ನಟ ಶಿವರಾಜ್ ಕುಮಾರ್ ನಟಿಸಿರುವ ವಜ್ರಕಾಯ ಸಿನಿಮಾದ ನಟಿ ಶುಭ್ರಾ ಅಯ್ಯಪ್ಪ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಯಾವಾಗ ಮದುವೆ ಎಂದು ಕೇಳ್ತಿದ್ದವರಿಗೆ ಉತ್ತರ ನೀಡಿದ್ದಾರೆ.
2/ 8
ಕಳೆದ ವರ್ಷ ನಟಿ ಶುಭ್ರಾ ಅಯ್ಯಪ್ಪ ಅವರು ಮದುವೆ ಆಗುವ ಹುಡುಗನ ಫೋಟೋ ಹಂಚಿಕೊಂಡಿದ್ದರು. ಈ ಮೂಲಕ ಅವರ ಪರಿಚಯ ಮಾಡಿಕೊಟ್ಟಿದ್ದರು. ಹುಡುಗನ ಹೆಸರು ವಿಶಾಲ್ ಶಿವಪ್ಪ.
3/ 8
ವಿಶಾಲ್ ಶಿವಪ್ಪ ಅವರು ಕೂಡ ಶುಭ್ರಾ ಅಯ್ಯಪ್ಪ ಅವರಂತೆಯೇ ಅಡ್ವೆಂಚರ್ ಹವ್ಯಾಸ ಉಳ್ಳವರು. ಇಬ್ಬರೂ ಕೂಡ ಮದುವೆ ಎಂಬ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
4/ 8
ಜನವರಿ 18 ರಂದು ಕೂರ್ಗ್ನಲ್ಲಿ ವಿಶಾಲ್ ಮತ್ತು ಶುಭ್ರಾ ಕುಟುಂಬ ಸದಸ್ಯರ ಮುಂದೆ ಸರಳವಾಗಿ ಮದುವೆ ಆಗಲಿದ್ದಾರೆ. ಜ.20 ಮತ್ತು 21 ರಂದು ಮೈಸೂರಿನಲ್ಲಿ ಆರತಕ್ಷತೆ ಹಮ್ಮಿಕೊಂಡಿದ್ದಾರೆ.
5/ 8
6 ವರ್ಷಗಳಿಂದ ಶುಭ್ರಾ ಅಯ್ಯಪ್ಪ ಮತ್ತು ವಿಶಾಲ್ ಪ್ರೀತಿ ಮಾಡ್ತಾ ಇದ್ದಾರೆ. ಡೇಟಿಂಗ್ ಮಾಡ್ತಾ ಇದ್ದ ಜೋಡಿ ಈಗ ಮದುವೆ ಆಗಲು ಸಜ್ಜಾಗಿದ್ದಾರೆ.
6/ 8
ವಿಶಾಲ್ ಶಿವಪ್ಪ ಉದ್ಯಮಿ ಆಗಿದ್ದು ನಟಿ ಶುಭ್ರಾ ಅಯ್ಯಪ್ಪಗೆ ಮೊದಲು ಪ್ರಪೋಸ್ ಮಾಡಿದ್ರಂತೆ. ಪ್ರಪೋಸ್ ಮಾಡಿ ಕೆಲ ದಿನಗಳ ನಂತರ ನಟಿ ಶುಭ್ರಾ ಒಪ್ಪಿಕೊಂಡಿದ್ದರು.
7/ 8
ಸ್ಯಾಂಡಲ್ವುಡ್ ನಟಿ ಶುಭ್ರಾ ಅಯ್ಯಪ್ಪ ಅಷ್ಟೊಂದು ಸಿನಿಮಾಗಳನ್ನು ಮಾಡಿಲ್ಲ. ಆದ್ರೆ ವ್ರಜಕಾಯದಿಂದ ಕನ್ನಡಿಗರಿಗೆ ಪರಿಚಿತ. ಈಗ ತಮ್ಮ ಮದುವೆ ಸುದ್ದಿಯನ್ನು ಜನರೊಂದಿಗೆ ಹಂಚಿಕೊಂಡಿದ್ದಾರೆ.
8/ 8
ನೋ ಪ್ರಾಬ್ಲಂ ಎನ್ನುತ್ತಲೇ ವಿಶಾಲ್ ಶಿವಪ್ಪ ಅವರನ್ನು ಮದುವೆ ಆಗುತ್ತಿದ್ದಾರೆ. ಅಭಿಮಾನಿಗಳು ಒಳ್ಳೆಯದಾಗಲಿ ಅಂತ ವಿಶ್ ಮಾಡ್ತಿದ್ದಾರೆ.