ಸಿನಿಮಾ, ಕಿರುತೆರೆಯಲ್ಲಿ ಮಿಂಚಿದ್ದ ನಟಿ ತೇಜಸ್ವಿನಿ ಪ್ರಕಾಶ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಕನ್ನಡ ಮಾತ್ರವಲ್ಲ, ತೆಲುಗಿನಲ್ಲೂ ಮಿಂಚಿದ್ದಾರೆ ಈ ನಟಿ. ತಮ್ಮ ನೆಚ್ಚಿನ ನಟಿಗೆ ಅಭಿಮಾನಿಗಳು ಶುಭ ಕೋರಿದ್ದಾರೆ.
ನಟಿ ತೇಜಸ್ವಿನಿ ಪ್ರಕಾಶ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ ಮತ್ತು ಮಾಡೆಲ್. ಇಂದು ಅವರಿಗೆ ಹುಟ್ಟುಹಬ್ಬದ ಸಂಭ್ರಮ.
2/ 8
2008ರಲ್ಲಿ ತೆರೆಕಂಡ ಗಜ ಚಿತ್ರದ ಮೂಲಕ ಚಿತ್ರರಂಗಕ್ಕೆ ತೇಜಸ್ವಿನಿ ಪ್ರಕಾಶ್ ಪಾದಾರ್ಪಣೆ ಮಾಡಿದರು. ಅಲ್ಲಿಂದ ಹಲವು ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
3/ 8
ತೇಜಸ್ವಿನಿ ಪ್ರಕಾಶ್ ಅವರು 2016ರಿಂದ 2017ರಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ನಿಹಾರಿಕಾ ಧಾರಾವಾಹಿಯಲ್ಲಿ ಲೀಡ್ ರೋಲ್ನಲ್ಲಿ ಅಭಿನಯಿಸಿದರು.
4/ 8
2020ರಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನನ್ನರಸಿ ರಾಧೆ ಸೀರಿಯಲ್ನಲ್ಲಿ ಲಾವಣ್ಯ ಎಂಬ ಪಾತ್ರದಲ್ಲಿ ನಟಿಸುತ್ತಿದ್ದರು. ನೆಗೆಟಿವ್ ರೋಲ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.
5/ 8
ತೇಜಸ್ವಿನಿ ಪ್ರಕಾಶ್ ಕನ್ನಡದಲ್ಲಿ ಸವಿ ಸವಿ ನೆನಪು, ಮಾತಾಡ್ ಮಾತಾಡ್ ಮಲ್ಲಿಗೆ, ಪ್ರೀತಿ ಏಕೆ ಭೂಮಿ ಮೇಲಿದೆ, ಅರಮನೆ, ರಾಬರ್ಟ್, ಕೃಷ್ಣ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.
6/ 8
ಕನ್ನಡ ಮಾತ್ರವಲ್ಲದೆ ತೆಲುಗಿನ ಕಟ್ ಚೇಸ್ತೆ, ಪ್ರತಿ ಕ್ಷಣಂ ಸೇರಿದಂತೆ ಈವರೆಗೆ 22 ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಇವರು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.
7/ 8
2017ರಲ್ಲಿ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5ರಲ್ಲಿ ತೇಜಸ್ವಿನಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. 28 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದು, ನಂತರ ಎಲಿಮಿನೇಟ್ ಆಗಿದ್ದರು.
8/ 8
ನಟಿ ತೇಜಸ್ವಿನಿ ಪ್ರಕಾಶ್ ತಮ್ಮ ಬಾಲ್ಯದ ಗೆಳೆಯನಾದ ಫಣಿ ವರ್ಮ ಜೊತೆ ವಿವಾಹವಾಗಿದ್ದಾರೆ. ಸಂಸಾರದ ಜೊತೆ ಅಭಿನಯದಲ್ಲೂ ತೊಡಗಿದ್ದಾರೆ.