ವಿಷ್ಣುವರ್ಧನ್ ಹುಟ್ಟುಹಬ್ಬ: ಅಪರೂಪದ ಫೋಟೋಗಳ ಮೂಲಕ ಶುಭ ಕೋರಿದ ಸೆಲೆಬ್ರಿಟಿಗಳು
Happy Birthday Vishnuvardhan: ಇಂದು ವಿಷ್ಣುವರ್ಧನ್ ಅವರ 70ನೇ ಹುಟ್ಟುಹಬ್ಬ. ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಹಾಗೂ ಸಿನಿ ತಾರೆಯರು ಶುಭ ಕೋರಿದ್ದಾರೆ. ಅದರಲ್ಲೂ ದರ್ಶನ್, ಸುಮಲತಾ, ಸುದೀಪ್, ಗಣೇಶ್, ರಕ್ಷಿತ್ ಶೆಟ್ಟಿ, ಪುನೀತ್ ರಾಜ್ಕುಮಾರ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ದಾದಾ ಹುಟ್ಟುಹಬ್ಬಕ್ಕೆ ವಿಶೇಷವಾಗಿ ವಿಶ್ ಮಾಡಿದ್ದಾರೆ. (ಚಿತ್ರಗಳು ಕೃಪೆ: ಟ್ವಿಟರ್ ಹಾಗೂ ಇನ್ಸ್ಟಾಗ್ರಾಂ ಖಾತೆ)
News18 Kannada | September 18, 2020, 4:53 PM IST
1/ 13
ಇಂದು ಸ್ಯಾಂಡಲ್ವುಡ್ ಯಜಮಾನ ವಿಷ್ಣುವರ್ಧನ್ ಅವರ 70ನೇ ಹುಟ್ಟುಹಬ್ಬ. ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಹಾಗೂ ಸಿನಿ ತಾರೆಯರು ಶುಭ ಕೋರಿದ್ದಾರೆ.
2/ 13
ದರ್ಶನ್ ತಮ್ಮ ರಾಬರ್ಟ್ ಸಿನಿಮಾದ ಪೋಸ್ಟರ್ನಲ್ಲಿ ವಿಷ್ಣುವರ್ಧನ್ ಅವರ ಫೋಟೋ ಹಾಕಿ ಶುಭ ಕೋರಿದ್ದಾರೆ.
3/ 13
ನಟ ಪುನೀತ್ ರಾಜ್ಕುಮಾರ್, ಬಾಲ್ಯದಲ್ಲಿ ವಿಷ್ಣು ಅವರೊಂದಿಗೆ ತೆಗೆಸಿಕೊಂಡ ಫೋಟೋವನ್ನು ಹಂಚಿಕೊಂಡಿದ್ದಾರೆ.
4/ 13
ಜಗ್ಗೇಶ್ ಅವರೂ ವಿಷ್ಣುವರ್ಧನ್ ಅವರ ಜೊತೆ ತೆಗೆಸಿಕೊಂಡ ಚಿತ್ರವನ್ನು ಪೋಸ್ಟ್ ಮಾಡಿದ್ದು, ಕನ್ನಡದ ಮರೆಯಲಾದ ಮಾಣಿಕ್ಯನಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ.
5/ 13
ಸುಮಲತಾ ಅಂಬರೀಷ್ ಅವರೂ ಒಂದು ವಿಡಿಯೋ ಮಾಡಿ ಅದರ ಮೂಲಕ ಶುಭ ಕೋರಿದ್ದಾರೆ.
6/ 13
ನಟ ರಕ್ಷಿತ್ ಶೆಟ್ಟಿ ಅವರ ಪೋಸ್ಟ್
7/ 13
ಕನ್ನಡ ಚಿತ್ರರಂದ ಸಾಹಸಿಂಹ,,, ನಿಮ್ಮ ಘರ್ಜನೆ ಎಂದೆಂದಿಗೂ ಅಜರಾಮರ ಎಂದು ಪೋಸ್ಟ್ ಮಾಡಿದ್ದಾರೆ ಸಿಂಪಲ್ ಸುನಿ.
8/ 13
ನಮ್ಮಲ್ಲಿ ಎಂದಿಗೂ ನೀವು ಶಾಶ್ವತ ಅಂತ ವಿಷ್ಣುವರ್ಧನ್ ಅವರನ್ನು ಸ್ಮರಿಸಿದ್ದಾರೆ ಧನಂಜಯ.
ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಬಾಲ್ಯದ ಸ್ಫೂರ್ತಿಯಾಗಿದ್ದರಂತೆ ವಿಷ್ಣುವರ್ಧನ್. ಹೀಗೆಂದು ಪೋಸ್ಟ್ ಮಾಡಿರುವ ಗಣೇಶ್, ವಿಷ್ಣು ಅವರ ಜೊತೆ ತೆಗೆಸಿಕೊಂಡ ಚಿತ್ರವನ್ನು ಹಂಚಿಕೊಂಡಿದ್ದಾರೆ.
11/ 13
ಟ್ವಿಟರ್ನ ಡಿಪಿಯನ್ನು ಬದಲಾಯಿಸುವ ಮೂಲಕ ಸಾಹಸಸಿಂಹನಿಗೆ ಗೌರವ ಸಲ್ಲಿಸಿದ್ದಾರೆ ನಿರ್ದೇಶಕ ರಿಷಭ್ ಶೆಟ್ಟಿ.
12/ 13
ನೆನಪಿರಲಿ ಪ್ರೇಮ್ ಅವರ ಇನ್ಸ್ಟಾಗ್ರಾಂ ಪೋಸ್ಟ್.
13/ 13
ಪವನ್ ಒಡೆಯರ್ ಸಹ ವಿಷ್ಣುವರ್ಧನ್ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.