Ramya: ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾಗೆ ಇಂದು ಹುಟ್ಟುಹಬ್ಬದ ಸಂಭ್ರಮ

ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. 37ನೇ ವಸಂತಕ್ಕೆ ಕಾಲಿರಿಸಿರುವ ರಮ್ಯಾ ಹೊಸ ವರ್ಷದ ಬಳಿಕ ಮತ್ತೊಮ್ಮೆ ಚಂದನವನಕ್ಕೆ ಕಾಲಿಡಲು ಸಿದ್ದರಾಗಿದ್ದಾರೆ. 10 ವರ್ಷಗಳ ಕಾಲ ಕನ್ನಡ ಚಿತ್ರರಂಗವನ್ನಾಳಿದ ರಮ್ಯಾ ಬಳಿಕ ರಾಜಕೀಯದಲ್ಲಿ ಹೊಸ ಜೀವನ ಆರಂಭಿಸಿದರು. ಕಾಂಗ್ರೆಸ್​ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿ ದೆಹಲಿಯಲ್ಲಿ ಸಕ್ರಿಯ ರಾಜಕೀಯದಲ್ಲಿ ತೊಡಗಿದ ಅವರು ಲೋಕಸಭಾ ಚುನಾವಣೆ ಬಳಿಕ ದೂರಸರಿದಿದ್ದಾರೆ. ಇತ್ತೀಚೆಗಷ್ಟೆ 2019ರ ಬಳಿಕ ಮತ್ತೆ ಚಿತ್ರರಂಗಕ್ಕೆ ಬರುವ ಸುಳಿವನ್ನು ಟ್ವೀಟರ್​ ಮೂಲಕ ನೀಡಿದ್ದು, ಮತ್ತೊಮ್ಮೆ ಅವರನ್ನು ಕಾಣಲು ಅಭಿಮಾನಿಗಳು ಕಾತುರರಾಗಿದ್ದಾರೆ. (ಚಿತ್ರಕೃಪೆ: ರಮ್ಯಾ ಫೇಸ್​ಬುಕ್ ​ಪುಟ)

First published: