ರಕ್ಷಿತಾ ಪ್ರೇಮ್ ಕನ್ನಡ, ತಮಿಳು ಮತ್ತು ತೆಲಗು ಚಿತ್ರರಂಗದ ಹಲವು ಚಿತ್ರಗಳಲ್ಲಿ ನಟಿಸಿರುವ ಖ್ಯಾತ ನಟಿ. ಇವರು 1984 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ್ದಾರೆ.
2/ 8
ಇವರ ಖ್ಯಾತ ಛಾಯಾಗ್ರಾಹಕ ಬಿ.ಸಿ.ಗೌರಿಶಂಕರ್ ಮತ್ತು ನಟಿ ಮಮತಾರಾವ್ ರವರ ಪುತ್ರಿ. 2007 ರಲ್ಲಿ ನಿರ್ದೇಶಕ ಪ್ರೇಮ್‍ರನ್ನು ವಿವಾಹವಾದ ರಕ್ಷಿತಾರಿಗೆ ಒಬ್ಬ ಪುತ್ರನಿದ್ದಾನೆ.
3/ 8
2002 ರಲ್ಲಿ ತೆರೆಕಂಡ ಪುನೀತ್ ರಾಜಕುಮಾರ್ ಅಭಿನಯದ `ಅಪ್ಪು' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು.ನಂತರ ಈ ಚಿತ್ರದ ತೆಲುಗು ಮತ್ತು ತಮಿಳು ರಿಮೇಕ್‍ನಲ್ಲಿ ಕೂಡ ನಾಯಕಿಯಾಗಿ ನಟಿಸಿದರು. ಕಲಾಸಿಪಾಳ್ಯ ಚಿತ್ರ ರಕ್ಷಿತಾ ಸಿನಿ ಕರಿಯರ್ಗೆ ಬಿಗ್‍ಬ್ರೇಕ್ ನೀಡಿತು.
4/ 8
ಕನ್ನಡದಲ್ಲಿ ಪುನೀತ್, ಸುದೀಪ್, ಶಿವರಾಜಕುಮಾರ್, ಉಪೇಂದ್ರ, ಶ್ರೀಮುರಳಿ ಮುಂತಾದ ನಟರೊಂದಿಗೆ ನಟಿಸಿದ ರಕ್ಷಿತಾ ತೆಲುಗಿನಲ್ಲಿ ಚಿರಂಜೀವಿ, ನಾಗಾರ್ಜುನ, ಮಹೇಶ್ ಬಾಬು, ರವಿತೇಜ, ಎನ್.ಟಿ.ಆರ್ ಮುಂತಾದ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.
5/ 8
ಪ್ರೇಮ್ ಜೊತೆ ವಿವಾಹವಾದ ನಂತರ ನಟನೆಗೆ ವಿರಾಮ ಹೇಳಿದ ರಕ್ಷಿತಾ ತಮ್ಮ ಹೋಮ್ ಬ್ಯಾನರ್‍ನಲ್ಲಿ ಚಿತ್ರ ನಿರ್ಮಾಣಕ್ಕಿಳಿದರು. ಶಿವರಾಜಕುಮಾರ್‍ರವರ ನೂರನೇ ಚಿತ್ರ ಜೋಗಯ್ಯವನ್ನು ನಿರ್ಮಾಣವನ್ನು `ಪ್ರೇಮ್ ಪಿಕ್ಚರ್ಸ್' ಅಡಿಯಲ್ಲಿ ನಿರ್ಮಾಣ ಮಾಡಿದರು.
6/ 8
ಇದೇ ಬ್ಯಾನರ್‍ನಲ್ಲಿ ಪ್ರೇಮ್ ನಟನೆಯ `ಡಿ.ಕೆ' ಚಿತ್ರವನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ರಕ್ಷಿತಾ ಅವರು ತಮ್ಮನಿಗಾಗಿ ಏಕ್ ಲವ್ ಯಾ ಸಿನಿಮಾ ಮಾಡಿದ್ದರು.
7/ 8
ಕಿರುತೆರೆಯಲ್ಲಿ ನಿರೂಪಕಿಯಾಗಿ `ಸ್ವಯಂವರ' ಕಾರ್ಯಕ್ರಮ ನಿರೂಪಣೆ ಮಾಡಿರುವ ರಕ್ಷಿತಾ ಹಲವು ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದಾರೆ. ಇವುಗಳಲ್ಲಿ ಜೀ ಕನ್ನಡದ `ಕಾಮಿಡಿ ಕಿಲಾಡಿಗಳು' ತುಂಬಾ ಪ್ರಸಿದ್ಧವಾಗಿದೆ.
8/ 8
2012 ರಲ್ಲಿ ಶ್ರೀರಾಮಲು ನೇತೃತ್ವದ `ಬಿ.ಎಸ್.ಆರ್. ಕಾಂಗ್ರಸ್' ಸದಸ್ಯೆಯಾಗಿದ್ದ ರಕ್ಷಿತಾ ಕೆಲವು ಭಿನ್ನಾಭಿಪ್ರಾಯಗಳಿಂದ ಪಕ್ಷ ತೊರೆದು 2013 ರಲ್ಲಿ ಜೆಡಿಎಸ್ ಪಕ್ಷ ಸೇರಿದರು. ನಂತರ 2014 ರಲ್ಲಿ ಬಿಜೆಪಿ ಸೇರಿದರು.