ಕನ್ನಡದ ಕಾಂತಾರ ಸಿನಿಮಾ ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸದ್ದು ಮಾಡಿದ ಮೇಲೆ ಕಾಂತಾರ ನಟ-ನಟಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಕಾಂತಾರ ನಟಿ ಸಪ್ತಮಿ ಗೌಡ ಇದೀಗ ಬಾಲಿವುಡ್ಗೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ.
ಕಾಂತಾರ್ ಹಿಟ್ ಬಳಿಕ ನಟಿ ಸಪ್ತಮಿ ಗೌಡ ಸಹ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ದಾರೆ. ಸಾಲು ಸಾಲು ಸಿನಿಮಾಗಳೂ ಕೂಡ ಸಪ್ತಮಿ ಗೌಡ ಅವರನ್ನು ಕೈ ಬೀಸಿ ಕರೆಯುತ್ತಿದೆ.
2/ 8
ಕಾಂತಾರ ಕಂಪು ಬಾಲಿವುಡ್ನಲ್ಲಿ ಹರಡಿದ್ದು, ಸಪ್ತಮಿ ಗೌಡಗೆ ಸಖತ್ ಚಾನ್ಸ್ ಸಿಕ್ಕಿದೆ. ಬಾಲಿವುಡ್ಗೆ ಹಾರಲು ಕಾಂತಾರ ಲೀಲಾ ರೆಡಿಯಾಗಿದ್ದಾರೆ. ಸ್ಟಾರ್ ನಿರ್ದೇಶಕರ ಜೊತೆ ಕೆಲಸ ಮಾಡುವ ಅವಕಾಶ ಸಪ್ತಮಿ ಗೌಡಗೆ ಒಲಿದು ಬಂದಿದೆ.
3/ 8
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶನ ಮಾಡಿದ್ದ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರ ಹೊಸ ಚಿತ್ರದಲ್ಲಿ ಸಪ್ತಮಿ ಗೌಡ ನಟಿಸಲಿದ್ದಾರೆ. ಈ ಮೂಲಕ ಬಾಲಿವುಡ್ಗೆ ನಟಿ ಸಪ್ತಮಿ ಎಂಟ್ರಿ ಕೊಡ್ತಿದ್ದಾರೆ.
4/ 8
ವಿವೇಕ್ ಅಗ್ನಿಹೋತ್ರಿ ಅವರ ಹೊಸ ಸಿನಿಮಾ ‘ದಿ ವ್ಯಾಕ್ಸಿನ್ ವಾರ್’ (The Vaccine War) ಸಿನಿಮಾದಲ್ಲಿ ನಟಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ. ದಿ ವ್ಯಾಕ್ಸಿನ್ ವಾರ್ ಸಿನಿಮಾ ಶೂಟಿಂಗ್ ಸಹ ಶುರುವಾಗಿದ್ದು, ಹೈದರಾಬಾದ್ ನಲ್ಲಿ ನಡೆಯಲಿರುವ ಚಿತ್ರೀಕರಣದಲ್ಲಿ ಸಪ್ತಮಿ ಗೌಡ ಭಾಗಿ ಆಗಲಿದ್ದಾರಂತೆ
5/ 8
ವಿವೇಕ್ ಅಗ್ನಿಹೋತ್ರಿ ಅವರ ಕೊರೊನಾ ವಾಕ್ಸಿನ್ ಸಿನಿಮಾದಲ್ಲಿ ನಾನಾ ಪಾಟೇಕರ್, ಅನುಪಮ್ ಖೇರ್, ಪಲ್ಲವಿ ಜೋಶಿ ಮುಂತಾದವರು ಅಭಿನಯಿಸುತ್ತಿದ್ದಾರೆ. ಆ ಎಲ್ಲ ಕಲಾವಿದರ ಜೊತೆ ನಟಿಸುವ ಚಾನ್ಸ್ ಸಪ್ತಮಿ ಗೌಡಗೆ ಸಿಕ್ಕಿದೆ.
6/ 8
ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ನಟಿ ಸಪ್ತಮಿ ಗೌಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು. ನಟ ಡಾಲಿ ಧನಂಜಯ್ ಜೊತೆ ತೆರೆ ಹಂಚಿಕೊಂಡಿದ್ದರು.
7/ 8
2ನೇ ಸಿನಿಮಾ ಕಾಂತಾರ ದಲ್ಲಿ ನಟ ರಿಷಬ್ ಶೆಟ್ಟಿಗೆ ಜೋಡಿಯಾಗಿ ನಟಿಸಿದ ಬಳಿಕ ಸಪ್ತಮಿ ಗೌಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ.
8/ 8
ಅಭಿಷೇಕ್ ಅಂಬರೀಷ್ ಸಿನಿಮಾ ‘ಕಾಳಿ’ ಚಿತ್ರದಲ್ಲಿ ಸಪ್ತಮಿ ಗೌಡ ಅಭಿನಯಿಸುತ್ತಿದ್ದು, ಇದೀಗ ಸಪ್ತಮಿ ಗೌಡ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ.