ಶುಭಾ ಪೂಂಜಾ ರಾಜಕೀಯಕ್ಕೆ ಬರ್ತಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಈ ಬಗ್ಗೆ ನಟಿ ಸ್ಪಷ್ಟನೆ ಕೊಟ್ಟಿದ್ದರು.'ನನಗೆ ಸುಮಾರು ಜನ ಕೇಳ್ತಿರುತ್ತಾರೆ ರಾಜಕೀಯಕ್ಕೆ ಬರುತ್ತೀರಾ ಅಂತಾ. ಆದರೆ ಸದ್ಯಕ್ಕೆ ಈ ಬಗ್ಗೆ ಆಲೋಚನೆ ಇಲ್ಲ. ಸಿನಿಮಾಗೆ ಅನಿರೀಕ್ಷಿತವಾಗಿ ಎಂಟ್ರಿ ಸಿಕ್ಕಿತು. ಅದೇ ರೀತಿ ರಾಜಕೀಯಕ್ಕೆ ಬರಲು ಮುಂದಿನ ದಿನಗಳಲ್ಲಿ ಒಂದೊಳ್ಳೆಯ ಅವಕಾಶ ಸಿಕ್ಕರೆ ಬರುತ್ತೀನಿ' ಎಂದಿದ್ದರು. ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದು ಸಂದೇಶ ಕೊಟ್ಟಿದ್ದರು.