ಸ್ಯಾಂಡಲ್ವುಡ್ನಲ್ಲಿ 2022ರಲ್ಲಿ ಯಾವ್ಯಾವ ಸಿನಿಮಾಗಳು 100 ಕೋಟಿ ಕ್ಲಬ್ ಸೇರಿವೆ ಎನ್ನುವ ಕುತೂಹಲ ನಿಮಗಿದೆಯಾ? ಪ್ರೇಕ್ಷಕರು ಮೆಚ್ಚಿ ಕೊಂಡಾಡಿದ ಟಾಪ್ 5 ಸಿನಿಮಾಗಳಿವು.
2/ 8
2022ರಲ್ಲಿ ರಿಲೀಸ್ ಆದ ಸಿನಿಮಾಗಳಲ್ಲಿ ಕೆಜಿಎಫ್ 2 ಕೂಡಾ ಒಂದು. ಏಪ್ರಿಲ್ 14ರಂದು ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಯಿತು. ಈ ಸಿನಿಮಾ ಗಳಿಸಿದ್ದು 1250 ಕೋಟಿ ರೂಪಾಯಿ.
3/ 8
ಮಾರ್ಚ್ 17 2022ರಂದು ತೆರೆಕಂಡ ಜೇಮ್ಸ್ ಸಿನಿಮಾ ವ್ಯಾಪಕ ಪ್ರತಿಕ್ರಿಯೆ ಪಡೆಯಿತು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 150.7 ಕೋಟಿ ರೂಪಾಯಿ ಗಳಿಸಿದೆ.
4/ 8
ಕರಾವಳಿ ಹುಡುಗನ ನಿರ್ದೇಶನದಲ್ಲಿ ಬಂದ ಮತ್ತೊಂದು ಪ್ರಮುಖ ಸಿನಿಮಾ 777ಚಾರ್ಲಿ. ರಕ್ಷಿತ್ ಅವರ ಈ ಸಿನಿಮಾ ದೇಶಾದ್ಯಂತ ಸುದ್ದಿ ಮಾಡಿತು. ಇದು ಜೂನ್ 10, 2022ರಂದು ರಿಲೀಸ್ ಆಗಿ ಭರ್ಜರಿಯಾಗಿ 105.7 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
5/ 8
ಚಾರ್ಲಿ ಸಿನಿಮಾದಲ್ಲಿ ನಟಿ ಸಂಗೀತಾ ಶೃಂಗೇರಿ, ರಕ್ಷಿತ್ ಶೆಟ್ಟಿ ನಟಿಸಿದ್ದರು. ಈ ಸಿನಿಮಾವನ್ನು ಕಾಶ್ಮೀರದಲ್ಲಿಯೂ ಚಿತ್ರೀಕರಿಸಲಾಗಿದೆ.
6/ 8
ಜುಲೈ 28 2022ರಂದು ರಿಲೀಸ್ ಆದ ವಿಕ್ರಾಂತ್ ರೋಣ ಸಿನಿಮಾ ಮಿಶ್ರ ಪ್ರತಿಕ್ರಿಯೆಯನ್ನು ಪಡೆದರೂ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಸಿನಿಮಾ 184.5 ಕೋಟಿ ಕಲೆಕ್ಷನ್ ಮಾಡಿದೆ.
7/ 8
ರಿಷಬ್ ಶೆಟ್ಟಿ ಬರೆದು, ನಿರ್ದೇಶಿಸಿ, ನಟಿಸಿದ ಕಾಂತಾರ ಸಿನಿಮಾ ಸೆಪ್ಟೆಂಬರ್ 30 2022ರಂದು ರಿಲೀಸ್ ಆಯಿತು. 16 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾದ ಸಿನಿಮಾ 400 ಕೋಟಿ ರೂ. ಕಲೆಕ್ಷನ್ ಮಾಡಿದೆ.
8/ 8
ಇದೀಗ ಸಿನಿಮಾ ತುಳು ಭಾಷೆಯಲ್ಲಿಯೂ ರಿಲೀಸ್ ಆಗಿದ್ದು ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ಮೊತ್ತ ಇನ್ನಷ್ಟು ಹೆಚ್ಚಾಗಲಿದೆ.