ಮೋಹಕತಾರೆ ರಮ್ಯಾರಂತೆಯೇ ನಟಿ ಐಂದ್ರಿತಾ ರೇ ಕೂಡ ಕಿಡಿ ಕಾರಿದ್ದರು. ಪದೇ ಪದೆ ತಪ್ಪು ಮಾಡುತ್ತಿರುವವರ ಬಗ್ಗೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಐಂದ್ರಿತಾ ಟ್ವೀಟ್ ಮಾಡುವ ಮೂಲಕ ಪ್ರಶ್ನೆ ಮಾಡಿದ್ದರು. ಇದರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತೇಜಸ್ವಿ ಸೂರ್ಯ, ಮನೇಕಾ ಗಾಂಧಿಯವರಿಗೆ ಟ್ಯಾಗ್ ಮಾಡಿ ಆಕ್ರೋಶ ಹೊರ ಹಾಕಿದ್ದರು.