ್ಲದೇ, ಈ ಬಗ್ಗೆ ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಿದ್ದಾರೆ.