ಆ ದಿನಗಳು ನಟ ಚೇತನ್, ಅಸ್ಸಾಂ ಮೂಲದ ಮೇಘ ಅವರನ್ನು ಪ್ರೀತಿಸುತ್ತಿದ್ದಾರೆ. ಚೇತನ್ ಮೇಘ ಜೊತೆ ಮದುವೆಯಾಗಲಿದ್ದಾರೆ ಎನ್ನುವ ವಿಚಾರ ಸಾಕಷ್ಟು ಸುದ್ದಿಯಾಗಿತ್ತು. ಈಗ ಇವರ ಮದುವೆ ಯಾವಾಗ ಎನ್ನುವ ವಿಚಾರ ಬಹಿರಂಗಗೊಂಡಿದೆ. ಬಿರುಗಾಳಿ, ಸೂರ್ಯಕಾಂತಿ, ಮೈನಾ ಚಿತ್ರಗಳ ಮೂಲಕ ಹೆಂಗಳೆಯರ ಹಾಟ್ ಫೇವರೇಟ್ ಎನಿಸಿಕೊಂಡಿದ್ದ ಚೇತನ್ ಮುಂದಿನ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಚೇತನ್ ಫೆಬ್ರವರಿ ತಿಂಗಳಲ್ಲಿ ಹಸೆ ಮಣೆ ಏರುತ್ತಿದ್ದಾರೆ. ಫೆಬ್ರವರಿ 2 ಭಾನುವಾರ ಸಂಜೆ ಗೆಳತಿ ಮೇಘಾ ಜೊತೆ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸೆಲೆಬ್ರಿಟಿಗಳ ಮದುವೆ ಎಂದರೆ ದೊಡ್ಡ ಮಟ್ಟಕ್ಕೆ ಸದ್ದು ಮಾಡುವುದು ಸಾಮಾನ್ಯ. ಆದರೆ ಚೇತನ್ ತುಂಬಾನೇ ಸರಳವಾಗಿ ಮದುವೆಯಾಗಲು ನಿರ್ಧರಿಸಿದ್ದಾರೆ. ವಲ್ಲಭ್ ನಿಕೇತನ ವಿನೋಬಾ ಭಾವೆ ಆಶ್ರಮದಲ್ಲಿ ಚೇತನ್ ಮದುವೆಯಾಗಲಿದ್ದಾರೆ. ಚೇತನ್ ಸಾಮಾಜಿಕ ಕೆಲಸಗಳಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಅಸ್ಸಾಂ ಮೂಲದ ಮೇಘ ಅವರನ್ನು ಚೇತನ್ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಚೇತನ್