Sangeetha Bhat: 'ದಯವಿಟ್ಟು ಗಮನಿಸಿ'; ಸೋಷಿಯಲ್ ಮೀಡಿಯಾಗೆ ಮತ್ತೆ ಮರಳಿದ್ದಾರೆ ಸಂಗೀತಾ ಭಟ್

Sangetha Bhat: 'ಎರಡನೇ ಸಲ' ಸಿನಿಮಾ ಮೂಲಕ ಖ್ಯಾತಿ ಪಡೆದ ಸಂಗೀತಾ ಭಟ್​ ಅವರ ಕಪಟ ನಾಟಕ ಪಾತ್ರಧಾರಿ ಸಿನಿಮಾ ತೆರೆಕಾಣಲು ಸಿದ್ಧವಾಗಿದೆ. ಆರಂಭದಲ್ಲಿ ಕನ್ನಡದ 'ಪ್ರೀತಿ ಗೀತಿ ಇತ್ಯಾದಿ' ಮತ್ತು 'ಮಾಮು ಟೀ ಅಂಗಡಿ' ಸಿನಿಮಾದಲ್ಲಿ ನಟಿಸಿದ್ದರೂ ಸಂಗೀತಾ ಭಟ್​ಗೆ ಅದೃಷ್ಟ ತಂದುಕೊಟ್ಟಿದ್ದು 'ಎರಡನೇ ಸಲ' ಸಿನಿಮಾ. ಅದಾದ ನಂತರ 'ದಯವಿಟ್ಟು ಗಮನಿಸಿ' ಸಿನಿಮಾದಲ್ಲಿಯೂ ಸಂಗೀತಾ ಗಮನ ಸೆಳೆದಿದ್ದರು. ಹಾಗೇ, 'ಕಿಸ್ಮತ್', 'ಅನ್ಯುಕ್ತ' ಸಿನಿಮಾಗಳಲ್ಲಿ ನಟಿಸಿದ್ದ ಸಂಗೀತಾ ಸದ್ಯಕ್ಕೆ ಗಂಡನ ಜೊತೆ ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಆ ಕಾರಣದಿಂದಲೇ ತಮ್ಮ 'ಕಪಟ ನಾಟಕ ಪಾತ್ರಧಾರಿ' ಸಿನಿಮಾ ಪ್ರಮೋಷನ್​ಗೂ ಅವರು ಹಾಜರಾಗಿರಲಿಲ್ಲ. ಮೀಟೂ ಪ್ರಕರಣದ ಬಳಿಕ ಸೋಷಿಯಲ್ ಮೀಡಿಯಾದಿಂದಲೂ ದೂರವೇ ಉಳಿದಿದ್ದ ಸಂಗೀತಾ ಭಟ್ ಮತ್ತೆ ಈಗ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ.

First published: