ನಟಿ ಸಂಜನಾ ಅವರ ತಂಗಿ ನಿಕ್ಕಿ ಗಲ್ರಾನಿ ಈ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿಕ್ಕಿ ಮದುವೆಗೆ ಸಂಜನಾ ಅವರೇ ಹೋಗದಿರುವುದು ಎಲ್ಲರಿಗೂ ಆಶ್ಚರ್ಯ ಮೂಡಿಸಿತ್ತು.
2/ 8
ಅಕ್ಕ-ತಂಗಿ ಇಬ್ಬರು ತುಂಬಾ ಕ್ಲೋಸ್. ಜೊತೆಗೆ ಒಳ್ಳೆ ಸ್ನೇಹಿತೆಯರಾಗಿ ಬೆಳೆದಿದ್ದಾರೆ. ಆದ್ರೂ ತಂಗಿ ಮದುವೆಗೆ ಹೋಗೋಕೆ ಆಗಲಿಲ್ವಾ ಎಂದು ಅಭಿಮಾನಿಗಳು ಕೇಳಿದ್ದರು. ಅದಕ್ಕೆ ಸಂಜನಾ ಉತ್ತರ ನೀಡಿದ್ದಾರೆ.
3/ 8
ರಾತ್ರಿ 2.30ಕ್ಕೆ ನಿಕ್ಕಿ ಮದುವೆ ಮುಹೂರ್ತ ಇತ್ತು. ಅದೇ ದಿನ ಬೆಳಗ್ಗೆ 6.30ಕ್ಕೆ ನನ್ನ ಮಗುವಿನ ಡೆಲಿವರಿಗೆ ಸಮಯ ನೀಡಿದ್ದರು. ಅದಕ್ಕೆ ನನಗೆ ಮದುವೆಗೆ ಹೋಗಲು ಆಗಲಿಲ್ಲ ಎಂದು ಸಂಜನಾ ಅವರು ಹೇಳಿದ್ದಾರೆ.
4/ 8
ನಿಕ್ಕಿ ಗಲ್ರಾನಿ ಮದುವೆ ಇದ್ದಿದ್ದು ಚೆನ್ನೈನಲ್ಲಿ. ನಾನು ಬೆಂಗಳೂರಿನಲ್ಲಿ ಇದ್ದೆ. ಒಂಬತ್ತು ತಿಂಗಳ ತುಂಬು ಗರ್ಭಿಣಿಯಾಗಿ ಚೆನ್ನೈಗೆ ಪ್ರಯಾಣ ಮಾಡಲು ಆಗಲಿಲ್ಲ ಎಂದು ಸಂಜನಾ ಅವರು ಹೇಳಿದ್ದಾರೆ.
5/ 8
ನಿಕ್ಕಿ ಗಲ್ರಾನಿ ಮದುವೆ ದಿನವೇ ಸಂಜನಾ ಗಲ್ರಾನಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಮನೆಯಲ್ಲಿ ಡಬಲ್ ಖುಷಿ ಮನೆ ಮಾಡಿತ್ತು.
6/ 8
ಸಂಜನಾ ಗಲ್ರಾನಿ 2005ರಲ್ಲಿ ಬಿಡುಗಡೆಯಾದ ತೆಲುಗು ಚಿತ್ರ ಸೊಗ್ಗಾಡು ಮೂಲಕ ಸಿನಿಮಾ ಲೋಕಕ್ಕೆ ಕಾಲಿಟ್ಟಿದ್ದಾರೆ. ನಂತರ 2006 ಗಂಡ ಹೆಂಡತಿ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು.
7/ 8
ಗಂಡ ಹೆಂಡತಿಯಲ್ಲಿ ಬೋಲ್ಡ್ ಪಾತ್ರ ನಿರ್ವಹಿಸಿ ಸಂಜನಾ ಹೆಸರುವಾಸಿಯಾಗಿದ್ದರು. ನಂತರ ದೊಡ್ಡ ದೊಡ್ಡ ನಟರ ಜೊತೆ ಅಭಿನಯಿಸಿದ್ದಾರೆ.
8/ 8
ಪತಿ ಅಜಿಜ್ ಪಾಷಾ ಜತೆ ಅನ್ಯೋನ್ಯ ಜೀವನ ಸಾಗಿಸುತ್ತಿರುವ ನಟಿ ಸಂಜನಾ ಗಲ್ರಾನಿಗೆ ಗಂಡು ಮಗು ಇದೆ. ಸದ್ಯ ಮಗು ಲಾಲಾನೆ ಪಾಲನೆಯನ್ನು ಎಂಜಾಯ್ ಮಾಡ್ತಾ ಇದ್ದಾರೆ.