ನಟಿ ಸುಧಾರಾಣಿ ಅವರಿಗೆ ನಾಯಿಗಳು ಅಂದ್ರೆ ತುಂಬಾ ಇಷ್ಟ. ತಮ್ಮ ಮನೆಯಲ್ಲಿ ಶ್ವಾನಗಳನ್ನು ಸಾಕಿದ್ದಾರೆ. ಅಲ್ಲದೇ ಅವರ ಮನೆ ಬಳಿ ಇರುವ ಬೀದಿ ನಾಯಿಗೂ ಅಷ್ಟೇ ಪ್ರೀತಿ ಮಾಡ್ತಾರೆ.
2/ 8
ಬೀದಿ ನಾಯಿ ಗಂಗಮ್ಮ ಎನ್ನುವ ಶ್ವಾನ 15 ದಿನಗಳಿಂದ ಕಾಣೆಯಾಗಿದೆಯಂತೆ. ಅದು ಇಲ್ಲದೇ ಸುಧಾರಾಣಿ ಅವರು ಬೇಸರಗೊಂಡಿದ್ದಾರೆ. ಯಾರಿಗಾದ್ರೂ ಕಂಡ್ರೆ ನನ್ನ ಟ್ಯಾಗ್ ಮಾಡಿ ಎಂದು ಹೇಳಿದ್ದರು.
3/ 8
ಆ ಗಂಗಮ್ಮ ನಾಯಿಯನ್ನು ಸುಧಾರಾಣಿ ಅವರ ಕುಟುಂಬ ಮಿಸ್ ಮಾಡಿಕೊಳ್ತಿದೆಯಂತೆ. ಅದಕ್ಕೆ ಬಿಬಿಎಂಪಿ ಅವರಿಗೂ ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ. ಸಿಕ್ಕರೆ ಇಲ್ಲಿಗೆ ತಂದು ಬಿಡಿ ಎಂದು ಸುಧಾರಾಣಿ ಅವರು ಕೇಳಿಕೊಂಡಿದ್ದಾರೆ.
4/ 8
ಗಂಗಮ್ಮ ಇಂಡೀ ಜಾತಿಯ ಬೀದಿ ನಾಯಿ ಆಗಿದ್ದು, ಕಪ್ಪು- ಬಿಳಿ ಬಣ್ಣದಲ್ಲಿದೆ. ಆಕೆ ಮರಳಿ ಮನೆಗೆ ಬರಬೇಕು ಸಹಾಯ ಮಾಡಿ ಎಂದು ಸುಧಾರಾಣಿ ಮನವಿ ಮಾಡಿಕೊಂಡಿದ್ದಾರೆ.
5/ 8
ಸುಧಾರಾಣಿ ಅವರ ಮನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿದೆ. ನಟಿ ತಮ್ಮ ಮನೆಯಲ್ಲಿ ಗೋಲ್ಡನ್ ರೆಟ್ರೀವರ್ ಶ್ವಾನಗಳನ್ನು ಸಾಕಿದ್ದಾರೆ. ಅಲ್ಲದೇ ತಮ್ಮ ಏರಿಯಾದ ಶ್ವಾನ ಗಂಗಮ್ಮ ಮೇಲೂ ಅಷ್ಟೇ ಕಾಳಜಿ ತೋರಿಸುತ್ತಿದ್ದರು.
6/ 8
15 ದಿನಗಳಿಂದ ಗಂಗಮ್ಮ ಕಾಣ್ತಾ ಇಲ್ಲ ಎಂದು ಬಿಬಿಎಂಪಿಗೆ ಮನವಿ ಮಾಡಿದ್ರೂ, ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ನಟಿ ಸುಧಾರಾಣಿ ಅವರು ಬೇಸರ ಮಾಡಿಕೊಂಡಿದ್ದಾರೆ.
7/ 8
ನಟಿ ಸುಧಾರಾಣಿ ಅವರಿಗೆ ಮಾತ್ರವಲ್ಲ, ಅವರ ಮಗಳಿಗೂ ಮನೆಯಲ್ಲಿರುವ ಮಿಕ್ಕಿ ಅಂಡ್ ಮಿನಿ ಅಂದ್ರೆ ತುಂಬಾ ಇಷ್ಟ. ಅವುಗಳ ಜೊತೆ ಹೆಚ್ಚು ಕಾಲ ಕಳೆಯುತ್ತಾರೆ.
8/ 8
ಮನೆಯ ಸದಸ್ಯರಂತೆ ಅವರಿಗೆ ಶ್ವಾನಗಳು. ಅವುಗಳ ಪ್ರೀತಿ ದೊಡ್ಡದು. ಅವು ಇಲ್ಲ ಅಂದ್ರೆ ನಮಗೆ ಇರಲು ಆಗಲ್ಲ ಎಂದು ಸುಧಾರಾಣಿ ಅವರು ಹೇಳಿದ್ದಾರೆ.