ಕೊರೋನಾ ಸಮಯದಲ್ಲಿ ಹಲವು ಸ್ಯಾಂಡಲ್ವುಡ್ ನಟ-ನಟಿಯರು, ನಿರ್ದೇಶಕರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕೋವಿಡ್ ನಿಯಮಗಳನ್ನು ಪಾಲಿಸಿ ಸರಳವಾಗಿ ಮದುವೆಯಾಗುತ್ತಿದ್ದಾರೆ. ಭರ್ಜರಿ ಚಿತ್ರದ ನಿರ್ದೇಶಕ ಚೇತನ್ ಅವರು ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
2/ 6
ಡೈರೆಕ್ಟರ್ ಚೇತನ್ ಅವರು ಇಂದು ಮೈಸೂರಿನ ಕಲ್ಪವೃಕ್ಷ ರಾಘವೇಂದ್ರಸ್ವಾಮಿ ಮಠದಲ್ಲಿ ತಮ್ಮ ಸೋದರತ್ತೆ ಮಗಳಾದ ಮಾನಸ ಜೊತೆ ಸಪ್ತಪದಿ ತುಳಿದಿದ್ದಾರೆ. ಮಾನಸ ಮೈಸೂರಿನ ಇನ್ಪೋಸಿಸ್ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
3/ 6
ಸ್ಯಾಂಡಲ್ವುಡ್ ನಿರ್ದೇಶಕ ಚೇತನ್ ಜನಪ್ರಿಯ ಸಿನಿಮಾಗಳಾದ ಬಹದ್ದೂರ್, ಭರ್ಜರಿ, ಭರಾಟೆ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
4/ 6
ಚೇತನ್ ಅವರ ಮದುವೆಯಲ್ಲಿ ಕೆಲವೇ ಮಂದಿ ಮಾತ್ರ ಭಾಗವಹಿಸಿದ್ದರು. ಶುಭ ಸಮಾರಂಭಕ್ಕೆ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು. ಸ್ಯಾಂಡಲ್ವುಡ್ ನಟರಾದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ಧ್ರುವ ಸರ್ಜಾ, ನಿರ್ಮಾಪಕ ಉಮಾಪತಿ ಇನ್ನೂ ಮೊದಲಾದರು ಮದುವೆಗೆ ಆಗಮಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ.
5/ 6
ಸದ್ಯ ಚೇತನ್ ಅವರು ಪುನೀತ್ ರಾಜ್ಕುಮಾರ್ ನಟನೆಯ ಜೇಮ್ಸ್ ಸಿನಿಮಾ ಮಾಡುತ್ತಿದ್ದಾರೆ.
6/ 6
ನಟ ಧ್ರವ ಸರ್ಜಾ ಮತ್ತು ಅವರ ಮಡದಿ ಪ್ರೇರಣಾ ಮದುವೆಗೆ ಆಗಮಿಸಿ ನವದಂಪತಿಗೆ ಶುಭ ಹಾರೈಸಿದರು.