ಸ್ಯಾಂಡಲ್ವುಡ್ನಲ್ಲಿ ಇಂದಿಗೂ ನಂಬರ್ ಒನ್ ಕ್ವೀನ್ ಎಂದರೆ ನೆನಪಿಗೆ ಬರುವುದು ನಟಿ ರಮ್ಯಾ. ಕನ್ನಡ ಚಿತ್ರರಂಗದಿಂದ ದೂರ ಸರಿದರೂ ಇವರ ಬೇಡಿಕೆ ಮಾತ್ರ ಕುಗ್ಗಿಲ್ಲ. ರಾಜಕಾರಣದಿಂದ ದೂರಾಗಿರುವ ನಟಿ ರಮ್ಯ ಮತ್ತೆ ಸಿನಿಮಾ ಮೇಲೆ ನಟಿಸಬೇಕು ಎಂಬುದು ಆಶಯ. ರಾಜಕಾರಣದಿಂದ ದೂರಾದ ಬಳಿಕ ಸಾಮಾಜಿಕ ಜಾಲತಾಣಕ್ಕೆ ಮತ್ತೆ ಮರಳಿರುವ ರಮ್ಯ ಮತ್ತೆ ಸಿಕ್ಕಾಪಟ್ಟೆ ಕ್ರಿಯಾಶೀಲರಾಗಿದ್ದಾರೆ. ಸದ್ಯ ಹಾಲಿಡೇ ಮೂಡ್ನಲ್ಲಿರುವ ರಮ್ಯಾ ತಮ್ಮ ಜನ್ಮದಿನದ ಸಂಭ್ರಮದಲ್ಲಿದ್ದಾರೆ.
ಮೋಹಕ ತಾರೆ ರಮ್ಯಾ ಅವರ ಅಭಿನಯ ಹಾಗೂ ಸೌಂದರ್ಯಕ್ಕೆ ಮಾರು ಹೋಗದವರಿಲ್ಲ.
2/ 7
ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಉಸ್ತುವಾರಿಯನ್ನು ಹೊತ್ತಿದ್ದ ರಮ್ಯಾ ಲೋಕಸಭೆ ಚುನಾವಣೆಯಲ್ಲಿನ ಸೋಲಿನ ಬಳಿಕ ಎಲ್ಲ ಸೋಷಿಯಲ್ ಮೀಡಿಯಾ ಖಾತೆ ಡಿ ಆಕ್ಟಿವೇಟ್ ಮಾಡಿ ಅಜ್ಞಾತವಾಸಕ್ಕೆ ತೆರಳಿದ್ದರು.
3/ 7
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಕ್ರಿಯಾಶೀಲರಾಗಿರುವ ನಟಿ, ರಾಜಕಾರಣಿ ಅಭಿಮಾನಿಗಳಿಗೆ ಸದಾ ಅಪ್ಟೇಡ್ ನೀಡುತ್ತಿರುತ್ತಾರೆ.
4/ 7
ಸದಾ ಆಧ್ಯಾತ್ಮ, ಪುಸ್ತಕದಂತಹ ಫೋಟೋಗಳನ್ನು ಫೋಸ್ಟ್ ಮಾಡುವ ಮೂಲಕ ನಟಿ ಗಮನಸೆಳೆಯುತ್ತಿದ್ದಾರೆ
5/ 7
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸೆಲ್ಫಿಯ ವಿಭಿನ್ನ ಫೋಸ್ ನೀಡುವ ಮೂಲಕ ಇತ್ತೀಚೆಗೆ ಗಮನಸೆಳೆದಿದ್ದರು.
6/ 7
ಸದ್ಯ ರಾಜಕೀಯದಿಂದ ದೂರವಿರುವ ನಟಿ ಮತ್ತೆ ನಟನೆಗೆ ಮರಳಲಿ ಎಂಬುದು ಅವರ ಅಭಿಮಾನಿಗಳ ಆಶಯ
7/ 7
ಸದ್ಯ ಹಾಲಿಡೇ ವೆಕೆಷನಲ್ ಇರುವ ನಟಿ ರಮ್ಯಾ ಅಲ್ಲಿಯೇ ಹುಟ್ಟುಹಬ್ಬ ಆಚರಿಸುವ ಸಾಧ್ಯತೆ ಇದೆ