Ashika Rangnath: 2016 ರಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಇವರು `ಕ್ರೇಜಿ ಬಾಯ್ 'ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಈಗ ಸ್ಯಾಂಡಲ್ವುಡ್ನ ಟಾಪ್ ನಟಿಯರು ಲಿಸ್ಟ್ನಲ್ಲಿ ಆಶಿಕಾ ರಂಗನಾಥ ಸ್ಥಾನ ಪಡೆದುಕೊಂಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಮಿಲ್ಕ್ ಬ್ಯೂಟಿ ಎಂದೇ ಖ್ಯಾತಿಯಾಗಿರುವ ಆಶಿಕಾ ರಂಗನಾಥ ಚಂದನವನದ ಪ್ರತಿಭಾನಿತ್ವ ನಟಿ. ಸದ್ಯ ಈ ಕ್ಯೂಟಿ ಹಾಟ್ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
2/ 7
2016 ರಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಇವರು `ಕ್ರೇಜಿ ಬಾಯ್ 'ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಈಗ ಸ್ಯಾಂಡಲ್ವುಡ್ನ ಟಾಪ್ ನಟಿಯರು ಲಿಸ್ಟ್ನಲ್ಲಿ ಆಶಿಕಾ ರಂಗನಾಥ ಸ್ಥಾನ ಪಡೆದುಕೊಂಡಿದ್ದಾರೆ.
3/ 7
1996, ಆಗಸ್ಟ್ 5 ರಂದು ಹಾಸನದಲ್ಲಿ ಜನಿಸಿದರು. ತಂದೆ ರಂಗನಾಥ್ ಸಿವಿಲ್ ಕಾಂಟ್ರಾಕ್ಟರ್ ಮತ್ತು ತಾಯಿ ಸುಧಾ ಗೃಹಿಣಿ. ಇವರ ಹಿರಿಯ ಸಹೋದರಿ ಅನುಷಾ ಕಿರುತೆರೆಯ ಪ್ರಮುಖ ನಟಿ.
4/ 7
ಹಲವು ನೃತ್ಯ ಪ್ರಕಾರಗಳಲ್ಲಿ ಪರಿಣಿತಿ ಹೊಂದಿರುವ ಆಶಿಕಾ ಬಾಲ್ಯದಿಂದಲೂ ಹಲವು ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ.
5/ 7
2014 ರಲ್ಲಿ ನಡೆದ `ಕ್ಲೀನ್ ಆಂಡ್ ಕ್ಲಿಯರ್ ಫ್ರೇಶ್ ಪೇಸ್' ಸ್ಪರ್ಧೆಯಲ್ಲಿ ಭಾಗವಹಿಸಿ ರನ್ನರ್-ಅಪ್ ಅಗಿದ್ದರು. ನಿರ್ದೇಶಕ ಮಹೇಶ್ ಬಾಬು ಇವರನ್ನು ತಮ್ಮ `ಕ್ರೇಜಿ ಬಾಯ್' ಚಿತ್ರದ ಮೂಲಕ ಚಂದನವನಕ್ಕೆ ಪರಿಚಯಿಸಿದರು.
6/ 7
ನಂತರ `ಮಾಸ್ ಲೀಡರ್','ಮುಗಳು ನಗೆ','ರಾಜು ಕನ್ನಡ ಮೀಡಿಯಂ', ಮುಂತಾದ ಚಿತ್ರಗಳಲ್ಲಿ ನಟಿಸಿ ಮುನ್ನೆಲೆಗೆ ಬಂದರು. 2018 ರಲ್ಲಿ ಆಶಿಕಾ ಮತ್ತು ಶರಣ್ ಕಾಂಬಿನೇಶನ್ಲ್ಲಿ ಬಂದ 'ರ್ಯಾಂಬೋ 2' ಚಿತ್ರ ಅಭೂತಪೂರ್ವ ಪ್ರದರ್ಶನ ಕಂಡಿತ್ತು.
7/ 7
ಈ ಚಿತ್ರದ `ಚುಟು ಚುಟು' ಹಾಡು ಯ್ಯೂಟ್ಯೂಬ್ನಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಕನ್ನಡದ ಹಾಡುಗಳಲ್ಲೊಂದು. ಈ ಚಿತ್ರದ ನಟನೆಗಾಗಿ ಅತ್ಯುತ್ತಮ ನಾಯಕಿ ಪ್ರಶಸ್ತಿ ಪಡೆದುಕೊಂಡಿದ್ದರು.