ಮೇ 10ಕ್ಕೆ ವಿಧಾನಸಭೆ ಚುನಾವಣೆ ನಡೆಯಲಿದ್ದು, ಚುನಾವಣಾ ಕಾವು ಜೋರಾಗುತ್ತಿದೆ. ಸ್ಯಾಂಡಲ್‍ವುಡ್ ನಟ, ನಟಿಯರು ರಾಜಕೀಯಕ್ಕೆ ಎಂಟ್ರಿ ಕುರಿತು ಚರ್ಚೆಗಳು ನಡೆಯುತ್ತಿವೆ.
2/ 8
ಶುಭಾ ಪೂಂಜಾ ರಾಜಕೀಯಕ್ಕೆ ಬರ್ತಾರೆ ಎನ್ನುವ ಮಾತುಗಳು ಕೇಳಿ ಬರ್ತಿವೆ. ಈ ಬಗ್ಗೆ ನಟಿ ಸ್ಪಷ್ಟನೆ ಕೊಟ್ಟಿದ್ದಾರೆ.
3/ 8
'ನನಗೆ ಸುಮಾರು ಜನ ಕೇಳ್ತಿರುತ್ತಾರೆ ರಾಜಕೀಯಕ್ಕೆ ಬರುತ್ತೀರಾ ಅಂತಾ. ಆದರೆ ಸದ್ಯಕ್ಕೆ ಈ ಬಗ್ಗೆ ಆಲೋಚನೆ ಇಲ್ಲ. ಸಿನಿಮಾಗೆ ಅನಿರೀಕ್ಷಿತವಾಗಿ ಎಂಟ್ರಿ ಸಿಕ್ಕಿತು. ಅದೇ ರೀತಿ ರಾಜಕೀಯಕ್ಕೆ ಬರಲು ಮುಂದಿನ ದಿನಗಳಲ್ಲಿ ಒಂದೊಳ್ಳೆಯ ಅವಕಾಶ ಸಿಕ್ಕರೆ ಬರುತ್ತೀನಿ' ಎಂದಿದ್ದಾರೆ ಶುಭಾ.
4/ 8
ಸದ್ಯಕ್ಕೆ ರಾಜಕೀಯಕ್ಕೆ ಬರಲ್ಲ. ದಯವಿಟ್ಟು ನಿಮ್ಮ ಮತಗಳನ್ನ ಚಲಾಯಿಸಿ, ಮೇ 10ಕ್ಕೆ ಎಲೆಕ್ಷನ್ ಎಂದು ನಟಿ ಶುಭಾ ಪೂಂಜ್ ಹೇಳಿದ್ದಾರೆ.
5/ 8
ಶುಭಾ ಪೂಂಜಾ ತ್ರಿದೇವಿ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ. ದೇವಿಯಾಗಿ ಶುಭಾ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಮತ್ತು ನಿರ್ಮಾಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
6/ 8
ಶುಭಾ ಪೂಂಜಾ ಕೆಲವು ಸಿನಿಮಾ ಶೂಟಿಂಗ್ ಗಳಲ್ಲಿ ಬ್ಯುಸಿ ಆಗಿದ್ದಾರೆ. ಯಾವಾಗಲು ನಗು ನಗುತ್ತಾ ಇರುವ ಶುಭ ಪೂಂಜಾ ಅವರ ಅಭಿಮಾನಿಗಳಿಗೆ ಇಷ್ಟ ಆಗ್ತಾರೆ.
7/ 8
ಶುಭಾ ಪೂಂಜಾ ಬಿಗ್ ಬಾಸ್ ಸೀಸನ್ 08 ರಲ್ಲಿ ಅಭ್ಯರ್ಥಿ ಆಗಿದ್ದರು. ಬಿಗ್ ಬಾಸ್ ನಲ್ಲೂ ಶುಭಾ ಅವರು ಇಷ್ಟ ಆಗಿದ್ದರು. ಮೊಗ್ಗಿನ ಮನಸ್ಸು ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
8/ 8
ಶುಭಾ ಪೂಂಜಾ ಅವರು ಹಲವು ದಿನಗಳ ನಂತರ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಚಿಕ್ಕ ಮಗುವಿನ ಮನಸ್ಸಿನ ಶುಭಾ ರಾಜಕೀಯಕ್ಕೆ ಬರಬಹುದು ಎಂದು ಫ್ಯಾನ್ಸ್ ಹೇಳ್ತಾ ಇದ್ದಾರೆ.