ನಟಿ ರಮ್ಯಾ ಅವರು ಅಂದ್ರೆ ಅದೆಷ್ಟೋ ಅಭಿಮಾನಿಗಳಿಗೆ ಹುಚ್ಚು. ಸಿನಿಮಾ ಬಿಟ್ಟು 7 ವರ್ಷ ದೂರ ಇದ್ರೂ ಅವರ ಮೇಲಿನ ಅಭಿಮಾನ ಕಮ್ಮಿ ಆಗಿಲ್ಲ. ಪ್ಯಾನ್ಸ್ ನ ನೆಚ್ಚಿನ ನಟಿ ರಮ್ಯಾ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ.
2/ 8
ರಮ್ಯಾ ಅವರು ನವೆಂಬರ್ 29, 1982 ರಂದು ಬೆಂಗಳೂರನಲ್ಲಿ ಜನಿಸಿದ್ದಾರೆ. ಇವರ ಹುಟ್ಟು ಹೆಸರು ದಿವ್ಯ ಸ್ಪಂದನಾ. ಇವರ ಪೋಷಕರು ಮೂಲತಃ ಮಂಡ್ಯದವರು.
3/ 8
ರಮ್ಯಾ ಅವರು 2003 ರಲ್ಲಿ 'ಅಭಿ' ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಜೊತೆ ನಟಿಸುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಆ ಸಿನಿಮಾ ಹಿಟ್ ಆಯ್ತು. ಇಬ್ಬರ ಜೋಡಿಯನ್ನು ಜನ ಮೆಚ್ಚಿಕೊಂಡ್ರು.
4/ 8
ಆಕಾಶ್, ಕಂಠಿ, ಆದಿ, ರಂಗ ಎಸ್ ಎಸ್ ಎಲ್ ಸಿ, ಜೂಲಿ, ಅಮೃತಧಾರೆ, ಗೌರಮ್ಮ ಮುಂದಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ತನನಂ ತನನಂ' ಮತ್ತು 'ಸಂಜು ವೆಡ್ಸ್ ಗೀತಾ' ಚಿತ್ರಗಳಿಗೆ ಎರಡು ಬಾರಿ ಬೆಸ್ಟ್ ಫಿಲಂಫೇರ್ ಪ್ರಶಸ್ತಿ ಯನ್ನು ತಮ್ಮದಾಗಿಸಿಕೊಂಡಿದ್ದಾರೆ.
5/ 8
ರಮ್ಯಾ ಅವರು ಕರ್ನಾಟಕ ರಾಜ್ಯದ ಪ್ರದೇಶ ಕಾಂಗ್ರೆಸ್ನ ಸಕ್ರಿಯ ಸದಸ್ಯರಾಗಿದ್ದು, ಮಂಡ್ಯ ಕ್ಷೇತ್ರದಿಂದ ಲೋಕಸಭೆ ಸದಸ್ಯರಾಗಿಯೂ ಆಯ್ಕೆಯಾಗಿದ್ದರು. 23 ಆಗಸ್ಟ್ 2013 ರಂದು ನಡೆದ ಲೋಕಸಭಾ ಉಪ-ಚುನಾವಣೆಯಲ್ಲಿ ಇವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
6/ 8
ರಮ್ಯಾ ಅವರು ನನಗೆ ಒಳ್ಳೆ ಸೋಲ್ ಮೇಟ್ ಸಿಕ್ರೆ ಮದುವೆ ಆಗ್ತೇನೆ ಎಂದಿದ್ದಾರೆ. ಅಲ್ಲದೇ ಮಹಿಳೆಯರು ಆರ್ಥಿಕವಾಗಿ ಸಬಲರಾಗಿರುವುದು ಮುಖ್ಯ. ಶಿಕ್ಷಣ ತುಂಬಾ ಮುಖ್ಯ. ನಿಮಗೆ ಇಷ್ಟ ಆದ್ರೆ ಮಾತ್ರ ಮದುವೆ ಆಗಿ. ಬೇರೆಯವರ ಒತ್ತಾಯಕ್ಕೆ ಯಾವತ್ತೂ ಮದುವೆ ಆಗಬಾರದು ಎಂದು ರಮ್ಯಾ ಹೇಳಿದ್ದಾರೆ.
7/ 8
8 ವರ್ಷಗಳ ಬಳಿಕ ರಮ್ಯಾ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಉತ್ತರಕಾಂಡ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ. ರಮ್ಯಾ ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯ್ತಾ ಇದ್ದಾರೆ.
8/ 8
ರಮ್ಯಾ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ನಿರ್ಮಾಕಿಯಾಗಿದ್ದಾರೆ. ಆಪಲ್ ಬಾಕ್ಸ್ ಸ್ಟುಡಿಯೋಸ್ ಎಂಬ ನಿರ್ಮಾಣ ಸಂಸ್ಥೆ ಶುರು ಮಾಡಿದ್ದಾರೆ. ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.