ನಿಮಗೆ ವಯಸ್ಸಾಗಿದೆ ಎಂದ ಟ್ವೀಟಿಗನಿಗೆ ಮೈಚಳಿ ಬಿಡಿಸಿದ ಸ್ಯಾಂಡಲ್ವುಡ್ ಹಿರೋಯಿನ್!
ಪ್ರಸ್ತುತ ನಟಿ ಅನು ಫ್ರಭಾಕರ್, ಸಾರಾ ಅಬೂಬಕರ್ ಅವರ ಕಾದಂಬರಿ ಆಧಾರಿತ ‘ಸಾರಾ ವಜ್ರ‘ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಶ್ವೇತಾ ಶೆಟ್ಟಿ ನಿರ್ದೇಶಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನಟ-ನಟಿಯರು ಸಕ್ರಿಯರಾಗಿರುತ್ತಾರೆ. ಸಿನಿಮಾ ಸುದ್ದಿಗಳಿಗೆ ಸಂಬಂಧಿಸಿದ ವಿದ್ಯಾಮಾನಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ವಿಚಾರಕ್ಕೆ ಸಂಭಂದಿಸಿದಂತೆ ನೆಟ್ಟಿಗರು ಕೂಡ ಪ್ರತಿಕ್ರಿಯಿಸುವುದು, ಟೀಕಿಸುವುದು ಸರ್ವೆ ಸಾಮಾನ್ಯ.
2/ 14
ಕೆಲವೊಮ್ಮೆ ನೆಟ್ಟಿಗರ ಟೀಕೆ ಕಲಾವಿದರಿಗೆ ಬೇಸರ ಉಂಟು ಮಾಡಿದ ಸಂಗತಿಗಳು ಇವೆ. ಇನ್ನು ಕೆಲವು ಕಲಾವಿದರು ಖಾರವಾಗಿ ಪ್ರತಿಕ್ರಿಯೆ ನೀಡಿರುವ ಘಟನೆಗಳು ಕಾಣಬಹುದು.
3/ 14
ಅದರಂತೆ ಸ್ಯಾಂಡಲ್ವುಡ್ ನಟಿ ಅನು ಪ್ರಭಾಕರ್ ಅವರನ್ನು ಟ್ವಿಟ್ಟಿಗನೊಬ್ಬ ಟೀಕಿಸಿದ್ದಕ್ಕೆ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ.
4/ 14
ಮಂಗಳೂರು ಮೂಲಕ ನಟಿ ಅನು ಪ್ರಭಾಕರ್ ಸ್ಯಾಂಡಲ್ವುಡ್ ಹಲವಾರು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಮಾತ್ರವಲ್ಲದೆ ಹಿಂದೊಮ್ಮೆ ಬೇಡಿಕೆ ನಟಿಯಾಗಿ ಗುರುತಿಸಿಕೊಂಡಿದ್ದರು. ಸಂಸಾರದ ಜವಾಬ್ದಾರಿಯ ಕಾರಣಕ್ಕಾಗಿ ನಟನೆಯಿಂದ ಕೊಂಚ ಬಿಡುವು ಪಡೆದುಕೊಂಡಿದ್ದರು.
5/ 14
ಕಳೆದ ವರ್ಷ ಅನು ಪ್ರಭಾಕರ್ ‘ಅನುಕ್ತ‘ ಸಿನಿಮಾದಲ್ಲಿ ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಪ್ರಸ್ತುತ ನಟಿ ಸಾರಾ ಅಬೂಬಕರ್ ಅವರ ಕಾದಂಬರಿ ಆಧಾರಿತ ‘ಸಾರಾ ವಜ್ರ‘ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಶ್ವೇತಾ ಶೆಟ್ಟಿ ನಿರ್ದೇಶಿಸುತ್ತಿದ್ದಾರೆ.
6/ 14
ಈ ಸಿನಿಮಾದಲ್ಲಿ ಅನು ಪ್ರಭಾಕರ್ ‘ನಫೀಜಾ‘ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸದ್ಯ ಈ ಸಿನಿಮಾದ ಡಬ್ಬಿಂಗ್ ಹಂತದಲ್ಲಿದ್ದು, ಶೀಘ್ರವೇ ಆಡಿಯೋ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ.
7/ 14
ಈ ಮಧ್ಯೆ ಟ್ವಿಟ್ಟರ್ನಲ್ಲಿ ಮಧುಸೂದನ್ ಎಂಬಾತ ಅನುಪ್ರಭಾಕರ್ ಅವರ ನಟನೆಯ ಬಗ್ಗೆ ‘ನಿಮ್ಮ ಸ್ವಲ್ಪ ವಯಸ್ಸಾಗಿದೆ‘ ಎಂದು ಟೀಕಿಸಿದ್ದಾರೆ.
8/ 14
ಮಧುಸೂದನ್ ಅವರ ಟೀಕಿಗೆ ‘ವಯಸ್ಸು ಆದ್ರೆ ಕೆಲಸ ನಿಲ್ಲಿಸಬೇಕಾ ಮಧು? ನೀವು ನನ್ನ ಸಿನಿಮಾ ನೋಡೋ ಅವಶ್ಯಕತೆ ಇಲ್ಲ ಬಿಡಿ!!! ಕಲಾವಿದರಾಗಿ ನಮ್ಮನ್ನಾ ಇಷ್ಟಪಡೋರು ನೋಡತಾರೆ!’ ಎಂದು ಅನು ಪ್ರಭಾಕರ್ ಖಡಕ್ ಉತ್ತರ ನೀಡಿದ್ದಾರೆ.
9/ 14
ಮಧುಸೂದನ್ ಅವರ ಟೀಕೆ ಟ್ವಿಟ್ಟಿಗರು ಕೂಡ ಕ್ಲಾಸ್ ತೆಗೆದುಕೊಂಡಿದ್ದಾರೆ. ಯಾರೋ ಇವನು ಫೇಮಸ್ ಆಗೋಕೆ ಈ ರೀತಿ ಮಾಡ್ತಿದ್ದಾನೆ. ಬಿಡಿ ಇಂತ ಚಿಲ್ಲರೆಗಳಿಗೆ ತಲೆಕೆಡಿಸ್ಕೋ ಬೇಡಿ ಎಂದು ಕಾಮೆಂಟ್ ಬರೆದಿದ್ದಾರೆ
10/ 14
ಅನು ಪ್ರಭಾಕರ್ 1990ರಿಂದ ಅವರು ಕನ್ನಡ ಚಲನಚಿತ್ರರಂಗದಲ್ಲಿ ಅಭಿನಯಿಸಲು ಪ್ರಾರಂಭಿಸಿದರು.
11/ 14
ನಟ ವಿಷ್ಣುವರ್ಧನ್ ಸೇರಿದಂತೆ ಮೇರು ನಟರೊಂದಿಗೆ ಅನು ಫ್ರಬಾಕರ್ ನಟಿಸಿದ್ದಾರೆ
12/ 14
ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಅನು ಇಲ್ಲಿಯವರೆಗೆ ಸುಮಾರು 80 ಸಿನಿಮಾಗಳಲ್ಲಿ ನಟಿಸಿದ್ದಾರೆ.
13/ 14
ರಘು ಮುಖರ್ಜಿ ಅವರನ್ನು ಮದುವೆಯಾಗಿರುವ ಅನುಗೆ ಒಂದೂವರೆ ವರ್ಷದ ಮಗಳಿದ್ದಾಳೆ.
14/ 14
ಪತಿ ರಘು ಮುಖರ್ಜಿ ಮತ್ತು ಮಗಳು ನಂದನಾ ಜೊತೆ ಅನು ಫ್ರಭಾಕರ್