ನಟ ಶಿವರಾಜ್ ಕುಮಾರ್ ನಟಿಸಿರುವ ವಜ್ರಕಾಯ ಸಿನಿಮಾದ ನಟಿ ಶುಭ್ರಾ ಅಯ್ಯಪ್ಪ ಉದ್ಯಮಿ ವಿಶಾಲ್ ಜೊತೆ ಮದುವೆ ಆಗಿದ್ದಾರೆ. ಜನವರಿ 19ರಂದು ಕೂರ್ಗ್ನಲ್ಲಿ ಇವರ ಮದುವೆ ನಡೆದಿತ್ತು. 6 ವರ್ಷಗಳಿಂದ ಶುಭ್ರಾ ಅಯ್ಯಪ್ಪ ಮತ್ತು ವಿಶಾಲ್ ಪ್ರೀತಿ ಮಾಡ್ತಾ ಇದ್ದರು. ಈಗ ಆ ಪ್ರೀತಿಗೆ ಮದುವೆ ಬಂಧನ ಆಗಿದೆ. ಕೊಡವ ಲುಕ್ನಲ್ಲಿ ಇಬ್ಬರೂ ಮಿಂಚಿದ್ದಾರೆ. ಕೂರ್ಗ್ನಲ್ಲಿ 150 ವರ್ಷದ ಹಳೆಯ ಮನೆಯಲ್ಲಿ ಇಬ್ಬರೂ ಅದ್ಧೂರಿಯಾಗಿ ಮದುವೆ ಆಗಿದ್ದಾರೆ. ಕೊಡವ ಪದ್ಧತಿ ಪ್ರಕಾರ ಮದುವೆಯಾದ ಈ ಜೋಡಿ ಕೊಡವ ಡ್ರೆಸ್ನಲ್ಲಿ ಕ್ಯೂಟ್ ಆಗಿ ಕಾಣ್ತಾ ಇದೆ. ವಿಶಾಲ್ ಶಿವಪ್ಪ ಅವರು ಕೂಡ ಶುಭ್ರಾ ಅಯ್ಯಪ್ಪ ಅವರಂತೆಯೇ ಅಡ್ವೆಂಚರ್ ಹವ್ಯಾಸ ಉಳ್ಳವರು. ಇಬ್ಬರು 6 ವರ್ಷಗಳಿಂದ ಲವ್ ಮಾಡಿ ಮದುವೆ ಆಗಿದ್ದಾರೆ. ವಿಶಾಲ್ ಶಿವಪ್ಪ ಉದ್ಯಮಿ ಆಗಿದ್ದು, ನಟಿ ಶುಭ್ರಾ ಅಯ್ಯಪ್ಪಗೆ ಮೊದಲು ಪ್ರಪೋಸ್ ಮಾಡಿದ್ರಂತೆ. ಪ್ರಪೋಸ್ ಮಾಡಿ ಕೆಲ ದಿನಗಳ ನಂತರ ನಟಿ ಶುಭ್ರಾ ಒಪ್ಪಿಕೊಂಡಿದ್ದರು. ನೋ ಪ್ರಾಬ್ಲಂ ಎನ್ನುತ್ತಲೇ ವಿಶಾಲ್ ಶಿವಪ್ಪ ಅವರನ್ನು ಮದುವೆ ಆಗಿದ್ದಾರೆ ಶುಭ್ರಾ ಅಯ್ಯಪ್ಪ. ಇಬ್ಬರೂ ತಮಗೆ ಇಷ್ಟವಾದ ಸ್ಥಳಗಳಲ್ಲಿ ಎಂಜಾಯ್ ಮಾಡಲು ಹೋಗಿದ್ದಾರೆ. ಕೊಡವ ಡ್ರೆಸ್ನಲ್ಲಿ ಶುಭ್ರಾ ಅಯ್ಯಪ್ಪ ಮತ್ತು ವಿಶಾಲ್ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಸೂಪರ್ ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಹೊಸ ಜೋಡಿಗೆ ಸಿನಿ ಗಣ್ಯರು, ಉದ್ಯಮಿಗಳು, ಸ್ನೇಹಿತರು, ಆತ್ಮೀಯರು ಒಳ್ಳೆಯದಾಗಲಿ ಅಂತ ವಿಶ್ ಮಾಡಿದ್ದಾರೆ.