Sreeleela : ಸಿನಿಮಾದ 2ನೇ ನಾಯಕಿ ಪಾತ್ರಕ್ಕೆ ಕನ್ನಡತಿ ಶ್ರೀಲೀಲಾ ಆಯ್ಕೆಯಾಗಿದ್ದಾರೆ ಎಂಬ ಟಾಕ್ ಇದೆ. ಇನ್ನೂ ಕನ್ನಡದಲ್ಲಿ ‘ಕಿಸ್’, ‘ಭರಾಟೆ’ ಹಾಗೂ ‘ಬೈಟು ಲವ್’ ಸಿನಿಮಾದಲ್ಲಿ ಶ್ರೀಲೀಲಾ ನಟಿಸಿದ್ದಾರೆ. ತೆಲುಗು ಸಿನಿಮಾ‘ ‘ಪೆಳ್ಳಿ ಸಂದಡಿ’ಯಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಟಾಲಿವುಡ್(Tollywood) ಸ್ಟಾರ್ ನಟರ ಜೊತೆ ನಮ್ಮ ಕನ್ನಡದ ನಟಿಯರ ನಟಿಸುವುದನ್ನು ನೋಡಿದರೆ, ಅದೇನೋ ಒಂಥರಾ ಖುಷಿ. ನಮ್ಮ ಕನ್ನಡದವರು ಬೇರೆ ಭಾಷೆಗಳಿಗೆ ಹೋಗಿ ಸಿನಿಮಾ ಮಾಡಿದರೆ ನಮಗೆ ಹೆಮ್ಮ ಅಲ್ವಾ?
2/ 7
ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದ ರಶ್ಮಿಕಾ ಮಂದಣ್ಣ (Rashmika Mandanna) ಈಗ ಫುಲ್ ಬ್ಯುಸಿಯಾಗಿದ್ದಾರೆ. ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಕಡಿಮೆ ಸಮಯದಲ್ಲಿ ನಟಿ ರಶ್ಮಿಕಾ ದೊಡ್ಡ ದೊಡ್ಡ ಸ್ಟಾರ್ಗಳ ಜತೆ ನಟಿಸುವ ಅವಕಾಶ ಸಿಕ್ಕಿತ್ತು.
3/ 7
ಇದೀಗ ಮತ್ತೊಬ್ಬ ಸ್ಯಾಂಡಲ್ವುಡ್ ನಟಿಗೆ ತೆಲುಗಿನ ಸೂಪರ್ ಸ್ಟಾರ್ (Tollywood Superstar) ಜೊತೆ ನಟಿಸುವ ಅವಕಾಶ ಸಿಕ್ಕಿದೆ ಎಂಬ ಸುದ್ದಿ ಹರಿದಾಡುತ್ತಿದೆ.
4/ 7
ನಭಾ ನಟೇಶ್, ರಶ್ಮಿಕಾ ಮಂದಣ್ಣ ಈಗಾಗಲೇ ತೆಲುಗು ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಅದರಲ್ಲೂ ರಶ್ಮಿಕಾ ಮಂದಣ್ಣ ಟಾಲಿವುಡ್ನ ಟಾಪ್ ನಟರ ಜೊತೆ ನಟಿಸಿದ್ದಾರೆ. ನಟಿ ಶ್ರೀಲೀಲಾ ಕೂಡ ತೆಲುಗಿನಲ್ಲಿ ನೆಲೆ ಕಂಡುಕೊಳ್ಳುತ್ತಿದ್ದಾರೆ.
5/ 7
ಟಾಲಿವುಡ್ ನಟ ಮಹೇಶ್ ಬಾಬು ಹೊಸ ಸಿನಿಮಾ ಇತ್ತೀಚೆಗೆ ಸದ್ದಿಲ್ಲದೆ ಸೆಟ್ಟೇರಿತ್ತು. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.ಈ ಚಿತ್ರಕ್ಕೆ ಶ್ರೀಲೀಲಾ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು.
6/ 7
ಕನ್ನಡತಿ ಶ್ರೀಲೀಲಾ ಹೆಸರನ್ನು ತ್ರಿವಿಕ್ರಮ್ ಅವರು ಮಹೇಶ್ ಬಾಬು ಮುಂದೆ ಇಟ್ಟಿದ್ದಾರೆ. ಇದಕ್ಕೆ ಮಹೇಶ್ ಬಾಬು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ಗುಸುಗುಸು ಟಾಲಿವುಡ್ ಅಂಗಳದಲ್ಲಿ ಜೋರಾಗಿದೆ. ಇದು ನಿಜವಾಗಲಿ ಎಂದು ಶ್ರೀಲೀಲಾ ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ.
7/ 7
ಮಹೇಶ್ ಬಾಬು ಅವರ ಸಿನಿಮಾದಲ್ಲಿ ನಟಿ ಶ್ರೀಲೀಲಾ ಕಾಣಿಸಿಕೊಂಡರೆ, ಇವರಿಗೆ ದೊಡ್ಡ ಬ್ರೇಕ್ ಸಿಗುವುದಂತೂ ಖಚಿತ.