Shubha Poonja: 'ಶುಭ' ವಿವಾಹ ವಾರ್ಷಿಕೋತ್ಸವ! ಪತಿಗೆ ಪೂಂಜಾ ಸ್ಪೆಷಲ್ ವಿಶ್
ಸ್ಯಾಂಡಲ್ವುಡ್ ನಟಿ ಶುಭ ಪೂಂಜಾ ಮದುವೆಯ ಮೊದಲನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪತಿಗೆ ವಿಶ್ ಮಾಡಿರುವ ಶುಭ, ಅವಿವಾಹಿತರಿಗೆ ಸಲಹೆ ಕೂಡಾ ಕೊಟ್ಟಿದ್ದಾರೆ!
ಸ್ಯಾಂಡಲ್ವುಡ್ ನಟಿ ಶುಭ ಪೂಂಜಾ ಮದುವೆ ಆಗಿ 1 ವರ್ಷ ಆಗಿದೆ. ಆ ಖುಷಿಯನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಪ್ರೀತಿ ಪತಿಗೆ ಶುಭಾಶಯ ಹೇಳಿದ್ದಾರೆ.
2/ 8
ಮೊದಲ ಮದುವೆ ವಾರ್ಷಿಕೋತ್ಸವ. ನಂಬಲು ಆಗುತ್ತಿಲ್ಲ. ಮದುವೆ ಆಗಿ 1 ವರ್ಷ ಕಳೆಯಿತು. ಈ ಒಂದು ವರ್ಷ ತುಂಬಾ ಸುಂದರವಾಗಿದೆ. ನಮ್ಮ ವಾರ್ಷಿಕೋತ್ಸವ ಎಂದು ಶುಭ ಪೂಂಜಾ ಹೇಳಿಕೊಂಡಿದ್ದಾರೆ.
3/ 8
ಬೆಳಗ್ಗೆಯಿಂದ ನಾವು ನೂರು ಬಾರಿ ಜಗಳ ಮಾಡಬಹುದು. ಆದ್ರೆ ಸಂಜೆ ವೇಳೆಗೆ ನಾವು ಒಟ್ಟಿಗೆ ನಗುತ್ತೇವೆ. ಅದೇ ಮದುವೆ ಬಂಧನಕ್ಕೆ ಇರುವ ಶಕ್ತಿ ಎಂದು ಶುಭ ಪೂಂಜಾ ಹೇಳಿದ್ದಾರೆ.
4/ 8
ಶುಭ ಪೂಂಜಾ ಸುಮಂತ್ ಮಹಾಬಲ ಎನ್ನುವವರನ್ನು ಮದುವೆ ಆಗಿದ್ದಾರೆ. ನಾನು ನನ್ನ ಪತಿಗೆ ವೈಯಕ್ತಿಕವಾಗಿ ವಿಶ್ ಮಾಡುತ್ತೇನೆ. ಈ ಪೋಸ್ಟ್ ಹಾಕಿರುವುದು ನಿಮಗಾಗಿ ಎಂದು ನಟಿ ಶುಭ ಪೂಂಜಾ ತಿಳಿಸಿದ್ದಾರೆ.
5/ 8
ಅಲ್ಲದೇ ಮದುವೆ ಮಾಡಿಕೊಳ್ಳಲು ಭಯ ಪಡುವವರಿಗೆ ನನ್ನದೊಂದು ಸಲಹೆ. ಯಾರು ಭಯಪಡಬೇಡಿ. ಖಡಿತವಾಗಿ ಮದುವೆ ಆಗಬಹುದು ಎಂದು ನಾನು ಹೇಳುತ್ತೇನೆ ಎಂದು ಶುಭ ಅವರು ಹೇಳಿದ್ದಾರೆ.
6/ 8
ಶುಭ ಪೂಂಜಾ ಕೆಲವು ಸಿನಿಮಾ ಶೂಟಿಂಗ್ ಗಳಲ್ಲಿ ಬ್ಯುಸಿ ಆಗಿದ್ದಾರೆ. ಯಾವಾಗಲು ನಗು ನಗುತ್ತಾ ಇರುವ ಶುಭ ಪೂಂಜಾ ಅವರ ಜೀವನ ಖುಷಿ ಆಗಿರಲಿ ಎಂದು ಅಭಿಮಾನಿಗಳು ಹೇಳಿದ್ದಾರೆ.
7/ 8
ಶುಭ ಪೂಂಜ್ ಬಿಗ್ ಬಾಸ್ ಸೀಸನ್ 08 ರಲ್ಲಿ ಅಭ್ಯರ್ಥಿ ಆಗಿದ್ದರು. ಆಗಲೂ ತಾವು ಮದುವೆ ಆಗುವ ಹುಡುಗನನ್ನು ನೆನೆಪು ಮಾಡಿಕೊಳ್ತಾ ಇದ್ದರು. ಸದಾ ಚಿನ್ನಿ ಬಾಂಬ್ ಎಂದು ಕರೆಯುತ್ತಿದ್ದರು. ಬಿಗ್ ಬಾಸ್ ನಿಂದ ಬಂದ ಮೇಲೆ ಮದುವೆ ಆಗಿದ್ದರು.
8/ 8
ಇತ್ತಿಚೇಗೆ ಶುಭ ಪೂಂಜ್ ಬಿಗ್ ಬಾಸ್ ಸೀಸನ್ 09 ರಲ್ಲಿ ದಿವ್ಯಾ ಉರುಡುಗಗಾಗಿ ವಿಶ್ ಮಾಡಿ ಡ್ಯಾನ್ಸ್ ಮಾಡಿದ್ದರು. ಕ್ಯೂಟ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದರು.