ಸ್ಯಾಂಡಲ್‌ವುಡ್ ಡೈರೆಕ್ಟರ್ ಸಿಂಪಲ್ ಸುನಿ ಒಳ್ಳೆ ಸಿನಿಮಾ ಮಾಡ್ತಾನೇ ಬಂದಿದ್ದಾರೆ. ಇವರ ನಿರ್ದೇಶನದ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರ ಮಾರ್ಚ್-8ಕ್ಕೆ ಬರೋಬ್ಬರಿ ಹತ್ತು ವರ್ಷ ಪೂರ್ಣಗೊಳಿಸಿದೆ. ಈ ಒಂದು ಖುಷಿ ಒಂದು ಕಡೆಯಾದ್ರೆ, ಇದೇ ದಿನೇ ತಮ್ಮ ಮುಂದಿನ ಚಿತ್ರದ ಒಂದಷ್ಟು ಇಂಟ್ರಸ್ಟಿಂಗ್ ವಿಷಯವನ್ನ ಡೈರೆಕ್ಟರ್ ಸುನಿ ಅಧಿಕೃತವಾಗಿಯೇ ಈಗ ಹಂಚಿಕೊಂಡಿದ್ದಾರೆ.
ಸಿಂಪಲ್ ಡೈರೆಕ್ಟರ್ ಸುನಿ ಶೀರ್ಷಿಕೆ ಬಗ್ಗೆ ಇರೋ ಒಂದು ಇಂಟ್ರಸ್ಟಿಂಗ್ ಕತೆ ಹೇಳಿಕೊಂಡಿದ್ದಾರೆ. ಹತ್ತು ವರ್ಷದ ಹಿಂದೆ ಬಂದಿದ್ದ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿಗೇನೆ ಈ ಟೈಟಲ್ ಇಡಬೇಕು ಅಂತಲೇ ಇತ್ತು. ಆದರೆ ಅದು ಆಗಲೇ ಇಲ್ಲ. ಹಾಗಾಗಿಯೇ ಒಂದು ಸರಳ ಪ್ರೇಮ ಕಥೆಯ ಟೈಟಲ್‌ನ್ನ ಅಂದಿನಿಂದಲೇ ರಿನಿವಲ್ ಮಾಡಿಸಿಕೊಂಡು ಬಂದಿದ್ದೇನೆ. ಈಗ ಆ ಟೈಟಲ್ ಈ ಚಿತ್ರಕ್ಕೆ ಇಟ್ಟಿದ್ದೇನೆ ಅಂತ ಹೇಳಿಕೊಂಡಿದ್ದಾರೆ.
ಸಿಂಪಲ್ ಸುನಿ ಈ ಮೂಲಕ ಹೊಸ ರೀತಿಯಲ್ಲಿ ಸರಳವಾದ ಒಂದು ಪ್ರೇಮ ಕಥೆಯನ್ನ ಹೇಳುತ್ತಿದ್ದಾರೆ. ಈಗಾಗಲೇ ಶೇಕಡ 50 ರಷ್ಟು ಚಿತ್ರೀಕರಣವನ್ನ ಕೂಡ ಪೂರ್ಣಗೊಳಿಸಿದ್ದಾರೆ. ಬೆಂಗಳೂರು, ಮೈಸೂರು, ಚಿಕ್ಕಪೇಟೆಯಲ್ಲಿ ಚಿತ್ರದ ಚಿತ್ರೀಕರಣ ಮಾಡಿದ್ದಾರೆ. ಪ್ರಸನ್ನ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಅದೇ ಕಥೆಯನ್ನೆ ಡೈರೆಕ್ಟರ್ ಸುನಿ ಒಂದು ಸರಳ ಪ್ರೇಮಕಥೆ ಹೆಸರಿನಲ್ಲಿ ಸಿನಿಮಾ ಮಾಡುತ್ತಿದ್ದಾರೆ.